ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೆಡ್ಡಿ ಮಗಳ ಅದ್ಧೂರಿ ಮದುವೆ: ಐಟಿಯಲ್ಲಿ ದೂರು ದಾಖಲು

By ವಿಕಾಸ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 16: ಒಂದೆಡೆ ಜನರು ತಮ್ಮ ಹಣವನ್ನು ಬದಲಾಯಿಸಿಕೊಳ್ಳಲು ಪರದಾಡುತ್ತಿದ್ದರೆ ಮತ್ತೊಂದೆಡೆ ಜನಾರ್ದನ ರೆಡ್ಡಿ ಮಗಳ ಅದ್ಧೂರಿ ಮದುವೆ ನಡೆಯುತ್ತಿದೆ ಈ ಎರಡು ಸಂಗತಿಗಳು ವಿರೋಧಾಭಾಸದಂತಿದ್ದು ಇಷ್ಟೊಂದು ಹಣ ಎಲ್ಲಿ ಬಂತೆಂದು ಆದಾಯ ತೆರಿಗೆ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿದೆ.

ದೂರನ್ನು ನೀಡಿರುವವರು ಟಿ.ನರಸಿಂಹ ಮೂರ್ತಿ. ತಾವು ದಾಖಲಿಸಿರುವ ದೂರಿನಲ್ಲಿ ಅದ್ದೂರಿ ಮದುವೆ ಮಾಡುವಷ್ಟು ಹಣ ಎಲ್ಲಿತ್ತು. ಇಲ್ಲಿಯ ವರೆಗೆ ಎಷ್ಟು ಪರಿಶೀಲಿಸಿದರೂ ದೊರಕದಷ್ಟು ಹಣವನ್ನು ಎಲ್ಲಿ ಇಟ್ಟಿದ್ದರು ಎಂದು ಪ್ರಶ್ನಿಸಿದ್ದಾರೆ.

reddy

ಹೊಸ ಮಾದರಿಯ ಕಣ್ಣುಕೋರೈಸುವಂತಹ ಸೆಟ್ ಗಳನ್ನು ನಿರ್ಮಿಸಲು ಹಣವನ್ನುಎಲ್ಲಿಂದ ತಂದಿರಬಹುದು ಎಂದಿದ್ದಾರೆ. ಹಾಗೆಯೇ ಆದಾಯ ತೆರಿಗೆಯನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ. [ರೆಡ್ಡಿ ಮಗಳ ಮದುವೆ ಸಿದ್ಧತೆಗೆ 6 ತಿಂಗಳ ಹಿಂದೆಯೇ ಪೇಮೆಂಟ್!]

ಇನ್ನು ಹಲವಾರು ಬಿಜೆಪಿ ನಾಯಕರು ರೆಡ್ಡಿ ಮಗಳ ಮದುವೆಗೆ ಹೋಗಬಾರದೆಂದು ನಿರ್ಧರಿಸಿದ್ದು, ಕೆಲವೊಂದು ಮಾಹಿತಿಯ ಪ್ರಕಾರ ಮದುವೆಯನ್ನು ನಿಯಂತ್ರಿಸಲು ಕಾರಣ ಅನಗತ್ಯ ಮೂಲಗಳಿಂದ ಕಪ್ಪುಹಣ ಹರಿದು ಬರುವಿಕೆಯನ್ನು ತಡೆಗಟ್ಟುವುದೇ ಅಗಿದೆ ಎನ್ನಲಾಗುತ್ತಿದೆ

ಜನಾರ್ದನ ರೆಡ್ಡಿಯವರು ಬಿಜೆಪಿ ಪಕ್ಷದಲ್ಲಿ ಅಧಿಕಾರದಲ್ಲಿದ್ದರು. 2011ರಲ್ಲಿ ಅವರನ್ನುಗಣಿ ಕೇಸಿನಲ್ಲಿ ಬಂಧಿಸಲಾಗಿತ್ತು. ಕೋರ್ಟಿನ ಒಪ್ಪಿಗೆ ಮೇರೆಗೆ ಅವರು ಹೊರ ಬಂದಿದ್ದು ಇನ್ನು ಮುಂದೇ ಏನೇನು ಅನುಭವಿಸುತ್ತಾರೋ ಕಾದು ನೋಡಬೇಕಿದೆ.

English summary
A complaint has been filed with the directorate general of Income Tax in connection with the lavish wedding that Gali Janardhan Reddy is organising for his daughter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X