'ಒನ್ ಇಂಡಿಯಾ'ಕ್ಕಾಗಿ ಮಾತೆ ಮಹದೇವಿ ನೀಡಿದ ವಿಶೇಷ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 2: ಲಿಂಗಾಯತ ಧರ್ಮದ ಪ್ರತ್ಯೇಕ ಸ್ಥಾನಮಾನ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ವೀರಶೈವರ ಮಠಗಳ ವಿರುದ್ಧ ಲಿಂಗಾಯತರು, ಲಿಂಗಾಯತ ಮಠಗಳ ವಿರುದ್ಧ ವೀರಶೈವರು ಕಿಡಿ ಕಾರುತ್ತಿದ್ದು, ಇದೀಗ ಇಡೀ ಜಗಳ ಹಾದಿಬೀದಿಯ ರಂಪಾಟವಾಗಿದೆ. ಆಗಸ್ಟ್ 1ರಂದು ನಡೆದ ಪ್ರತಿಭಟನೆಗಳಂತೂ ನಾಗರಿಕ ಸಮಾಜ ತಲೆತಗ್ಗಿಸುವಂಥ ಮಟ್ಟಕ್ಕೂ ಇಳಿದಿವೆ.

ಬೆಂಗಳೂರು ಸೇರಿ, ಹಲವಾರು ಜಿಲ್ಲೆಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಪ್ರತಿಭಟನೆಗಳು ಬಿರುಸು ಪಡೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ, 'ಒನ್ ಇಂಡಿಯಾ' ನಡೆಸಿದ ಸಂದರ್ಶನದಲ್ಲಿ ಲಿಂಗಾಯತ ಧರ್ಮದ ಏಕೈಕ ಮಹಿಳಾ ಗುರುಗಳಾದ ಮಾತೆ ಮಹದೇವಿ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Ligayats should get separate religious status: Mathe Mahadevi

- ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ದಶಕಗಳ ಹಿಂದಿನಷ್ಟು ಹಳೆಯದ್ದು. ಆಗಿನಿಂದ ಈವರೆಗೆ ಅದು ಯಾಕೆ ಸಾಧ್ಯವಾಗಲಿಲ್ಲ?
ಇಂದಿರಾಗಾಂಧಿ ಕಾಲದಿಂದಲೂ ಪ್ರಯತ್ನ ಮಾಡಿದ್ದು ವೀರಶೈವ ಮಹಾಸಭಾ. ಮೂರು ಸಲ. ವೀರಶೈವ ಲಿಂಗಾಯತ ಪದಗಳನ್ನಿಟ್ಟುಕೊಂಡು ಹೋಗಿದ್ದರಿಂದ ಬೇಡಿಕೆ ನಿರಾಕರಿಸಲ್ಪಟ್ಟಿತು. ಲಿಂಗಾಯತ ಎಂಬ ಒಂದೇ ಪದವನ್ನು ಇಟ್ಟುಕೊಂಡು ಹೋದರೆ, ಆದೀತು. ಇಲ್ಲವಾದರೆ, ಸಾವಿರ ವರ್ಷಗಳಾದರೂ ಪ್ರತ್ಯೇಕ ಸ್ಥಾನಮಾನ ಸಿಗುವುದಿಲ್ಲ ಎಂಬುದು ನಮ್ಮ ನಿಲುವು.

ಹುಬ್ಬಳ್ಳಿ: ಮಾತೆ ಮಹಾದೇವಿ ವಿರುದ್ಧ ಮುಂದುವರೆದ ಪ್ರತಿಭಟನೆ

- ಲಿಂಗಾಯತ ಎಂಬ ಪದದ ಜತೆಗೆ ವೀರಶೈವ ಪದ ಬಳಕೆ ಬೇಡವೆಂದು ಆಗ್ರಹಿಸುತ್ತಿರುವುದೇಕೆ?
ವೀರಶೈವ ಎಂಬುದು ಭಾರತದಲ್ಲಿ ಇರುವ ಶಿವನನ್ನು ಆರಾಧಿಸುವ ಶೈವ ಧರ್ಮದ ಒಂದು ಪಂಥ ಅಷ್ಟೆ. ಆದರೆ, ಆ ವೀರಶೈವರು 12ನೇ ಶತಮಾನದಲ್ಲಿ ಲಿಂಗಾಯತರಾದ ನಂತರ, ಲಿಂಗಾಯತರೆಂದೇ ಕರೆದುಕೊಳ್ಳಬೇಕೆಂದರೇ ತಮ್ಮನ್ನು ಹಳೆಯ ಜಾತಿಯಿಂದ ಕರೆದುಕೊಳ್ಳುವುದು ಸರಿಯಲ್ಲ. ಬಣಜಿಗ ಲಿಂಗಾಯತರು, ಗೌಡ ಲಿಂಗಾಯತರು ಎಂದೆಲ್ಲಾ ಇದ್ದಾರೆ ನಿಜ. ಆದರೆ, ಒಟ್ಟಾರೆಯಾಗಿ ನಾವೆಲ್ಲಾ ಲಿಂಗಾಯತರು ಅಲ್ಲವೇ? ಹಾಗಾಗಿ, ವೀರಶೈವ ಲಿಂಗಾಯತರು ಎಂಬ ಪದ ಬಳಕೆ ಬೇಡ ಎಂಬುದು ನಮ್ಮ ನಿಲುವು.

