13 ಎಕರೆ ಸರ್ಕಾರಿ ಭೂಮಿ ಕಬಳಿಕೆ : ಸಚಿವ ಜಾರ್ಜ್ ವಿರುದ್ಧ ದೂರು ದಾಖಲು

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 07 : ಬೆಂಗಳೂರು ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಲೋಕಾಯುಕ್ತದಲ್ಲಿ, ಎಸಿಬಿ ಹಾಗೂ ಬಿಎಂಟಿಎಫ್ ನಲ್ಲಿ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ.

ಜಾರ್ಜ್ ವಿರುದ್ಧ ದೂರು ದಾಖಲಿಸಿರುವ ಬಿಜೆಪಿ ಮುಖಂಡ ಎನ್.ಅರ್. ರಮೇಶ್ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಜಾರ್ಜ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ, ತಹಶೀಲ್ದಾರ್, ಹಿಂದಿನ ಆಯುಕ್ತರು, ಬಿಡಿಎ ನಗರ ಯೋಜನೆ ಅಧಿಕಾರಿಗಳು ಮತ್ತು ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಗಳ ವಿರುದ್ಧವೂ ದೂರು ದಾಖಲಿಸಿದ್ದಾರೆ.

ಅನುಷ್ಠಾನ ಯೋಗ್ಯ ಸಲಹೆಗೆ ಮಣೆ: ಜಾರ್ಜ್

ಕೆ.ಜೆ. ಜಾರ್ಜ್ ವಿರುದ್ಧ ಸರ್ಕಾರಿ ಭೂಕಬಳಿಕೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ವಂಚನೆ ಪ್ರಕರಣಗಳು ದಾಖಲಿಸಿರುವ ಎನ್.ಆರ್. ರಮೇಶ್, 4 ಸಾವಿರ ಕೋಟಿ ಬೆಲೆಬಾಳುವ 52.03 ಎಕರೆಗಳಷ್ಟು ಸರ್ಕಾರಿ ಸ್ವತ್ತುಗಳಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

Land grabbing case against minister George

ಜಾರ್ಜ್ ಅವರ ಮುಖ್ಯ ಪಾಲುದಾರಿಕೆಯ ಎಂಬಸ್ಸಿ 'ಗಾಲ್ಫ್ ಲಿಂಕ್ ಟೆಕ್ ಪಾರ್ಕ್'ನಿರ್ಮಾಣದ ಹೆಸರಿನಲ್ಲಿ ಸಾವಿರಾರು ಕೋಟಿ ಸರ್ಕಾರಿ ಭೂಮಿ ಕಬಳಿಕೆ ಆರೋಪ ಕ್ರಯಕ್ಕೆ 52.03 ಎಕರೆ, ಆದರೆ ಬೇಲಿ ಹಾಕಿರುವುದು 65 ಎಕರೆ ಪ್ರದೇಶಕ್ಕೆ 850 ಕೋಟಿ ರೂ. ಬೆಲೆಬಾಳುವ 13 ಎಕರೆಗಳಷ್ಟು ಸರ್ಕಾರಿ ಸ್ವತ್ತುಗಳನ್ನು ಒತ್ತುವರಿ ಮಾಡಿದ್ದಾರೆ ಎಂದರು.

ಬೆಂಗಳೂರು ಪೂರ್ವ ತಾಲೂಕು, ವರ್ತೂರು ಹೋಬಳಿ ಚಲ್ಲಘಟ್ಟ ಗ್ರಾಮದ 65 ಎಕರೆ ಸರ್ಕಾರಿ ಜಮೀನುಗಳಲ್ಲಿ ಎಂಬಸ್ಸಿ ಗಲ್ಫ್ ನಿರ್ಮಾಣವಾಗಿದೆ. ಈ ರೀತಿ ಖುದ್ದು ಆ ಸಂಸ್ಥೆಯೇ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಹಾಕಿದೆ. ಈ 65 ಎಕರೆ ಜಮೀನುಗಳಿಗೆ ಸಂಬಂಧಿಸಿದ ಆರ್ ಟಿ ಇ ದಾಖಲೆಗಳಲ್ಲಿ ಇಂದಿಗೂ ಸಹ ಸರ್ಕಾರಿ ಸ್ವತ್ತುಗಳು ಎಂದು ನಮೂದಿಸಲಾಗಿದೆ ಎಂದು ಹೇಳಿದರು.

