ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಬಂದ್ ಆಗಲಿವೆಯೇ ಬಾರ್‌ಗಳು?

By Manjunatha
|
Google Oneindia Kannada News

Recommended Video

ಸಿದ್ಧರಾಮಯ್ಯ ಹೊಸ ಮಾಸ್ಟರ್ ಪ್ಲಾನ್ | ಕರ್ನಾಟಕದಲ್ಲಿ ಬಾರ್ ಗಳು ಬಂದ್ | Oneindia Kannada

ಬೆಂಗಳೂರು, ನವೆಂಬರ್ 18 : ಮುಂಬರುವ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಅವರು ಹೊಸ ಪ್ಲಾನ್ ಮಾಡಿದ್ದು ಬಿಹಾರ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಮದ್ಯ ನಿಷೇಧ ಮಾಡುವ ಕುರಿತು ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

ಕರ್ನಾಟಕದ 2 ಸಾವಿರಕ್ಕೂ ಅಧಿಕ ಮದ್ಯದಂಗಡಿಗಳು ಬಂದ್?ಕರ್ನಾಟಕದ 2 ಸಾವಿರಕ್ಕೂ ಅಧಿಕ ಮದ್ಯದಂಗಡಿಗಳು ಬಂದ್?

ಬಿಹಾರದಲ್ಲಿ ಮದ್ಯ ನಿಷೇಧ ಮಾಡಿದ್ದು ಆರ್ಥಿಕವಾಗಿ ರಾಜ್ಯಕ್ಕೆ ನಷ್ಟವುಂಟುಮಾಡಿದರೂ ಸಹ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಜ್ಯದ ಜನರಿಂದ ಉತ್ತಮ ಪ್ರಶಂಸೆ ಕೇಳಿ ಬಂದಿತ್ತು. ಅದರಲ್ಲಿಯೂ ಬಿಹಾರದ ಮಹಿಳೆಯರಿಂದ ನಿತೀಶ್ ಅವರ ನಿರ್ಧಾರಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು.

Liquor ban in Karnataka?

ಮದ್ಯ ನಿಷೇಧ ಯೋಜನೆ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ವರ್ಚಸ್ಸು ಏರಲು ಸಹಕಾರಿಯಾಗಿತ್ತು. ಹೀಗಾಗಿ ಸಿದ್ದರಾಮಯ್ಯನವರೂ ಮದ್ಯ ನಿಷೇಧವನ್ನು ರಾಜ್ಯದಲ್ಲಿ ಜಾರಿ ತರಲು ಉದ್ದೇಶಿಸಿದ್ದು ಮಹಿಳಾ ಮತದಾರರನ್ನು ಸೆಳೆಯುವ ಯೋಚನೆ ಮಾಡಿದ್ದಾರೆ.

ಹಿಂದೆ ರಾಜ್ಯದ ಸಮಿತಿಯೊಂದು ಬಿಹಾರಕ್ಕೆ ತೆರಳಿ ಮದ್ಯ ನಿಷೇದದ ಬಗ್ಗೆ ಅಧ್ಯಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ಆಗ ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಈಗ ಚುನಾವಣೆ ಸಮೀಪವಾಗುತ್ತಿದ್ದಂತೆ ಯೋಜನೆ ಜಾರಿ ತರಲು ಇಚ್ಛಿಸಿದ್ದಾರೆ.

ಚುನಾವಣೆ ಸಮೀಪದಲ್ಲಿದ್ದು, ಪ್ರತಿಪಕ್ಷಗಳಿಗೆ ಚುನಾವಣೆಯಲ್ಲಿ ಮಣ್ಣುಮುಕ್ಕಿಸಲೆಂದು ಈ ಜನಪ್ರಿಯ ಯೋಜನೆಗೆ ಸರ್ಕಾರ ಕೈ ಹಾಕಿದೆ. ಮದ್ಯ ನಿಷೇದದಂತಹಾ ಉಚ್ಚಆದರ್ಶದ ನಿಯಮ ಜಾರಿ ಮಾಡಿದರೆ ಮತದಾರರು ಕಾಂಗ್ರೆಸ್ ನತ್ತ ಒಲಿಯುತ್ತಾರೆ. ಅದರಲ್ಲಿಯೂ ಮಹಿಳಾ ಮತದಾರರು ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬ ಚಿಂತನೆಯನ್ನು ಸಿದ್ದರಾಮಯ್ಯ ಅವರು ನಡೆಸಿದ್ದಾರೆ.

ಮದ್ಯ ನಿಷೇಧ ಜಾರಿಯಾದರೆ 18000 ಕೋಟಿ ಆದಾಯ ರಾಜ್ಯಕ್ಕೆ ನಷ್ಟವಾಗುತ್ತದೆ ಹಾಗಾಗಿ ಮದ್ಯದ ಬದಲಿಗೆ ಸರ್ಕಾರವೇ ದೇಸಿ ನೀರಾವನ್ನು ಪ್ರಮೋಟ್ ಮಾಡುವ ಯೋಜನೆ ರೂಪಿಸಿದೆ. ಟೆಟ್ರಾ ಪ್ಯಾಕ್ ಗಳನ್ನು ನೀರಾವನ್ನು ಮಾರಲು ಯೋಜನೆ ರೂಪಿಸುತ್ತಿದೆ.

English summary
CM Siddaramaiah thinking of banning liquor in Karnataka. ahead of elections banning liquor may help congress. from banning liquor karnataka will loose 1800 crore income
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X