ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ 2ನೇ ಹಂತದಲ್ಲಿ ಭೂಸ್ವಾಧೀನಕ್ಕೆ ಅಧಿಕ ವೆಚ್ಚ

|
Google Oneindia Kannada News

ಬೆಂಗಳೂರು, ಮಾರ್ಚ್ 14: ನಮ್ಮ ಮೆಟ್ರೋದ ಮೊದಲನೇ ಹಂತದ ಯೋಜನೆಗಿಂತಲೂ ಎರಡನೇ ಹಂತದ ಯೋಜನೆಯಲ್ಲಿ ಭೂ ಸ್ವಾಧೀನಕ್ಕೆ ಶೇ. 2ರಷ್ಟು ಹೆಚ್ಚು ವ್ಯಯ ಮಾಡಬೇಕಾಗಿ ಬಂದಿದೆ.

ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಹೆಚ್ಚು ಸರ್ಕಾರಿ ಜಮೀನು ಜಾಗಗಳನ್ನು ಪಡೆಯುತ್ತಿರುವುದರಿಂದ ಭೂಸ್ವಾಧೀನಕ್ಕೆ ಕಡಿಮೆ ಖರ್ಚಾಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಭೂಮಿಯ ಮೌಲ್ಯ ಹೆಚ್ಚಳ ಆಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ನಮ್ಮ ಮೆಟ್ರೋ: ಏಪ್ರಿಲ್ ಮೂರನೇ ವಾರದಲ್ಲಿ 6 ಬೋಗಿ ರೈಲುನಮ್ಮ ಮೆಟ್ರೋ: ಏಪ್ರಿಲ್ ಮೂರನೇ ವಾರದಲ್ಲಿ 6 ಬೋಗಿ ರೈಲು

ಒಂದನೇ ಹಂತದ ಯೋಜನೆಯ ಒಟ್ಟು ಯೋಜನಾ ವೆಚ್ಚ 13,845ಕೋಟಿ ರೂ ಆಗಿದ್ದು, ಇದರಲ್ಲಿ 2,305,90ಕೋಟಿ ರೂ. ಹಣವನ್ನು ಭೂಸ್ವಾಧೀನಕ್ಕೆ ಖರ್ಚು ಮಾಡಲಾಗಿತ್ತು. ಒಟ್ಟು 12,76,338,27 ಚದರ ಮೀಟರ್ ಭೂಮಿಯನ್ನು ಪಡೆದು ಮಾರ್ಗ, ನಿಲ್ದಾಣ, ಡಿಪೋ ನಿರ್ಮಿಸಲಾಗಿತ್ತು.

Land acquisition cost for Namma Metro phase 2 increases 2 percent

ಅಂದರೆ ಒಂದನೇ ಹಂತದಲ್ಲಿ ಯೋಜನಾ ಮೊತ್ತದ ಶೇ. 16ರಷ್ಟು ಹಣ ಭೂಸ್ವಾಧೀನಕ್ಕೆ ಖರ್ಚಾಗಿದೆ. ಎರಡನೇ ಹಂತದಲ್ಲಿ 10,20,200ಚದರ ಮೀಟರ್ ಭೂಮಿ ಪಡೆಯಲು 5 ಸಾವಿರ ಕೋಟಿ ರೂ. ಖರ್ಚಾಗಲಿದೆ. ಈ ಯೋಜನೆಗೆ ಒಟ್ಟು 26,405,14ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಅಂದರೆ ಯೋಜನಾ ಮೊತ್ತದ ಶೇ.18ರಷ್ಟು ಹಣ ಭೂಸ್ವಾಧೀನಕ್ಕೆ ಖರ್ಚಾಗಲಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಶೇ.80 ರಷ್ಟು ಭೂಸ್ವಾಧೀನ: ಎರಡನೇ ಹಂತದ ಯೋಜನೆಯ ಅರು ಮಾರ್ಗ ಮತ್ತು ಒಂದು ಡಿಪೋದಲ್ಲಿ ಶೇ.80ರಷ್ಟು ಭೂಸ್ವಾಧೀನ ಪೂರ್ಣಗೊಂಡಿದೆ. ಇದುವರೆಗೆ ಯೋಜನಾ ಮೊತ್ತದ ಶೇ.10ರಷ್ಟು ಹಣವನ್ನು ಭೂಮಿ ಪಡೆಯಲು ಖರ್ಚು ಮಾಡಲಾಗಿದೆ ಇದುವರೆಗೆ 6,45,964,93ಚದರ ಮೀಟರ್ ಭೂಮಿಯನ್ನು ಸ್ವಾಧೀನ ಪಪಡಿಸಿದಿಕೊಂಡಿದ್ದು ಇದಕ್ಕೆ 2,704,82 ಕೋಟಿ ರೂ. ಖರ್ಚಾಗಿದೆ.

English summary
BMRCL is facing tough on paying compensation while it has increased up to 18 percent out of total cost of project for Namma Metro phase 2 work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X