ಕೆಜಿ ರಸ್ತೆ ಮೆಟ್ರೋ ಸುರಂಗದ ಬಳಿ 10 ಅಡಿ ಭೂಕುಸಿತ

Written By:
Subscribe to Oneindia Kannada

ಬೆಂಗಳೂರು,ಆಗಸ್ಟ್, 02: ಬೆಂಗಳೂರಿನ ಕೆಜಿ ರಸ್ತೆ ಬಳಿ ಭೂಕುಸಿತ ಉಂಟಾಗಿದೆ. ಕೆಜಿ ರಸ್ತೆಯ ಅಡಿಗಾಸ್ ಹೋಟೆಲ್ ಬಳಿ ಮಂಗಳವಾರ ಬೆಳಗ್ಗೆ 10 ಅಡಿ ಆಳಕ್ಕೆ ಭೂಮಿ ಕುಸಿದಿದೆ.

ಮೆಟ್ರೋ ಸುರಂಗ ಮಾರ್ಗ ಹಾದುಹೋದ ಸಮೀಪವೇ ಭೂಕುಸಿತ ಉಂಟಾಗಿದ್ದು ಸದ್ಯ ಮೆಟ್ರೋ ಸಂಚಾರಕ್ಕೆ ಯಾವ ತೊಂದರೆ ಇಲ್ಲ. ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.[ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಶುಲ್ಕ ಕಟ್ಟಬೇಕು]

kg road

ಈ ಜಾಗದಲ್ಲಿ 5 ವರ್ಷಗಳ ಹಿಂದೆ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿತ್ತು. ಬಿಬಿಎಂಪಿ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಹಾರ ಕಾರ್ಯಕ್ಕೆ ಮುಂದಾಗಿದ್ದಾರೆ.[ನಮ್ಮ ಮೆಟ್ರೋ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಸೇವೆ ಆರಂಭ]

ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು ಕುಸಿತವಾಗಿರುವ ಜಾಗದಲ್ಲಿ ಸಂಚಾರ ಸ್ಥಗಿತ ಮಾಡಲಾಗಿದೆ ಎಂದು ಬಿಎಂಆರ್ ಸಿಎಲ್ ಪಿಆರ್ ಓ ವಸಂತ್ ರಾವ್ ತಿಳಿಸಿದ್ದಾರೆ.

ಪೂರ್ವ-ಪಶ್ಚಿಮ ಕಾರಿಡಾರ್‌ ಮಾರ್ಗ ಇದಾಗಿದ್ದು, ಬೆಳಿಗ್ಗೆ 11 ಗಂಟೆ ಸುಮಾರಿಗೆ 10 ಅಡಿಯಷ್ಟು ಭೂಮಿ ಕುಸಿದಿದೆ. ಬಿಎಂಆರ್ ಸಿ ಎಲ್ ಸಿಬ್ಬಂದಿಯಿಂದ ಗುಂಡು ಮುಚ್ಚುವ ಕೆಲಸ ಆರಂಭವಾಗಿದೆ. ಜಲ್ಲಿ ಕಲ್ಲು ಮತ್ತು ಸಿಮೆಂಟ್ ಬಳಸಿ ಗುಂಡಿ ಮುಚ್ಚಲಾಗುತ್ತಿದ್ದು ಸಕಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Landslide at KG Road, Bengaluru near Namma Metro tunnel on 2 August, 2016.
Please Wait while comments are loading...