ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಲಿಂಗಾಯತ 'ಧರ್ಮ' ಇದು ಕೈ ಪಕ್ಷದ ಚುನಾವಣೆ 'ಮರ್ಮ'

By ರವೀಂದ್ರ ಕೊಟಕಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರಿನ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆದ ಲಿಂಗಾಯತ ಧರ್ಮ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಐದು ಪ್ರಮುಖ ನಿರ್ಣಯಗಳನ್ನು ಘೋಷಿಸಿದ್ದಾರೆ.

  ಲಿಂಗಾಯತ vs ವೀರಶೈವ : ಎರಡೂ ಅಪ್ಪಟ ಜಂಗಮ ತತ್ವ

  ಡಿಸೆಂಬರ್ ಅಂತ್ಯದೊಳಗೆ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಲುಮುಖ್ಯಮಂತ್ರಿಯವರು ಶಿಫಾರಸು ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಸಮಾವೇಶದಲ್ಲಿ ಸಚಿವ ಎಂಬಿ ಪಾಟೀಲ್, ರಾಮಲಿಂಗಾರೆಡ್ಡಿ ಕೂಡಾ ಕಾಣಿಸಿಕೊಂಡಿದ್ದಾರೆ.

  ವೀರಶೈವ ಒಂದು ವ್ರತ, ಲಿಂಗಾಯತ ಸ್ವತಂತ್ರ ಧರ್ಮ!

  ಲಿಂಗಾಯತ ಹಾಗೂ ವೀರಶೈವ ಪ್ರತ್ಯೇಕ ಧರ್ಮ, ಹೊಸ ಧರ್ಮ ಸ್ಥಾಪನೆ ಸಲುವಾಗಿ ನಡೆದಿರುವ ಈ ಸಮಾವೇಶ, ಹೋರಾಟ, ಪ್ರತಿಭಟನೆಗಳು ಭಾರತೀಯ ಜನತಾಪಕ್ಷಕ್ಕೆ ಮುಳುವಾಗಲಿದ್ದು, ಆಡಳಿತಾರೂಢ ಕಾಂಗ್ರೆಸ್ ಕೈ ಹಿಡಿಯಲಿದೆ.. ಇಲ್ಲಿದೆ ಈ ಬಗ್ಗೆ ವಿಶ್ಲೇಷಣೆ...

  ವೀರಶೈವರು ಯಾರು? ಲಿಂಗಾಯತರು ಯಾರು?: ವಿಚಾರ ಮಂಥನ

  'ಅದು ಲಿಂಗಾಯಿತ ಸಮಾವೇಶಗಳಲ್ಲ ಸಾರ್, ನಿಜ ಹೇಳಬೇಕು ಅಂದರೆ ಅದು ಕಾಂಗ್ರೆಸ್ ಲಿಂಗಾಯಿತ ಸಮಾವೇಶಗಳು' ಅಂತ ನೇರವಾಗಿ ಹೇಳಿದ್ದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಗಿರೀಶ್ ಪಾಟೀಲ ಎಂಬ ಬೆಳಗಾವಿ ಕಡೆಯ ಹುಡುಗ.

