ಒತ್ತುವರಿ ತೆರವು ಪ್ರಶ್ನಿಸಿ ನಟ ದರ್ಶನ್ ರಿಟ್ ಅರ್ಜಿ

Posted By: Prithviraj
Subscribe to Oneindia Kannada

ಬೆಂಗಳೂರು, ಅಕ್ಟೋಬರ್, 24: ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಲೇಔಟ್ ಪ್ರದೇಶ ತೆರವುಗೊಳಿಸಿರುವ ಬೆಂಗಳೂರು ಜಿಲ್ಲಾಡಳಿತ ಕ್ರಮವನ್ನು ಖಂಡಿಸಿ ನಟ ದರ್ಶನ್ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

Land acquisition : Kannada actor Darshan files writ petition

ನಟ ದರ್ಶನ್ ಅವರು ಒಟ್ಟು 2,100 ಚ.ಅಡಿ ರಾಜ ಕಾಲುವೆ ಪ್ರದೇಶ ಒತ್ತುವರಿ ಮಾಡಿ ಮನೆ ನಿರ್ಮಿಸಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. [ದರ್ಶನ್ ಮನೆ ತೆರವು ಖಚಿತ: ಜಿಲ್ಲಾಧಿಕಾರಿ ಶಂಕರ್ ಸ್ಪಷ್ಟನೆ]

ಈ ಹಿನ್ನೆಲೆಯಲ್ಲಿ ಕಳೆದ ಶನಿವಾರ (ಅ.22)ದಂದು ದರ್ಶನ್ ಮನೆ ಸೇರಿದಂತೆ ಐಡಿಯಲ್ ಹೋಮ್ಸ್ ಬಡಾವಣೆಯ ಒಟ್ಟು 44 ಆಸ್ತಿಗಳ ಮುಂದೆ ಸರ್ಕಾರಿ ಸ್ವತ್ತು ಎಂದು ನಾಮಫಲಕ ಹಾಕಲಾಗಿತ್ತು. [ನಟ ದರ್ಶನ್ ಮನೆ ಇನ್ನು 'ಸರಕಾರಿ ಸ್ವತ್ತು'!]

ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿ ದರ್ಶನ್ ಅವರು ಹೈಕೋರ್ಟ್ ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಹೈಕೋರ್ಟ್ ಸ್ವೀಕರಿಸಿದ್ದು, ಮಂಗಳವಾರಕ್ಕೆ ವಿಚಾರಣೆ ನಿಗದಿಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Questioning order passed by Bengaluru district administration to acquire his house in Rajarajeshwari Nagar, Kannada actor Darshan has filed write petition in High Court of Karnataka on 24th October, 2016. Authorities have accused that Darshan has acquire government land for construction of his house.
Please Wait while comments are loading...