ವೀರಶೈವರು ಯಾರು? ಲಿಂಗಾಯತರು ಯಾರು? (ಒಂದು ವಿಚಾರ ಮಂಥನ)

- ಹೆಸರಾಂತ ಸಂಶೋಧಕರಾದ ಚಿ.ಮೂ. ಅವರು ಬಸವಣ್ಣ ವೀರಶೈವನಾಗಿದ್ದಾರೆ ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರಲ್ಲ?
ಬಸವಣ್ಣ ಎಲ್ಲೂ ಹಾಗೆ ಹೇಳಿಲ್ಲ. 1454 ವಚನಗಳು- ಸಮಗ್ರ ವ್ಯಾಖ್ಯಾನ ಕೊಟ್ಟಿದ್ದೇನೆ. ಸಂಪೂರ್ಣ ವಚನ ಅಧ್ಯಯನ ಮಾಡಿದ್ದೇನೆ. ಅವರು ಹೇಳುವಂಥ ವಾಕ್ಯ ಎಲ್ಲೂ ಇಲ್ಲ.

- ಹಾಗಾದರೆ, ಚಿ.ಮೂ. ಹೇಳಿರುವುದು ಸುಳ್ಳೇ?
ನೋಡಿ, ಬಸವಣ್ಣನವರು ವಿವಿಧ ಜಾತಿಗಳಿಗೆ ಲಿಂಗಧಾರಣೆ ಮಾಡಿದಾಗ ಯಾವುದೇ ಮೇಲು ಕೀಳು ಭಾವವಿರಲಿಲ್ಲ. ಆದರೆ, ಪುರೋಹಿತಶಾಹಿ ವರ್ಗದವರು ಲಿಂಗಧಾರಣೆ ಪಡೆದ ನಂತರ, ಅವರು ಜಂಗಮ ಹಾಗೂ ಭಕ್ತರು ಎಂದು ಲಿಂಗಾಯತರನ್ನು ವರ್ಗೀಕರಿಸಿದರು. ಸಾಧನೆಯಿಂದ ಜಂಗಮ ಎಂಬ ಪಟ್ಟ ಬರಬೇಕೇ ಹೊರತು ಅದನ್ನೇ ಜಾತಿ ಮಾಡಿಕೊಂಡಿದ್ದು ಸರಿಯಲ್ಲ. ಬಸವಣ್ಣ ಹೇಳುವಂತೆ, ಹುಟ್ಟಿನಿಂದ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ. ಈ ತತ್ವಕ್ಕೆ ವಿರುದ್ಧವಾಗಿ ನಾವೇ ಶ್ರೇಷ್ಠ ಎಂದು ಹೇಳುತ್ತಾರೆ ಜಂಗಮರು. ಇದೇ ಸಮಸ್ಯೆಯಾಗಿದೆ.

ಲಿಂಗಾಯತ ಸ್ವತಂತ್ರ ಧರ್ಮ, ಬಯಲಾಯಿತು ಬಿಎಸ್ ವೈ ದ್ವಂದ್ವ ನಿಲುವು

- ಅಂದರೆ, ವಚನಗಳು ತಿದ್ದುಪಡಿ ಆಗಿವೆಯೆಂದು ನಿಮ್ಮ ಮಾತಿನ ಅರ್ಥವೇ?
ಬಸವಣ್ಣನವರ ವಚನಗಳನ್ನು ತಿದ್ದುಪಡಿ ಮಾಡಲಾಗಿಲ್ಲ. ಶಿವ ಶರಣರಾದ ಚನ್ನ ಮಲ್ಲಿಕಾರ್ಜುನ ಅವರ ವಚನಗಳಲ್ಲಿ ಭಾರೀ ತಿದ್ದುಪಡಿ ಮಾಡಲಾಗಿದೆ. ಹಾಗೆ, ತಿದ್ದುಪಡಿ ಮಾಡುವಾಗ ಬಸವ ಧರ್ಮದ ಸಿದ್ಧಾಂತಗಳಿಗೆ ವಿರುದ್ಧವಾದ ಅಂಶಗಳನ್ನು ಸೇರಿಸಿದ್ದಾರೆ.

