ಬೆಂಗಳೂರಲ್ಲಿ ಸೆಕೆಯ ಪ್ರಮಾಣದಲ್ಲಿ ಕೊಂಚ ಇಳಿಕೆ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 08: ದಕ್ಷಿಣ ಒಳನಾಡಿನಲ್ಲಿ ಕಂಡುಬಂದಿರುವ ವಾಯುಭಾರ ಕುಸಿತದಿಂದ ನಗರದ ಗರಿಷ್ಠ ತಾಪಮಾನ ಒಂದು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ.

ಇದರಿಂದ ಒಂದು ವಾರದಿಂದ ಇದ್ದ ಸೆಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮಾರ್ಚ್ ಆರಂಭದಿಂದಲೇ ತಾಪಮಾನ ಹೆಚ್ಚಿದ್ದರಿಂದ ಸೆಕೆ ಅಧಿಕವಾಗಿತ್ತು. ಬುಧವಾರ ಮತ್ತು ಗುರುವಾರ ಸೆಕೆ ಸ್ವಲ್ಪ ಕಡಿಮೆಯಾಗಿದ್ದು, ಇನ್ನೂ ಒಂದು ಅಥವಾ ಎರಡು ದಿನ ಇದೇ ಹವಾಮಾನ ಮುಂದುವರೆಯಲಿದೆ.

Little dip in Bengaluru Temperature

ಈ ಬದಲಾವಣೆಯ ನಗರದ ಹವಾಮಾನದ ಮೇಲೆ ಹೆಚ್ಚೇನೂ ಪರಿಣಾಮ ಬೀರಿಲ್ಲ. ಆದರೆ 34 ಡಿಗ್ರಿ ಸೆಲ್ಸಿಯಸ್ ಇದ್ದ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಗೆ ಬಂದಿದೆ. ಇನ್ನೂ ಒಂದು ದಿನ ಇದೇ ರೀತಿ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಗುರುವಾರದ ಮಾಹಿತಿಯಂತೆ ನಗರದ ಕೇಂದ್ರ ಭಾಗದಲ್ಲಿ 33.5ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್32.2 ಡಿಗ್ರಿ ಸೆಲ್ಸಿಯಸ್, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಚಳಿ ಕಳಚಿ ಬೇಸಿಗೆಯತ್ತ ಹೆಜ್ಜೆ: ತಾಪಮಾನ ಹೆಚ್ಚಳ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As depression in South interior Karnataka has caused little dip in temperature in Bengaluru city. The city witnessed declined on degree celsius of Temperature than February last week.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