ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ಬಾಗ್‌ನಲ್ಲಿ ಇನ್ನು ಪ್ಲಾಸ್ಟಿಕ್ ಬ್ಯಾಗ್ ಒಯ್ಯುವ ಹಾಗಿಲ್ಲ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಲಾಲ್‌ಬಾಗ್‌ ಇನ್ನುಮುಂದೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಅಂಗಡಿ ಮುಗ್ಗಟ್ಟುಗಳು ಸೇರಿದಂತೆ ಹೋಟೆಲ್, ಮಾಲ್ ಗಳಲ್ಲಿ ಕೂಡ ಪ್ಲಾಸ್ಟಿಕ್ ನಿಷೇಧಿಸಲಾಗಿದೆ.

ಇದೀಗ ಲಾಲ್‌ಬಾಗ್‌ ಆಡಳಿತ ಮಂಡಳಿ ಲಾಲ್‌ಭಾಗ್ ಒಳಗೆ ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲು ಮುಂದಾಗಿದೆ, ಲಾಲ್‌ಬಾಗ್‌ನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸಲು ಪಣತೊಟ್ಟು, ಆರು ತಿಂಗಳಿಂದ ಹಂತ-ಹಂತವಾಗಿ ಪ್ಲಾಸ್ಟಿಕ್ ನಿರ್ಬಂಧದ ಕ್ಲಮ ಕೈಗೊಳ್ಳಲಾಗಿತ್ತು.

ಲಾಲ್‌ಬಾಗ್‌ಗೆ ಇನ್ನುಮುಂದೆ ಪರ್ಫ್ಯೂಮ್ ಹಾಕಿಕೊಂಡು ಹೋಗುವಂತಿಲ್ಲ! ಲಾಲ್‌ಬಾಗ್‌ಗೆ ಇನ್ನುಮುಂದೆ ಪರ್ಫ್ಯೂಮ್ ಹಾಕಿಕೊಂಡು ಹೋಗುವಂತಿಲ್ಲ!

ಲಾಲ್‌ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಹೊರತುಪಡಿಸಿ ದಿನನಿತ್ಯ ಕೂಡ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ, ಅವರು ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಬಾಟಲಿಗಳನ್ನು ತಂದು ಅಲ್ಲಿಯೇ ಎಸೆದು ಹೋಗುತ್ತಿದ್ದರು. ಇದೆಲ್ಲವನ್ನೂ ಗಮನಿಸಿರುವ ತೋಟಗಾರಿಕೆ ಇಲಾಖೆ ಲಾಲ್‌ಬಾಗ್ ಒಳಗೆ ಪ್ಲಾಸ್ಟಿಕ್ ನಿಷೇಧಿಸಿದೆ.

Lalbagh set to declare plastic free zone

ದಿನನಿತ್ಯ ಒಂದು ಆಟೊ ಲೋಡ್‌ನಷ್ಟು ವಾರಾಂತ್ಯದಲ್ಲಿ ಸುಮಾರು ಎರಡು ಲೋಡ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಉದ್ಯಾನದ ನಾಲ್ಕೂ ಪ್ರವೇಶ ದ್ವಾರದಲ್ಲಿ ತಲಾ ಒಬ್ಬ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಕಾರ್ಯ ನಿರ್ವಹಿಸುತ್ತಾರೆ.

ಲಾಲ್ ಬಾಗ್ ನಲ್ಲಿ ಫೋಟೊಶೂಟ್ ನಿಷೇಧ! ಲಾಲ್ ಬಾಗ್ ನಲ್ಲಿ ಫೋಟೊಶೂಟ್ ನಿಷೇಧ!

ಜತೆಗೆ ಪ್ಲಾಸ್ಟಿಕ್ ಸಂಗ್ರಹಿಸುವ ದೊಡ್ಡ ಬಾಕ್ಸ್‌ ಗಳನ್ನು ಇರಿಸಲಾಗಿದೆ. ಉದ್ಯಾನಕ್ಕೆ ಪ್ರವೇಶಿಸುವ ಪ್ರವಾಸಿಗರನ್ನು ಪ್ರವೇಶ ದ್ವಾರದಲ್ಲಿ ಪರಿಶೀಲಿಸುವ ಸಿಬ್ಬಂದಿ , ಬಳಸಿ ಬಿಸಾಡುವ ನೀರಿನ ಬಾಟಲಿಗಳನ್ನು ಮುಲಾಜಿಲ್ಲದೆ ಕಿತ್ತು ಬಾಕ್ಸ್‌ಗೆ ಹಾಕಿಕೊಳ್ಳುತ್ತಾರೆ. ವ್ಯಾನಿಟಿ ಬ್ಯಾಗ್‌ನಲ್ಲಿ ಪ್ಲಾಸ್ಟಿಕ್ ಕವರ್‌ಗಳಿದ್ದರೂ ಕಸಿದುಕೊಳ್ಳುತ್ತಾರೆ.

ಉದ್ಯಾನದೊಳಗಿರು ಯಾವುದೇ ಮಾರಾಟ ಮಳಿಗೆಯವರು ನೀರಿನ ಬಾಟಲಿಗಳನ್ನು ಮಾರುವಂತಿಲ್ಲ, ಜತೆಗೆ ಪ್ಲಾಸ್ಟಿಕ್ ಕವರ್ ಹೊಂದಿರುವ ಜಂಕ್ ಫುಡ್‌ಗಳನ್ನು ಕೂಡ ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದೆ.

English summary
As department of horticulture has imposed ban on water bottles, plastic sachets of food other items which plastic bags entering Lalbagh biological park and soon will be declared as plastic free zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X