ಆಗಸ್ಟ್‌ 6ರಿಂದ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ

Posted By:
Subscribe to Oneindia Kannada

ಬೆಂಗಳೂರು, ಜುಲೈ 21 : ಬೆಂಗಳೂರಿನ ಲಾಲ್ ಬಾಗ್‌ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗಿದೆ. ಈ ಬಾರಿ ಹೂವುಗಳಿಂದ 25 ಅಡಿ ಎತ್ತರದ ಸಂಸತ್ ಭವನದ ಮಾದರಿಯನ್ನು ತಯಾರಿಸಲಾಗುತ್ತದೆ.

ಆಗಸ್ಟ್ 6 ರಿಂದ 15ರ ತನಕ ಫಲಪುಷ್ಪ ಪ್ರದರ್ಶನ ನಡೆಯಲಿದೆ. ತೋಟಗಾರಿಕೆ ಪಿತಾಮಹ ಎಂ.ಎಚ್. ಮರಿಗೌಡರ ಜನ್ಮಶತಮಾನೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಮತ್ತಷ್ಟು ಮೆರಗು ನೀಡಲು ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾಸಂಘಗಳ ಪ್ರದರ್ಶನ ತೀರ್ಮಾನ ಕೈಗೊಂಡಿದೆ. [ಚಿತ್ರಗಳು : 2015ರ ಫಲಪುಷ್ಪ ಪ್ರದರ್ಶನ]

Lalbagh Independence day flower show from August 5 to 15, 2016

ಸಂಸತ್ ಭವನ ನಿರ್ಮಾಣ : 2016ನೇ ಸಾಲಿನ ಫಲಪುಷ್ಪ ಪ್ರದರ್ಶನದ ಆಕರ್ಷಣೆ ದೆಹಲಿಯಲ್ಲಿರುವ ಸಂಸತ್ ಭವನ. ಹೂವುಗಳಿಂದ 2 ಅಂತಸ್ತಿನ ಸಂಸತ್ ಭವನ ನಿರ್ಮಾಣ ಮಾಡಲಾಗುತ್ತದೆ. 35 ರಿಂದ 40 ಅಡಿ ವಿಸ್ತೀರ್ಣದ ಸಂಸತ್ ಭವನದ ಕಲಾಕೃತಿ ನಿರ್ಮಿಸಲು 4 ಲಕ್ಷ ಹೂಗಳನ್ನು ಬಳಸಲಾಗುತ್ತಿದೆ.[ಹಾಪ್ ಕಾಮ್ಸ್ ನಲ್ಲಿ ಎಂಟಿಆರ್ ಉತ್ಪನ್ನ ಖರೀದಿ ಮಾಡಿ]

ಫಲಪುಷ್ಪ ಪ್ರದರ್ಶನದ ಅಂಗವಾಗಿ ಮೈಸೂರು ಉದ್ಯಾನ ಕಲಾ ಸಂಘ ಆಗಸ್ಟ್ 2ರಂದು ಮಾಧ್ಯಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ
080-26576781.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Lalbagh all set to host Independence day flower show from August 6 to 15, 2016. Parliament building is the main attraction this this year, which created using 4 lakh flowers.
Please Wait while comments are loading...