ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ ಕರ್ನಾಟಕ: ಅಚಾತುರ್ಯ, ಅವಿವೇಕತನ, ಅಕ್ರಮ

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂದ ಗತಿಯಲ್ಲಿ ಮತದಾನ ನಡೆಯುತ್ತಿದೆ. ಮಲಗಿರುವ ಮತದಾರರು ಮೈಮುರಿದು ಎದ್ದು ಬಂದು ಮತ ಹಾಕುವುದು ಒಳಿತು.

ರಾಜಧಾನಿ ಬೆಂಗಳೂರಿನಲ್ಲಂತೂ ಸೋಂಭೇರಿ ಮತದಾರರು ತಾಚಿ ಮಾಡಿಬಿಟ್ಟಿದ್ದಾರೆ ಅನ್ನಿಸುತ್ತಿದೆ. ಇದು ನಿಜಕ್ಕೂ ಅವಿವೇಕತನದ ಪರಮಾವಧಿ. ಇಡೀ ಪ್ರಪಂಚದ ಬಗ್ಗೆ ಮಾತನಾಡುವ ಮಂದಿ ಮೊದಲು ವೋಟ್ ಮಾಡಿ ಸೈ ಅನ್ನಿಸಿಕೊಳ್ಳಲಿ ಎಂಬ ಮಾತುಗಳು ತೇಲಿಬರುತ್ತಿವೆ.

ಈ ಮಧ್ಯೆ ರಾಜ್ಯದಲ್ಲಿ ಅಲ್ಲಲ್ಲಿ ಕೆಲ ಅಚಾತುರ್ಯಗಳು, ಅವಿವೇಕತನಗಳು, ಅಕ್ರಮಗಳು, ಅಹಿತಕರ, ಅಸಹ್ಯಕರ ಅನಪೇಕ್ಷಿತ ಪ್ರಸಂಗಗಳು ನಡೆಯುತ್ತಿವೆ. ಕೆಲವೆಲ್ಲಾ ತೀರಾ ಕ್ಷುಲ್ಲಕವೆನಿಸಿದರೆ ಕೆಲವು ಘಟನೆಗಳನ್ನು ನೋಡಿದಾಗ ಮೈ ಉರಿಯುವುದು ಸಹಜ. ಸಂಜೆಯ ವೇಳೆಗೆ ಇನ್ನೂ ಎನ್ನಷ್ಟು ಅನಪೇಕ್ಷಿತ ಪ್ರಸಂಗಗಳು ನಡೆಯುತ್ತವೋ? ಕೆಲವು ಸ್ಯಾಂಪಲ್ ಚಿತ್ರಗಳು ಹೀಗಿವೆ.

ಬಿವಿ ನಾಯಕ್ ಗಿಂತ ನಾನೂ ಏನ್ ಕಮ್ಮಿಯಿಲ್ಲ: ಶಿವನಗೌಡ

ಬಿವಿ ನಾಯಕ್ ಗಿಂತ ನಾನೂ ಏನ್ ಕಮ್ಮಿಯಿಲ್ಲ: ಶಿವನಗೌಡ

ಚುನಾವಣಾ ಪ್ರಚಾರ ಭರಾಟೆಯಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡಿದ ರಾಯಚೂರು ಅಭ್ಯರ್ಥಿಗಳಾದ ಬಿವಿ ನಾಯಕ್ ಮತ್ತು ಶಿವನಗೌಡ ಎಂಬ ಮಾವ-ಅಳಿಯಂದಿರು ಮತದಾನ ಮುಗಿದ ನಂತರವೂ ಜಿದ್ದಾಜಿದ್ದಿ ಮುಂದುವರಿಸಿದ್ದಾರೆ.
ನಾಯಕ್ ಗಿಂತ ನಾನೇನೂ ಕಮ್ಮಿ ಎಂದು ತಾವೂ ಸಹ ಬಿಜೆಪಿಗೆ ಮತ ಹಾಕಿರುವುದನ್ನು (ಇವಿಎಂ ಯಂತ್ರದಲ್ಲಿ) ಸೆರೆ ಹಿಡಿದು ಫೇಸ್ ಬುಕ್ ಗೆ ಹಾಕಿ ಅವಿವೇಕತನ ಮೆರೆದಿದ್ದಾರೆ.

ಮತ ಕರ್ನಾಟಕ: ಅಚಾತುರ್ಯ, ಅವಿವೇಕತನ, ಅಕ್ರಮ

ಮತ ಕರ್ನಾಟಕ: ಅಚಾತುರ್ಯ, ಅವಿವೇಕತನ, ಅಕ್ರಮ

ಜೆಡಿಎಸ್ ಪಕ್ಷದ ಕಟ್ಟರ್ ಅಭಿಮಾನಿಯ ಅವಿವೇಕತನ

ಮತ ಕರ್ನಾಟಕ: ಅಚಾತುರ್ಯ, ಅವಿವೇಕತನ, ಅಕ್ರಮ

ಮತ ಕರ್ನಾಟಕ: ಅಚಾತುರ್ಯ, ಅವಿವೇಕತನ, ಅಕ್ರಮ

ರಾಯಚೂರು ಕಾಂಗ್ರೆಸ್ ಅಭ್ಯರ್ಥಿ ಬಿವಿ ನಾಯ್ಕ್ ಅವರ ದುಸ್ಸಾಹದ ಸ್ಯಾಂಪಲ್ ಇದು.

ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅಚಾತುರ್ಯ

ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅಚಾತುರ್ಯ

ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅವರ ಅಚಾತುರ್ಯ. ಇಡೀ ಕುಟುಂಬದವರು ಎಡಗೈ ತೋರ್ಬೆರಳಿಗೆ ಮಸಿ ಹಾಕಿಸಿಕೊಂಡಿದ್ದಾರೆ.

ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅಚಾತುರ್ಯ

ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅಚಾತುರ್ಯ

ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅವರ ಅಚಾತುರ್ಯ. ಇಡೀ ಕುಟುಂಬದವರು ಎಡಗೈ ತೋರ್ಬೆರಳಿಗೆ ಮಸಿ ಹಾಕಿಸಿಕೊಂಡಿದ್ದಾರೆ.

English summary
Lok Sabha Election 2014 Phase 5 polling in Karnataka- April 17. Polling in Karnataka is under way. In the mean while number of malpractices reported. A pictorial look is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X