ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಪೌರಕಾರ್ಮಿಕರಿಗೆ ಅಕ್ಷರಾಭ್ಯಾಸ

|
Google Oneindia Kannada News

ಬೆಂಗಳೂರು, ಮಾರ್ಚ್ 07: ಕಸ ವಿವೇವಾರಿ ಮಾಡುವ ಪೌರಕಾರ್ಮಿಕರು ಕಸ ಎತ್ತುವ ಕೈಯಲ್ಲಿ ಪೆನ್ನು, ಪೇಪರ್ ಹಿಡಿದಿದ್ದಾರೆ. ಯಾಕೆ ಅಂತೀರಾ ಪೌರಕಾರ್ಮಿಕರಿಗೆ ಖಾತೆ ತೆಗೆಯುವ ಸಲುವಾಗಿ.

ಕಸ ವಿಲೇವಾರಿ ಗುತ್ತಿಗೆದಾರರಿಂದ ಸಂಬಳದ ವಿಷಯವಾಗಿ ಪೌರಕಾರ್ಮಿಕರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ವೇತನ ನೇರ ಪಾವತಿ ಯೋಜನೆ ಜಾರಿಗೆ ತಂದು ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಈಗ ಪೌರಕಾರ್ಮಿಕರಲ್ಲಿ ಅಕ್ಷರ ಜ್ಞಾನ ಮೂಡಿಸಲು ಮುಂದಾಗಿದೆ.

ಬೆಂಗಳೂರಿನ ಎಲ್ಲಾ ಬೀದಿಗೂ ಎಲ್‌ಇಡಿ ಬೆಳಕು!ಬೆಂಗಳೂರಿನ ಎಲ್ಲಾ ಬೀದಿಗೂ ಎಲ್‌ಇಡಿ ಬೆಳಕು!

ನಗರದ 198 ವಾರ್ಡ್ ಗಳಲ್ಲೂ ಪೌರಕಾರ್ಮಿಕರಿಗೆ ಬ್ಯಾಂಕ್ ಖಾತೆ ತೆರೆಯುವ ಕೆಲಸ ಚುರುಕುಗೊಂಡಿದೆ. ಇದಕ್ಕಾಗಿ ಕೆನರಾ ಬ್ಯಾಂಕ್ ಸೇರಿ ಹಲವು ಬ್ಯಾಂಕ್ ಗಳು ಒಪ್ಪಂದ ಮಾಡಿಕೊಂಡಿದ್ದು, ಪ್ರತಿ ಪೌರಕಾರ್ಮಿಕರು ವಯಕ್ತಿಕ ಉಳಿತಾಯ ಖಾತೆ ತೆರೆಯುತ್ತಿದ್ದಾರೆ.

Literacy in Poura Karmikas: New initiative by BBMP

ಖಾತೆ ತೆರೆಯಲು ವಯಕ್ತಿಕ ಸಹಿ ಕಡ್ಡಾಯ ಮಾಡಿರುವುದರಿಂದ ಅಕ್ಷರ ಜ್ಞಾನವೇ ಇಲ್ಲದ ಪೌರಕಾರ್ಮಿಕರು ತಮ್ಮ ಹೆಸರು ಕಲಿಯುವ ಅನಿವಾರ್ಯತೆಯಿಂದ ಅಕ್ಷರ ಕಲಿಕೆ ಆರಂಭಿಸಿದ್ದಾರೆ. ಶಾಲೆಯ ಮುಖವನ್ನೇ ಕಾಣದ ಕೆಲವು ಪೌರಕಾರ್ಮಿಕರು ದಿನನಿತ್ಯ ಸ್ವಚ್ಛತಾ ಕಾರ್ಯದೊಂದಿಗೆ ಇದೀಗ ಪೆನ್ನು, ಪೇಪರ್ ಹಿಡಿದುಕೊಂಡು ಓಡಾಡುತ್ತಿದ್ದಾರೆ.

ಆರೋಗ್ಯ ನಿರೀಕ್ಷಕರೇ ಶಿಕ್ಷಕರು: ಪೌರಕಾರ್ಮಿಕೊಂದಿಗೆ ನಿರಂತರ ಒಡನಾಟವಿರುವ ಆಯಾ ವಾರ್ಡ್ ನ ಆರೋಗ್ಯ ನಿರೀಕ್ಷರೇ ಇದೀಗ ಶಿಕ್ಷಕರ ಪಾತ್ರ ನಿಭಾಯಿಸುತ್ತಿದ್ದಾರೆ. ಮೊದಲಿಗೆ ಪೌರಕಾರ್ಮಿಕರ ಹೆಸರುಗಳನ್ನು ತಿದ್ದಿಸುವ ಕೆಲಸ ಆರಂಭಿಸಿದ್ದು, ಅದರೊಂದಿಗೆ ಕನ್ನಡ ವರ್ಣಮಾಲೆಗಳ ಪರಿಚಯ ಮಾಡಿಸಿಕೊಡುತ್ತಿದ್ದಾರೆ.

English summary
While Poura Karmikasa in BBMP getting their salaries through bank account they did't konow how to open their savings account. Now health inspectors in BBMP have taken an initiative to educate Poura karmikas with literacy that at least they sign their name in bank account forms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X