  'ಒನ್ ಇಂಡಿಯಾ'ಕ್ಕಾಗಿ ಮಾತೆ ಮಹಾದೇವಿ ಸಂದರ್ಶನ

  ಅವನು ಮಾತು ಮುಂದುವರಿಸಿ 'ಮೊದಮೊದಲು ನಾವ್ ಕೂಡ ಉತ್ಸಾಹದಲ್ಲಿ ಸಮಾವೇಶಗಳಿಗೆ ಹೋಗುತ್ತಿದ್ವಿ. ನಮ್ ಸಮಾಜಕ್ಕೆ ಅಲ್ಪಸಂಖಾತ್ಯರ ಸ್ಥಾನಮಾನ ಸಿಕ್ಕರೆ ಇದರಿಂದ ನೌಕರಿ, ಶಿಕ್ಷಣದಲ್ಲಿ ಮೀಸಲಾತಿ ದೊರೆಯುತ್ತೆ ಅಂತ ನಂಬಿಯೇ ಹೋರಾಟಕ್ಕೆ ಮುಂದಾಗಿದ್ದು. ಆದರೆ, ಸಮಾವೇಶಗಳ ಒಳಮರ್ಮ ನಿಧಾನವಾಗಿ ಸಮಾಜಕ್ಕೆ ಅರ್ಥವಾಗುತ್ತಿದೆ. ಇದೆಲ್ಲಾ ಚುನಾವಣೆ ಗೀಮಕ್ ಅಷ್ಟೆ!' ಅಂತ ಕಡ್ಡಿ ಮುರಿದಂತೆ ಹೇಳಿದ ಆ ಯುವಕ....

  ಸಮಾಜದ ಒಳಿಗಾಗಿ ಒಂದು ಹೋರಾಟ ಅನಿವಾರ್ಯ

  ಸಮಾಜದ ಒಳಿಗಾಗಿ ಒಂದು ಹೋರಾಟ ಅನಿವಾರ್ಯ

  ಆರಂಭದಲ್ಲಿ ಲಿಂಗಾಯಿತ ಸಮುದಾಯದಲ್ಲಿ ಸಮಾಜದ ಒಳಿಗಾಗಿ ಒಂದು ಹೋರಾಟ ಅನಿವಾರ್ಯ ಎಂಬ ಭಾವನೆ ಮೂಡಿತ್ತು. ಲಿಂಗಾಯಿತ ಸಮುದಾಯ ಕೂಡ ಗುಜರಾತ್‍ನಲ್ಲಿ ಪಾಟಿದಾರರಂತೆ ಹೆಸರಿಗೆ ಮುಂದುವರಿದ ಜನಾಂಗವಾದರು, ಅದರೊಳಗೆ ಸಾಕಷ್ಟು ಬಡತನ, ನಿರುದ್ಯೋಗ ತಾಂಡವವಾಡುತ್ತಿದೆ. ನಮ್ಮ ದೇಶದಲ್ಲೋ ಅಲ್ಪಸಂಖಾತ್ಯರೆಂದರೆ ಸಾಕು, ಅವರು ನೇರವಾಗಿ ಸ್ವರ್ಗದಿಂದ ಧರೆಗಿಳಿದು ಬಂದವರು ಎಂಬಂತೆ ನೋಡಿಕೊಳ್ಳುವ ಪರಿಪಾಠವಿದೆ.

  ಮುಂದುವರಿದ ಸಮುದಾಯವೆಂಬ ಹಣೆಪಟ್ಟಿ

  ಮುಂದುವರಿದ ಸಮುದಾಯವೆಂಬ ಹಣೆಪಟ್ಟಿ

  ಹೀಗಾಗಿ ಸಹಜವಾಗಿ ಮುಂದುವರಿದ ಸಮುದಾಯವೆಂಬ ಹಣೆಪಟ್ಟಿ ಕಟ್ಟಿಕೊಂಡು ಬದುಕುವುದಕ್ಕಿಂತ ಅಲ್ಪಸಂಖ್ಯಾತರೆಂದು ಗುರ್ತಿಸಿಕೊಂಡರೆ ಸಹಜವಾಗಿ ಲಿಂಗಾಯಿತ ಸಮುದಾಯಕ್ಕೆ ಅರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಸಹಾಯವಾಗುತ್ತದೆಂದು ಎಂಬ ಭಾವನೆ ಸಾಮಾನ್ಯ ಲಿಂಗಾಯಿತರಲ್ಲಿ ಮೂಡಿದೇ ಅವರು ಪ್ರತ್ಯೇಕ ಧರ್ಮವಿಚಾರದಲ್ಲಿ ಹೋರಾಟದ ಹಾದಿಯನ್ನು ಹಿಡಿಯಲು ಕಾರಣವಾಗಿದ್ದು. ಇಲ್ಲಿಯವರಿಗೆ ಎಲ್ಲವೂ ಸರಿಯಾಗಿತ್ತು.

