ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯೋತ್ಸವ ಪುಷ್ಪಪ್ರದರ್ಶನಕ್ಕೆ ಮನಸೋತವರು 5 ಲಕ್ಷ ಮಂದಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 16: ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಆಗಸ್ಟ್ 4ರಿಂದ ಪುಷ್ಪ ಪ್ರದರ್ಶನ ಆರಂಭಗೊಂಡಿತ್ತು. ಆಗಸ್ಟ್ 15ರಂದು ಕೊನೆಯ ದಿನ 5 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ.

ಲಾಲ್‌ಬಾಗ್‌ಗೆ ನಿರೀಕ್ಷೆಗಿಂತಲೂ ಹೆಚ್ಚಿನ ಮಂದಿ ಭೇಟಿ ನೀಡಿದ್ದು, ಸುಸೂತ್ರವಾಗಿ ಪ್ರದರ್ಶನ ಮುಕ್ತಾಯಗೊಂಡಿದೆ. 2.36 ಕೋಟಿಗೂ ಅಧಿಕ ಟಿಕೆಟ್‌ ಹಣ ಸಂಗ್ರಹವಾಗಿದೆ. ಪ್ರದರ್ಶನದ ಕೊನೆಯ ದಿನವಾದ ಬುಧವಾರ 1,28,407 ವಯಸ್ಕರು, 48500 ಮಕ್ಕಳು ಸೇರಿ 1,76,907 ಜನ ಭೇಟಿ ನೀಡಿದ್ದು ಟಿಕೆಟ್‌ ಶುಲ್ಕದ ಮೂಲಕ 75.18 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.

ಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿ ಯೋಧರಿಗೆ ಸಮರ್ಪಿತ ಪುಷ್ಪ ಪ್ರದರ್ಶನ ಉದ್ಘಾಟಿಸಿದ ಕುಮಾರಸ್ವಾಮಿ

ವಾಹನ ನಿಲುಗಡೆಗೆ ಶಾಂತಿನಗರ ಬಸ್‌ ನಿಲ್ದಾಣ, ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ, ಅಲ್‌ಅಮೀನ್‌ ಕಾಲೇಜುಗಳ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಹೆಚ್ಚಿನ ವಾಹನಗಳು ಬಂದಿದ್ದರಿಂದ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

Lalbagh flower show won the heart of 5 lakh people

ಲಾಲ್‌ಬಾಗ್‌ನ ಮುಖ್ಯದ್ವಾರ, ಹೊಸೂರು ರಸ್ತೆ,ಶಾಂತಿನಗರ ಬಸ್‌ ನಿಲ್ದಾಣ, ಬಳಿ ಭಾರಿ ಸಂಖ್ಯೆಯಲ್ಲಿ ವಾಹನಗಳು ಜಮಾವಣೆಗೊಂಡಿದ್ದವು. ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

ನೋಡುಗರ ಕಣ್ಣಲ್ಲಿ ಯೋಧರಿಗೆ ಸಮರ್ಪಿತ ಲಾಲ್‌ಬಾಗ್‌ ಪುಷ್ಪಪ್ರದರ್ಶನ ನೋಡುಗರ ಕಣ್ಣಲ್ಲಿ ಯೋಧರಿಗೆ ಸಮರ್ಪಿತ ಲಾಲ್‌ಬಾಗ್‌ ಪುಷ್ಪಪ್ರದರ್ಶನ

ಬುಧವಾರ ಬೆಳಗ್ಗೆಯಿಂದಲೇ ಪ್ರದರ್ಶನಕ್ಕೆ ಜನಸಾಗರ ಹರಿದುಬಂದಿತ್ತು, ಮಧ್ಯಾಹ್ನದ ವೇಳೆಗೆ ಲಾಲ್‌ಬಾಗ್‌ನಾದ್ಯಂತ ಜನಜಂಗುಳಿ ಕಂಡುಬಂತು. ಗಾಜಿನ ಮನೆಗೆ ತಲುಪಲು ಜನರು ಕಷ್ಟಪಡಬೇಕಾಯಿತು. ಲಾಲ್‌ಬಾಗ್‌ನ ನಾಲ್ಕು ದ್ವಾರಗಳಲ್ಲೂ ಜನಸಂದಣಿ ಕಂಡುಬಂದಿತ್ತು. ಯೋಧರಿಗೆ ಪುಷ್ಪನಮನ ಸಲ್ಲಿಸಲು ಈ ಬಾರಿ ಭಾರತದ ಸಮಗ್ರ ರಕ್ಷಣಾ ವ್ಯವಸ್ಥೆಯು ಅನಾವರಣಗೊಂಡಿತ್ತು.

English summary
Famous Lalbagh botanical garden's fkower show was grand success on the occasion of Independence day and it was visited by around five lakh people this time. Department of horticulture sources have said around 2.36 crores of rupees collected from enterance fees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X