ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಂತ ವಾಹನ ಬಿಟ್ಟು ಸಮೂಹ ಸಾರಿಗೆ ಮೊರೆ ಹೋದ ಅಧಿಕಾರಿಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 12: ಎರಡನೇ ವಿರಳ ಸಂಚಾರ ದಿನವನ್ನು ಭಾನುವಾರ ಆಚರಿಸಲಾಯಿತು, ಸಚಿವರು ಸೇರಿದಂತೆ ಸರ್ಕಾರಿ ಅಧಿಕಾರಿಗಳೆಲ್ಲರೂ ತಮ್ಮ ಸ್ವಂತ ವಾಹನಗಳಲ್ಲಿ ಬರದೆ ಬಿಎಂಟಿಸಿ ಬಸ್, ಎಲೆಕ್ಟ್ರಿಕ್ ಆಟೋದ ಮೊರೆ ಹೋದರು. ಆದರೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿಂದಾಗಿ ಎಂದಿನಂತೆಯೇ ತಮ್ಮ ವಾಹನಗಳಲ್ಲಿ ಸಂಚರಿಸುತ್ತಿದ್ದ ದೃಶ್ಯಗಳು ಕಂಡುಬಂತು.

ನಗರದಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ವಿರಳ ಸಂಚಾರ ದಿನವನ್ನು ಪ್ರಾರಂಭಿಸಿದೆ. ಪ್ರತಿ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ಎರಡನೇ ಬಾರಿಗೆ ಭಾನುವಾರ ವಿರಳ ಸಂಚಾರ ದಿನವನ್ನು ಆಚರಿಸಲಾಯಿತು.

ತಿಂಗಳ ಎರಡನೇ ಭಾನುವಾರ ಸ್ವಂತ ವಾಹನಗಳಿಗೆ ಬ್ರೇಕ್ ತಿಂಗಳ ಎರಡನೇ ಭಾನುವಾರ ಸ್ವಂತ ವಾಹನಗಳಿಗೆ ಬ್ರೇಕ್

ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ಎಲೆಕ್ಟ್ರಿಕ್ ಆಟೋ ಹಾಗೂ ಎಲೆಕ್ಟರಿಕ್ ದ್ವಿಚಕ್ರ ವಾಹನಗಳದ್ದೇ ಸದ್ದು, ರಜೆಯ ಮಜಾ ಅನುಭವಿಸಲು ಬಂದಿದ್ದ ರಾಜಧಾನಿ ಮಂದಿ ಹೊಗೆ ಹಾಗೂ ಶಬ್ದ ರಹಿತ ಎಲೆಕ್ಟ್ರಿಕ್ ವಾಹನ ಚಲಾಯಿಸಿ ಪುಳಕಿತರಾದರು.

Less Traffic day does't go down that well 2nd time

ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಕಬ್ಬನ್ ಪಾರ್ಕ್ ನ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ಆಯೋಜಿಸಿದ್ದ ವಿರಳ ಸಂಚಾರ ದಿನದಲ್ಲಿ ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನವೂ ನಡೆಯಿತು.

ವಿರಳ ಸಂಚಾರ ದಿನ, ಅಧಿಕಾರಿಗಳೂ ಕಾರು ಬಳಸುವಂತಿಲ್ಲ: ರೇವಣ್ಣವಿರಳ ಸಂಚಾರ ದಿನ, ಅಧಿಕಾರಿಗಳೂ ಕಾರು ಬಳಸುವಂತಿಲ್ಲ: ರೇವಣ್ಣ

ವಾಯು ಮಾಲಿನ್ಯ ಮತ್ತು ವಾಹನ ಸಂಚಾರ ದಟ್ಟಣೆ ತಗ್ಗಿಸುವ ಹಿನ್ನೆಲೆಯಲ್ಲಿ ಪ್ರತಿ ತಿಂಗಳ 2ನೇ ಭಾನುವಾರ ಖಾಸಗಿ ವಾಹನ ಬಳಕೆ ಬಿಟ್ಟು ಸಮೂಹ ಸಾರಿಗೆ ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು. ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಸ್ವತಃ ಎಲೆಕ್ಟ್ರಿಕ್ ಆಟೋದಲ್ಲಿ ಕಾರ್ಯಕ್ರಮಕ್ಕೆ ಬಂದು ಗಮನ ಸೆಳೆದರು. ಸಾರಿಗೆ ಇಲಾಖೆ ಅಯುಕ್ತ ಬಿ. ದಯಾನಂದ ಸೈಕಲ್ ನಲ್ಲಿ ಬರುವ ಮೂಲಕ ವಿರಳ ಸಂಚಾರ ದಿನ ಆಚರಿಸಿದರು,

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬಿಎಂಟಿಸಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಕೂಡ ಸರ್ಕಾರಿ ವಾಹನದ ಬದಲು ಬಿಎಂಟಿಸಿ ಬಸ್ ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಳಿಕ ಅಧಿಕಾರಿಗಳು, ಸಾರ್ವಜನಿಕರು ಎಲೆಕ್ಟ್ರಿಕ್ ಆಟೋ ಹಾಗೂ ದ್ವಿಚಕ್ರ ವಾಹನ ಚಲಾಯಿಸಿ ಹೊಸ ಅನುಭವ ಪಡೆದರು.

English summary
The second less traffic day observed in the city on sunday failed to significance reduce traffic congestion. Citizens suggested that such a day could have more impact if it is observed on weekday, and also claimed that there was a awareness about a day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X