  ಲಿಂಗಾಯತ-ವೀರಶೈವ ಎರಡೂ ಒಂದೇ, ಮಹಾಸಭಾ ಒಮ್ಮತದ ನಿರ್ಣಯ

  ಸಿದ್ದರಾಮಯ್ಯನವರಿಗೆ ಸನ್ಮಾನ

  ಸಿದ್ದರಾಮಯ್ಯನವರಿಗೆ ಸನ್ಮಾನ

  ಸಿದ್ದರಾಮಯ್ಯನವರಿಗೆ ಸನ್ಮಾನ ಮಾಡಿದ ದಿನವೇ ಸಮಾಜದ ಗ್ರಹಗತಿ ತಿರಿಗಿತು. ಮುಖ್ಯಮಂತ್ರಿಗಳು ಲಿಂಗಾಯಿತಯರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದ ಮರುಕ್ಷಣವೇ ಒಳಪಂಗಡಗಳ ರಾಜಕೀಯ ಬೀದಿಗೆ ಬಿತ್ತು.

  ಮೊದಲನೆಯದಾಗಿ ವೀರಶೈವ ಪಂಚಾಧೀಶರ ವಿಷಯದಲ್ಲಿ ಸದಾ ಕಿಡಿಕಾಡುತ್ತಲ್ಲೇ ಬಂದಿರುವ ವಿರಕ್ತರು, ವೀರಶೈವರು ಹಿಂದೂಗಳು ನಾವು ಮಾತ್ರ ಅಪ್ಪಟ್ಟ ಲಿಂಗಾಯಿತರು, ಬಸವಣ್ಣ ಸ್ಥಾಪಸಿದ್ದೇ ಲಿಂಗಾಯಿತಧರ್ಮ ಅಂತೇಳಿ ಧರ್ಮಯುದ್ದಕ್ಕೆ ನಗಾರಿ ಬಾರಿಸಿದರು.

  ಲಿಂಗಾಯಿತ ಧರ್ಮ ಪ್ರಸ್ತಾಪ-ಕಾಂಗ್ರೆಸ್ ತಿರಸ್ಕಾರ

  ಲಿಂಗಾಯಿತ ಧರ್ಮ ಪ್ರಸ್ತಾಪ-ಕಾಂಗ್ರೆಸ್ ತಿರಸ್ಕಾರ

  ನಮ್ಮ ಶಿವನೇ ಬೇರೆ, ನಿಮ್ಮ ಶಿವನೇ ಬೇರೆ ಅಂದರು. ಇತ್ತೀಚಿಗೆ ಒಬ್ಬ ಖಾವಿಧಾರಿಯಂತೂ 'ಒಬ್ಬ ಅಪ್ಪ, ಐದು ಅಪ್ಪ'ರ ಕಥೆ ಹೇಳಿ ಅದನ್ನು ಸಾರ್ವಜನಿಕವಾಗಿ ಸಮರ್ಥಸಿಕೊಂಡಿದ್ದು ಕೂಡ ನೋಡಿದ್ದೇವೆ.

  ಲಿಂಗಾಯಿತ ಸಮುದಾಯ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕೆ ಹಲವು ದಶಕಗಳಿಂದ ಹೋರಾಟ ನಡೆಸಿಕೊಂಡು ಬಂದಿದೆ. ಹಿಂದೆ ಕೂಡ ವೀರಶೈವ-ಲಿಂಗಾಯಿತ ಧರ್ಮ ಪ್ರಸ್ತಾಪವನ್ನು ಕಾಂಗ್ರೆಸ್ ಸರ್ಕಾರವೇ ತಿರಸ್ಕರಿಸಿದೆ. ಈಗ ಮತ್ತೆ ಈಗ ಲಿಂಗಾಯಿತ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದಾರೆ.

