ಬೆಂಗಳೂರಿನಲ್ಲಿ ಉತ್ತರ ಭಾರತ ಯುವತಿಯರನ್ನು ಹೊಡೆದಿದ್ದವರ ಬಂಧನ

Posted By:
Subscribe to Oneindia Kannada

ಬೆಂಗಳೂರು, ಜನವರಿ 21: ಪಾರ್ಕಿಂಗ್ ವಿಚಾರಕ್ಕೆ ನಡೆದ ಜಗಳದ ವೇಳೆ ಇಬ್ಬರು ಈಶಾನ್ಯ ರಾಜ್ಯದ ಯುವತಿಯನ್ನು ಮನಬಂದಂತೆ ಥಳಿಸಿದ್ದ ಆರೋಪದಡಿ ಬಾಣಸವಾಡಿಯ ಜಮೀನು ಮಾಲೀಕ ಹಾಗೂ ಅವರ ಕುಟುಂಬಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೆ, ಈ ಘಟನೆ ಕಳೆದ ತಿಂಗಳು ಬಾಣಸವಾಡಿಯ ಅಕ್ಕಮ್ಮ ಲೇಔಟ್ ನ ಸಂಪಣ್ಣ ರಸ್ತೆಯಲ್ಲಿ ನಡೆದಿತ್ತು. ಬೈಕ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಯುವತಿಯರಿದ್ದ ಮನೆಯ ಮಾಲೀಕರು ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದು ದೊಡ್ಡ ಜಗಳವಾಗಿತ್ತು. ಆ ಸಂದರ್ಭದಲ್ಲಿ 80 ವರ್ಷದ ಆ ಮಾಲೀಕ, ಅವರ 56 ವರ್ಷ ವಯಸ್ಸಿನ ಪುತ್ರ ಸೇರಿದಂತೆ ಕುಟುಂಬದ ಇನ್ನಿತರರು ಸೇರಿ ಹಲ್ಲೆ ನಡೆಸಿದ್ದರು.[ರಾಯಚೂರಿನಲ್ಲಿ ಬ್ಯಾಂಕ್ ದರೋಡೆಗೆ ವಿಫಲ ಯತ್ನ]

Landlord arrested for beating up northeast youth

ಹಲ್ಲೆ ನಡೆದ ಸಿಸಿಟಿವಿಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೂರು ದಿನಗಳ ಹಿಂದೆ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡ ಪೊಲೀಕರು, ಸಿಸಿಟಿವಿ ದೃಶ್ಯಗಳನ್ನಾಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bengaluru police arrest an land owner and his 56-year-old son for allegedly beating up two northeast girls in Banasawadi, Bengaluru.
Please Wait while comments are loading...