ಒತ್ತುವರಿ ಮಾಡಿದವರನ್ನು ಶಿಕ್ಷಿಸದೆ ಬಿಡೆವು : ಜಾರ್ಜ್

ವಿವಿಧ 18 ಸರ್ವೆ ನಂಬರುಗಳ 65 ಎಕರೆ ಸರ್ಕಾರಿ ಸ್ವತ್ತುಗಳಲ್ಲಿ ನಿರ್ಮಾಣವಾಗಿರುವ ಕೆ.ಜೆ. ಜಾರ್ಜ್ ಮಾಲಿಕತ್ವದ ಎಂಬಸ್ಸಿ ಗಲ್ಫ್ ಸಂಸ್ಥೆ, ನಿರ್ಮಾಣದ ಹೆಸರಿನಲ್ಲಿ ಚಲ್ಲಘಟ್ಟ ಕಣಿವೆಯ ರಾಜಕಾಲುವೆಯ ನೂರಾರು ಕೋಟಿ ರೂ ಬೆಲೆಬಾಳುವ ಬಫರ್ ಜೋನ್ ಪ್ರದೇಶದ ಸಂಪೂರ್ಣ ಒತ್ತುವರಿ ಮಾಡಿದೆ.

ಎಂಬಸ್ಸಿ ಗಲ್ಫ್ ಸಂಸ್ಥೆಗೆ ಸರ್ವೇ ನಂ.7/4 ರ 4.01 ಎಕರೆಗಳಷ್ಟು ಸರ್ಕಾರಿ ಸ್ವತ್ತನ್ನು ಶಾಸಕ ಎನ್.ಎ. ಹ್ಯಾರಿಸ್ ಮತ್ತು ಅವರ ಕುಟುಂಬ ವರ್ಗದವರು ಮಾರಾಟ ಮಾಡಿರುವ ದಾಖಲೆ ಬಗ್ಗೆ ಸಾಕಷ್ಟು ಅನುಮಾನ ಇದೆ ಎಂದರು.

ವಾಸದ ಉದ್ದೇಶಕ್ಕೆಂದು ಭೂ ಪರಿವರ್ತನೆಯಾಗಿರುವ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಕಾನೂನು ಬಾಹಿರವಾಗಿ ನಿರ್ಮಿಸಿರುವ ವಾಣಿಜ್ಯ ಕಟ್ಟಡಗಳಿಗೆ ಹಿಂದಿನ ಬಿಡಿಎ ಆಯುಕ್ತರು ನಿಯಮ ಬಾಹಿರವಾಗಿ ಸ್ವಾಧೀನತಾ ಪತ್ರಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು.

ಎಂಬಸ್ಸಿ ಗಲ್ಫ್ ಸಂಸ್ಥೆಯ ಒಟ್ಟು ನಿರ್ಮಿತ ಪ್ರದೇಶ 4.5 ದಶಲಕ್ಷ ಚ. ಅಡಿಗಳು. ಆದರೆ, ಆ ಸಂಸ್ಥೆಯು ಪಾಲಿಕೆಗೆ ನೀಡಿರುವ ಮಾಹಿತಿ ಕೇವಲ 4,79,723 ಚ. ಅಡಿಗಳಷ್ಟು ಮಾತ್ರ. ಎಂಬಸ್ಸಿ ಗಲ್ಫ್ ಸಂಸ್ಥೆಯು ತಾನು 4.5 ದಶಲಕ್ಷ ಚ. ಅಡಿಗಳಷ್ಟು ಒಟ್ಟು ನಿರ್ಮಿತ ಪ್ರದೇಶವಿರುವ ವ್ಯಾವಹಾರಿಕ ಕಟ್ಟಡಗಳನ್ನು ಹೊಂದಿರುವುದಾಗಿ ಸ್ವತಃ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಘೋಷಿಸಿಕೊಂಡಿದೆ.

ರಾಜಕಾಲುವೆಯ ಬಫರ್ ಜೋನ್ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸುವಂತೆ ಆಗ್ರಹ ವರ್ಷ ಪ್ರತಿ 09 ಕೋಟಿ ರೂ.ಗೂ ಹೆಚ್ಚು ಆಸ್ತಿ ತೆರಿಗೆಯನ್ನು ಪಾಲಿಕೆಗೆ ವಂಚಿಸುತ್ತಿರುವ ಸಚಿವ ಕೆ.ಜೆ ಜಾರ್ಜ್ ರವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಎನ್.ಆರ್. ರಮೇಶ್ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP leader NR Ramesh has filed a case with ACB and BMTF against Bengaluru development minister KJ George alleging that the Government land grabbed by latter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