  ಹೋರಾಟಗಳಲ್ಲಿ ಇದ್ದ ಮುಖಗಳು ಬೇರೆ

  ಹೋರಾಟಗಳಲ್ಲಿ ಇದ್ದ ಮುಖಗಳು ಬೇರೆ

  ವಾಸ್ತವವೆಂದರೆ ಹಿಂದೆ ಹೋರಾಟಗಳಲ್ಲಿ ಇದ್ದ ಮುಖಗಳು ಬೇರೆ, ಈಗ ವೇದಿಕೆಗಳಲ್ಲಿ ಮಿಂಚುತ್ತಿರುವ ಮುಖಗಳು ಬೇರೆ. ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಸಂವಿಧಾನವನ್ನು ಮೀರಿ, ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡು ಧರ್ಮಹೋರಾಟದಲ್ಲಿ ಭಾಗವಹಿಸುತ್ತಿದ್ದಾರೆ. ಇವರು ಮಾತನಾಡುವ ರೀತಿ ನೋಡಿದರೆ ಇವರು ಬರೀ ಲಿಂಗಾಯಿತರಿಂದ ಆಯ್ಕೆಯಾಗಿದ್ದು ಇವರು ಲಿಂಗಾಯಿತರಿಗೆ ಮಾತ್ರ ಮಂತ್ರಿಗಳಾಗಿರುವಂತೆ ಕಾಣುತ್ತದೆ.

  ಭಾವನಾತ್ಮಕವಾಗಿ ಒಡೆಯುವುದು ಕೈ ಉದ್ದೇಶ

  ಭಾವನಾತ್ಮಕವಾಗಿ ಒಡೆಯುವುದು ಕೈ ಉದ್ದೇಶ

  ಅಲ್ಲದೇ ಖಾವಿಧಾರಿಗಳು ವೀರಶೈವರನ್ನು ಟಾರ್ಗೆಟ್ ಮಾಡಿದರೆ, ಖಾದಿಧಾರಿಗಳು ಬಿಜೆಪಿನ ಅದರಲ್ಲೂ ವಿಶೇಷವಾಗಿ ಯಡಿಯೂರಪ್ಪನರವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದರ ಹಿಂದಿರುವ ಉದ್ದೇಶ ಸ್ಪಷ್ಟವಾಗುತ್ತಿದೆ, ಇವರು ಮುಖ್ಯ ಗುರಿ ಲಿಂಗಾಯಿತ ಸಮುದಾಯವನ್ನು ಭಾವನಾತ್ಮಕವಾಗಿ ಒಡೆಯುವುದು, ಕಾಂಗ್ರೆಸ್ ಪಕ್ಷಕ್ಕೆ ಇದರಿಂದ ಅನುಕೂಲ ಮಾಡಿಕೊಡುವುದೇ ಆಗಿದೆ.

  ನಿಜವಾಗಲೂ ಲಿಂಗಾಯಿತರಿಗೆ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಇಷ್ಟೆಲ್ಲಾ ಬೀದಿರಂಪ ಮಾಡಬೇಕಿರಲಿಲ್ಲ.

  ಸುಪ್ರೀಂಕೋರ್ಟ್‍ಗೆ ಹೋಗಬಹುದಿತ್ತು.

  ಸುಪ್ರೀಂಕೋರ್ಟ್‍ಗೆ ಹೋಗಬಹುದಿತ್ತು.

  ಸಿದ್ದರಾಮಯ್ಯನವರಿಗೆ ನೇರವಾಗಿ ಒಂದು ಮನವಿ ಕೊಟ್ಟಿದ್ದಾರೆ ಸಾಕು, ಉದಾರವಾದಿ ಮುಖ್ಯಮಂತ್ರಿಗಳು ಅದನ್ನು ಕೇಂದ್ರದ ಅಂಗಳಕ್ಕೆ ಹಾಕುತ್ತಿದ್ದರು. ಅಲ್ಲಿ ಅದರ ಭವಿಷ್ಯ ತೀರ್ಮಾನವಾಗುತ್ತಿತ್ತು. ಒಂದು ವೇಳೆ ಅಲ್ಲಿ ತಿರಸ್ಕೃತವಾಗಿದ್ದರೆ ಸುಪ್ರೀಂಕೋರ್ಟ್‍ಗೆ ಹೋಗಬಹುದಿತ್ತು.

