ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಗದ ಗೊಂದಲ: 2ನೇ ಹಂತ ಮೆಟ್ರೋ ಅನುಷ್ಠಾನ ವಿಳಂಬ

By Nayana
|
Google Oneindia Kannada News

ಬೆಂಗಳೂರು, ಜೂನ್ 14: ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಜಾಗದ ವಿಚಾರದಲ್ಲಿ ಕೆಲವು ಗೊಂದಲಗಳಿರುವುದರಿಂದ ವಾಣಿಜ್ಯ ಸಂಚಾರ ಮತ್ತಷ್ಟು ಮುಂದಕ್ಕೆ ಹೋಗುವ ನಿರೀಕ್ಷೆ ಇದೆ.

ಈ ಯೋಜನೆಗೆ ಬೇಕಿರುವ 9 ಎಕರೆ ಜಾಗ ಯಾರದ್ದು, ಯಾರಿಗೆ ಪರಿಹಾರ ನೀಡಬೇಕೆಂಬ ಗೊಂದಲ = ಸೃಷ್ಟಿಯಾಗುವುದರಿಂದ ವಾಣಿಜ್ಯ ಸಂಚಾರ ವಿಳಂಬವಾಗಲಿದೆ. 6ಕಿ.ಮೀ ಉದ್ದದ ಯಲಚೇನಹಳ್ಳಿ-ಅಂಜನಾಪುರ ಕ್ರಾಸ್ ಮಾರ್ಗದ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಆದರೂ ನಿಲ್ದಾಣಗಳ ನಿರ್ಮಾಣ ಇನ್ನೂ ನಡೆಯುತ್ತಿದೆ.

ಜೂನ್ ಅಂತ್ಯಕ್ಕೆ 6 ಬೋಗಿಗಳ ಮೆಟ್ರೋ ಸಂಚಾರ? ಜೂನ್ ಅಂತ್ಯಕ್ಕೆ 6 ಬೋಗಿಗಳ ಮೆಟ್ರೋ ಸಂಚಾರ?

7ಕಿ.ಮೀ ಉದ್ದದ ನಾಯಂಡಹಳ್ಳಿ-ಕೆಂಗೇರಿ ಮಾರ್ಗವೂ ಪೂರ್ಣಗೊಂಡಿದ್ದು, ನಿಲ್ದಾಣಗಳು ನಿರ್ಮಾಣವಾಗುತ್ತಿದೆ. ನಾಗಸಂದ್ರ-ಬಿಐಇಸಿ ಹಾಗೂ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗಗಳು ನಿರ್ಮಾಣ ಹಂತದಲ್ಲಿವೆ. ನಾಲ್ಕು ಕಡೆಗಳಲ್ಲಿ ಮೆಟ್ರೋಗೆ ಬೇಕಿರುವ 9 ಎಕರೆ ಜಾಗದ ಪೈಕಿ ಸ್ವಲ್ಪ ಜಾಗ ಬೇರೆ ನೈಸ್ ರಸ್ತೆಗೆ ಹಾಗೂ ಮತ್ತೂ ಸ್ವಲ್ಪ ಜಾಗ ಬೇರೆ ವ್ಯಕ್ತಿಗಳಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.

Land acqusition row: Metro work may delay

ಅಲಲ್ಲದೆ, ನೈಸ್ ರಸ್ತೆಗೆ ಸೇರಿರುವ ಕೆಲ ಜಾಗಗಳು ವಿವಾದದಲ್ಲಿರುವುದರಿಂದ ಪರಿಹಾರ ಯಾರಿಗೆ ಕೊಡಬೇಕೆಂಬ ಗೊಂದಲವಿದೆ. ಭೂ ಸ್ವಾಧೀನವೂ ಸಾಧ್ಯವಾಗಿಲ್ಲ, ಎರಡನೇ ಹಂತದಲ್ಲಿ ಯಲಚೇನಹಳ್ಳಿ-ಅಂಜನಾಪುರ ಕ್ರಾಸ್ ಮಾರ್ಗವನ್ನು 2019ರ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತಗೊಳಿಸುವ ಉದ್ದೇಶವಿದೆ.

ಈ ಮಾರ್ಗದಲ್ಲಿ 294 ಆಸ್ತಿಗಳಿಗೆ ಕೆಐಎಡಿಬಿ ಮೂಲಕ 322.91 ಕೋಟಿ ರೂ. ಪರಿಹಾರ ನೀಡಲಾಗಿದೆ. ಆದರೆ 3,910 ಚದರ ಮೀಟರ್ ನೈಸ್ ರಸ್ತೆ ಸಮೀಪದಲ್ಲಿದೆ. ಇದರಲ್ಲಿ ನಿಜವಾದ ನೈಸ್ಗೆ ಸೇರಿದ್ದು ಎಷ್ಟು ಖಾಸಗಿ ಭೂಮಿ ಎಷ್ಟು ಎಂದು ಇನ್ನೂ ಲೆಕ್ಕ ಸಿಕ್ಕಿಲ್ಲ ಹಾಗಾಗಿ ಎರಡನೇ ಹಂತದ ಮೆಟ್ರೋ ಯೋಜನೆ ಇನ್ನಷ್ಟೂ ವಿಳಂಬವಾಗಲಿದೆ.

English summary
BMRCL is in dilemma of disbursement of compensation for nine acres of land acquisition and the work may be delayed as second phase of Namma Metro wouldn't be completed by end of 2019, BMRCL sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X