ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಬ್ ಗಯಾರ್ ಶಾಲೆ ಆವರಣದಲ್ಲಿ ಚಿರತೆ ಇಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 7 : ವರ್ತೂರು ಬಳಿ ಇರುವ ವಿಬ್ ಗಯಾರ್ ಶಾಲೆಯಲ್ಲಿ ಚಿರತೆ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಶಾಲೆಯ ಆವರಣದಿಂದ ಚಿರತೆ ಹೊರಹೋದ ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚಿದ್ದಾರೆ. [ಚಿರತೆ ಹಿಡಿಯುವ ಕಾರ್ಯಾಚರಣೆ ಚಿತ್ರಗಳು]

ಬೆಂಗಳೂರು ಉತ್ತರ ವಲಯದ ಅರಣ್ಯ ಸಂರಕ್ಷಣಾಧಿಕಾರಿ ಕರಿಯಪ್ಪ ಅವರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 'ಚಿರತೆ ಶಾಲೆಯ ಆವರಣದಿಂದ ಹೊರಹೋಗಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಆದರೂ, ಇನ್ನೊಮ್ಮೆ ಖಚಿತಪಡಿಸಿಕೊಳ್ಳಲು ಶಾಲೆಯಲ್ಲಿ ಹುಡುಕಾಟ ನಡೆಸಲಾಗುತ್ತದೆ' ಎಂದು ಹೇಳಿದ್ದಾರೆ. [ವಿಬ್ ಗಯಾರ್ ಶಾಲೆಗೆ ನುಗ್ಗಿದ ಚಿರತೆ]

leopard

ಭಾನುವಾರ ಮುಂಜಾನೆ 4.15ಕ್ಕೆ ಚಿರತೆ ಶಾಲೆಯ ಆವರಣಕ್ಕೆ ಪ್ರವೇಶ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. 6.45ರ ಸುಮಾರಿಗೆ ಅಲ್ಲಿಂದ ಹೊರ ಹೋಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ, ಈ ಬಗ್ಗೆ ಖಚಿತಪಡಿಸಕೊಳ್ಳಲು 15ಕ್ಕೂ ಹೆಚ್ಚು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ. [Vibgyor ಶಾಲೆಯಲ್ಲಿ ಅತ್ಯಾಚಾರ]

ಆತಂಕ ಮೂಡಿಸಿದ್ದ ಚಿರತೆ : ವರ್ತೂರು ಬಳಿ ಇರುವ ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿದೆ ಎಂಬ ಮಾಹಿತಿ ಇಂದು ಬೆಳಗ್ಗೆ ತಿಳಿದುಬಂದಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ಆರಂಭಿಸಿದ್ದರು. ಚಿರತೆಯನ್ನು ಹಿಡಿಯಲು ಬೋನನ್ನು ಸಹ ತರಲಾಗಿತ್ತು. [ಚಿಕ್ಕಮಗಳೂರು : ಕಾಲೇಜಿಗೆ ನುಗ್ಗಿದ ಚಿರತೆ]

ಶಾಲೆಯ ಆವರಣದೊಳಗೆ ಚಿರತೆ ಆಗಮಿಸುತ್ತಿರುವುದನ್ನು ಭದ್ರತಾ ಸಿಬ್ಬಂದಿ ಸಿಸಿಟಿವಿಯಲ್ಲಿ ಗಮನಿಸಿದ್ದರು. ಈ ಬಗ್ಗೆ ವರ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಹುಡುಕಾಟ ನಡೆಸುತ್ತಿದ್ದರು.

English summary
Leopard not found at the premises of a Vibgyor school near Varthur. Forest department officials and Varthur police searching for Leopard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X