- ಶ್ಯಾಮನೂರು ಶಿವಶಂಕರಪ್ಪ ಅವರು ಮಾತಾಜಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಹೇಳಿದ್ದಾರಲ್ಲ?
ಇಲ್ಲಿಯವರೆಗೆ ಎಲ್ಲಾ ಮಠಾಧಿಪತಿಗಳು ಎಲ್ಲರೂ ಮೌನವಾಗಿದ್ದರು. ನಾವು ನೇರವಾಗಿ ಸತ್ಯವನ್ನು ಹೊರಗೆ ತರಲೇಬೇಕು ಎಂದು ನಿರ್ಧರಿಸಿದ್ದೇವೆ. ಹಾಗಾಗಿ, ನಾವು ಈ ಬಗ್ಗೆ ನೇರವಾಗಿ, ದಿಟ್ಟವಾಗಿ ಹೇಳುತ್ತಿದ್ದೇವೆ. ಇದು ವೀರಶೈವ ಮಹಾಸಭೆಯ ಕೋಪಕ್ಕೆ ಕಾರಣವಾಗಿದೆ. ನಿಮಗೆ ತಿಳಿದಿರಲಿ, ನಾನೂ ಒಂದು ಕಾಲದಲ್ಲಿ ವೀರಶೈವ ಮಹಾಸಭೆಯ ಸದಸ್ಯಳೇ. ಆಗ ಅರಿವಿನ ಅಭಾವದಿಂದಾಗಿ ನಾನು ಅಲ್ಲಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ್ದೆ. ಆದರೆ, ಕಾಲ ಕಳೆದಂತೆ ವಚನಗಳನ್ನು ಹೆಚ್ಚೆಚ್ಚು ಅಭ್ಯಾಸಿಸುತ್ತಾ ಸಾಗಿದಾಗ, ಶೈವ ಸಂಸ್ಕೃತಿಗೂ, ಬಸವಣ್ಣನವರ ವಚನಗಳಿಗೂ ವ್ಯತ್ಯಾಸವಿದೆ ಎಂದು ತಿಳಿದು ನಾನು ಅದರಿಂದ ಹೊರಬಂದೆ.

'ಪ್ರತ್ಯೇಕ ಧರ್ಮ ಅಭಿಪ್ರಾಯ ಸಂಗ್ರಹಕ್ಕೆ ಮಂತ್ರಿಗಳನ್ನ ನೇಮಿಸಿಲ್ಲ'

Lakshmi Hebbalkar Gives Controversial Statement About Basavanna

- ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ನಿಮ್ಮ ಸಲಹೆಯೇನು?
ಸಿಎಂ ಸಿದ್ದರಾಮಯ್ಯನವರು ಒಮ್ಮತದಿಂದ ಬನ್ನಿ ಎಂದು ವೀರಶೈವರಿಗೂ, ಲಿಂಗಾಯತರಿಗೂ ಕರೆ ನೀಡಿದ್ದಾರೆ. ಆದರೆ, ಬಹುಮತ ನೋಡಬೇಕೇ ಹೊರತು ಒಮ್ಮತವನ್ನು ನಿರೀಕ್ಷೆ ಮಾಡಬೇಡಿ ಎಂದು ಕೇಳಿದ್ದೇವೆ. ಪ್ರತ್ಯೇಕ ಧರ್ಮ ಸ್ಥಾನಮಾನದ ವಿಚಾರವು ಲೋಕಸಭೆಯಲ್ಲಿ ಚರ್ಚೆಗೆ ಬಂದು ಅಲ್ಲಿ ಒಪ್ಪಿಗೆ ಸಿಕ್ಕು, ಆನಂತರ ರಾಜ್ಯಸಭೆಯ ಒಪ್ಪಿಗೆಯೂ ಸಿಗಬೇಕು. ಆಗಲೇ ಪ್ರತ್ಯೇಕ ಧರ್ಮ ಸಾಧ್ಯ. ಹಾಗಾಗಿ, ರಾಜ್ಯ ಸರ್ಕಾರವು ಈ ಬಗ್ಗೆ ಮುತುವರ್ಜಿ ವಹಿಸಿ, ಕೇಂದ್ರ ಸರ್ಕಾರಕ್ಕೆ ಲಿಂಗಾಯರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂದು ಶಿಫಾರಸು ಮಾಡಬೇಕೆಂದು ನಾವು ಮನವಿ ಮಾಡಿದ್ದೇವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mathe Mahadevi has expressed her view regarding on-going agitation of Lingayats. She says, government should listen to their demand to give separate religious status for Lingayats and she urges Veerashaiva Mahasabha to declare themselves as Lingayats, who are actually so.
Please Wait while comments are loading...