ಶಿಕಾರಿಪುರದಲ್ಲಿ ಭೂ ಹಗರಣ: ಬಿಎಸ್ವೈ ಹಾಗೂ ಪುತ್ರರ ವಿರುದ್ಧ ದೂರು

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 18: ಶಿಕಾರಿಪುರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಇಬ್ಬರು ಮಕ್ಕಳು ಭೂ ಹಗರಣ ನಡೆಸಿದ್ದಾರೆ ಎಂದು ಆರೋಪಿಸಿ ಆರ್ ಟಿಐ ಕಾರ್ಯಕರ್ತರೊಬ್ಬರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಅಂಜನಾಪುರದಲ್ಲಿ ಯಡಿಯೂರಪ್ಪ ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ ಖಾಸಗಿ ಕಾಲೇಜು ನಡೆಸುತ್ತಿದ್ದು, ಈ ಕಾಲೇಜಿಗೆ ಸುಮಾರು 25 ಎಕರೆಯಷ್ಟು ಕೆರೆ ಜಮೀನನ್ನು ಕಬಳಿಸಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಹನುಮೇಗೌಡ ಅವರು ಬೆಂಗಳೂರಿನ ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

Land Scam : B S Yeddyurappa and Sons in trouble, RTI activist files complaint Special court

ಅಂಜನಾಪುರದಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಕುಮದ್ವತಿ ಕಾಲೇಜು ಆವರಣದಲ್ಲಿರುವ 25 ಎಕರೆ ಕೆರೆ ಜಮೀನನ್ನು ಯಡಿಯೂರಪ್ಪ ಅವರ ಪುತ್ರರು ತಮ್ಮ ಪ್ರಭಾವ ಬಳಸಿ ಕಬಳಿಸಿದ್ದಾರೆ.

ಭೂ ಕಬಳಿಕೆ ಹಿಂದೆ ಮಾಜಿ ಸಿಎಂ ಯಡಿಯೂರಪ್ಪ ಅವರ ಕುಮ್ಮಕ್ಕಿದೆ. ದೂರಿನ ಪ್ರತಿ ಜತೆಗೆ ಅಗತ್ಯ ದಾಖಲೆಗಳನ್ನು ಕೂಡಾ ವಿಶೇಷ ಭೂ ಕಬಳಿಕೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂಡುಎಂದು ಹನುಮೇಗೌಡ ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Land Scam : Former CM B S Yeddyurappa and Sons BY Raghavendra and BY Vijeyendra are in trouble, RTI activist Hanume Gowda filed complaint Special court in Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