  ವಾಸ್ತವದ ಅರಿವು ಈ ಹೋರಾಟಗಾರರಿಗೂ ಇದೇ, ರಾಮಕೃಷ್ಣ ಆಶ್ರಮ, ಆರ್ಯಸಮಾಜ, ಸ್ವಾಮಿ ನಾರಾಯಣ ಪಂಥದವರ ವಿಷಯದಲ್ಲಿ ಸುಪ್ರೀಂಕೋರ್ಟ್ ಯಾವ ತೀರ್ಪು ನೀಡಿತ್ತೋ ಅದೇ ತೀರ್ಪು ಇವರಿಗೂ ಅನ್ವಯಿಸುತ್ತದೆ ಅಂತ. ಅದಕ್ಕೆ ನ್ಯಾಯಲಯದ ಮೆಟ್ಟಲು ಇವರು ಹತ್ತುತ್ತಿಲ್ಲ. ಹತ್ತುವುದು ಇಲ್ಲ. ಆದರೆ ಇದೆಲ್ಲಾ ಬಿಟ್ಟು ವಾರಕ್ಕೊಂದು ಜಿಲ್ಲಾಕೇಂದ್ರದಲ್ಲಿ ಸಮಾವೇಶ ಮಾಡುವುದು ನಾಲಿಗೆ ಹರಿದುಬಿಟ್ಟು ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಉದ್ಧಾರಕ್ಕೆ ಹೊರತು ಲಿಂಗಾಯಿತರ ಉದ್ದಾರಕ್ಕೆ ಅಲ್ಲವೇ ಅಲ್ಲ.

  ಲಿಂಗಾಯಿತ-ವೀರಶೈವ ಮಧ್ಯೆ ಬೆಂಕಿ

  ಲಿಂಗಾಯಿತ-ವೀರಶೈವ ಮಧ್ಯೆ ಬೆಂಕಿ

  ಈ ಸಮಾವೇಶಗಳಿಗೆ ಹೋಗುತ್ತಿರುವವರು ಲಿಂಗಾಯಿತರೋ ಇಲ್ಲ ಸ್ವಾಮೀಜಿಗಳ ಭಕ್ತಗಣ ಪ್ಲಸ್ ಕಾಂಗ್ರೆಸ್ ಕಾರ್ಯಕರ್ತರ ಪಡೆಯೋ ಎಂಬ ಅನುಮಾನ ಕೂಡ ಬರುತ್ತಿದೆ. ಕಾಂಗ್ರೆಸ್ ಮಾತ್ರ ಲಿಂಗಾಯಿತ-ವೀರಶೈವ ಮಧ್ಯೆ ಬೆಂಕಿ ಹಚ್ಚಿ ನೆಮ್ಮದಿಯಾಗಿ ನೀರು ಕಾಯಿಸಿಕೊಳ್ಳುತ್ತಿದೆ. ಚುನಾವಣೆಯ ನಂತರ ಆ ಕಾದ ನೀರು ಯಾರ ಚರ್ಮವನ್ನು ಸುಡುತ್ತದೋ ನೋಡಬೇಕಿದೆ. ಒಟ್ಟಾರೆ, ಬಿಜೆಪಿಗೆ ಇದೆಲ್ಲವೂ ಭಾರಿ ಪಾಠ ಕಲಿಸುತ್ತಿದೆ. ಎಚ್ಚೆತ್ತುಕೊಳ್ಳದ ಬಿಎಸ್ವೈ ಬಣ ಬೆಸ್ತುಬೀಳುವ ಸಮಯ ಮುಂದೆ ಕಾದಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Lingayat is Separate Religion, Union government and Karnataka government should take decision on this by December says Maate Mahadevi. How this religion feud is bane to BJP, boon to Congress, here is explaner.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more