ಕಾವೇರಿ ಹೋರಾಟ, ಮಂಗಳವಾರ ಏನಾಯ್ತು?

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 13 : ಬೆಂಗಳೂರು ನಗರದಲ್ಲಿ ಬುಧವಾರ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

* ಕಾವೇರಿ ಹೋರಾಟಕ್ಕೆ ಮತ್ತೊಬ್ಬರು ಬಲಿಯಾಗಿದ್ದಾರೆ. ಲಾಠಿ ಚಾರ್ಜ್ ವೇಳೆ ಕಟ್ಟಡದಿಂದ ಬಿದ್ದಿದ್ದ ಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ.

ಸೋಮವಾರ ರಾತ್ರಿ ಸುಂಕದಕಟ್ಟೆ ಬಳಿ ಗಲಭೆ ನಡೆದಾಗ ಪೊಲೀಸರು ಗುಂಪನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದರು. ಈ ಸಂದರ್ಭದಲ್ಲಿ ಕಟ್ಟಡದಿಂದ ಬಿದ್ದು ಕುಮಾರ್ ಗಾಯಗೊಂಡಿದ್ದರು. ಕಟ್ಟಡದಿಂದ ಬಿದ್ದ ರಭಸಕ್ಕೆ ಅವರ ಬೆನ್ನುಮೂಳೆ ಮುರಿದಿತ್ತು ಮತ್ತು ಗಂಭೀರವಾಗಿ ಗಾಯಗೊಂಡಿದ್ದರು.

ಸೋಮವಾರ ಸಂಜೆ ನಡೆದ ಗಲಭೆ ವೇಳೆಗೆ ಉದ್ರಿಕ್ತ ಜನರನ್ನು ಚೆದುರಿಸಲು ಪೊಲೀಸರು ಗುಂಡು ಹಾರಿಸಿದಾಗ ತುಮಕೂರು ಜಿಲ್ಲೆಯ ಉಮೇಶ್ ಸಾವನ್ನಪ್ಪಿದ್ದರು.[ಉಮೇಶ್ ಕುಟುಂಬಕ್ಕೆ ಪರಿಹಾರ 10 ಲಕ್ಷ ರು.ಗೆ ಏರಿಕೆ]

* ಸೋಮವಾರ ಅರ್ಧ ಸುಟ್ಟಿದ್ದ ಎಸ್‌ಆರ್‌ಎಸ್ ಬಸ್ಸಿಗೆ ಟಿಂಬರ್ ಯಾರ್ಡ್‌ ಲೇಔಟ್‌ನಲ್ಲಿ ಇಂದು ಪುನಃ ಬೆಂಕಿ ಹಚ್ಚಲಾಗಿದೆ.

* ಹೆಗ್ಗನಹಳ್ಳಿಯಲ್ಲಿ ಸೋಮವಾರ ನಡೆದ ಗಲಭೆಗೆ ಸಂಬಂಧಿಸಿದಂತೆ 30 ಜನರನ್ನು ಬಂಧಸಲಾಗಿದೆ.

* ಹಿರಿಯ ಕಾಂಗ್ರೆಸ್ ನಾಯಕರ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ಜನರು ಶಾಂತಿ ಕಾಪಾಡಬೇಕು, ಕಾನೂನು ಕೈಗೆ ತೆಗೆದುಕೊಳ್ಳಬಾರದು' ಎಂದು ಮನವಿ ಮಾಡಿದರು.[ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ]

bengaluru

* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಹಲವು ಪ್ರದೇಶಗಳಲ್ಲಿ ಬಸ್ ಸೇವೆಯನ್ನು ಆರಂಭಿಸಿದೆ.

ಹಿಂದಿನ ಸುದ್ದಿ : ಬೆಂಗಳೂರಿನಲ್ಲಿ ಕಾವೇರಿ ಹೋರಾಟದ ಕಿಚ್ಚು ಹಿಂಸಾರೂಪಕ್ಕೆ ತಿರುಗಿದೆ. ಸೋಮವಾರ ನಡೆದ ಪ್ರತಿಭಟನೆಯ ಕಾವು ಇನ್ನೂ ಆರಿಲ್ಲ. ಪೊಲೀಸರು ನಡೆಸಿದ ಗೋಲಿಬಾರ್‌ಗೆ ಯುವಕ ಬಲಿಯಾಗಿದ್ದಾನೆ. ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆಯ ನಂತರ ಬೆಂಗಳೂರಿನಲ್ಲಿ ತಮಿಳುನಾಡಿನ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಬೆಂಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿದೆ. ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.[ಕಾವೇರಿದ ವಿವಾದ : ಬೆಂಗಳೂರಿನ 16 ಪ್ರದೇಶಗಳಲ್ಲಿ ಕರ್ಫ್ಯೂ]

ಕರ್ಪ್ಯೂ ಜಾರಿಯಲ್ಲಿರುವ ಪ್ರದೇಶದಲ್ಲಿ ಆಂಬ್ಯುಲೆನ್ಸ್, ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ವಾಹನಗಳು ಸಂಚಾರ ನಡೆಸುವಂತಿಲ್ಲ. ಗಲಭೆ ಮಾಡುವವರ ವಿರುದ್ಧ ಕಂಡಲ್ಲಿ ಗುಂಡು ಹಾರಿಸಲು ಆದೇಶ ನೀಡಲಾಗಿದೆ. ಕೇಂದ್ರ ಸರ್ಕಾರ ಭದ್ರತೆಗಾಗಿ ಯೋಧರರನ್ನು ಕಳಿಸುತ್ತಿದೆ.[5 ಲಕ್ಷ ರು. ಪರಿಹಾರ ತಿರಸ್ಕರಿಸಿದ ಉಮೇಶ್ ಕುಟುಂಬ]

* ಮೆಟ್ರೋ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಮಾಲ್‌ಗಳು, ಹೋಟೆಲ್, ಪೆಟ್ರೋಲ್ ಬಂಕ್‌ ಬಂದ್
* ಭದ್ರತೆಗಾಗಿ 15 ಸಾವಿರ ಪೊಲೀಸ್, 270 ಹೊಯ್ಸಳ ವಾಹನ, ಕೆಎಸ್ಆರ್‌ಪಿ ಪಡೆಗಳನ್ನು ನಿಯೋಜಿಸಿದೆ

mall

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Live updates : Cauvery protest turned into violent Bengaluru. One killed in riots. Curfew imposed in the following 16 police station limits.
Please Wait while comments are loading...