ಲಾಲ್ ಬಾಗ್‌ ಫಲಪುಷ್ಪ ಪ್ರದರ್ಶನ : ಪಾರ್ಕಿಂಗ್, ಪ್ರವೇಶ ಶುಲ್ಕದ ಮಾಹಿತಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 05 : ಸಸ್ಯಕಾಶಿ ಲಾಲ್ ಬಾಗ್‌ನಲ್ಲಿ ಆಗಸ್ಟ್ 6 ರಿಂದ 15ರ ತನಕ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಬಾರಿ ಸುಮಾರು ನಾಲ್ಕು ಲಕ್ಷ ಹೂಗಳಿಂದ 'ಸಂಸತ್‌ ಭವನ'ದ ಪ್ರತಿಕೃತಿಯನ್ನು ನಿರ್ಮಾಣ ಮಾಡಲಾಗುತ್ತದೆ.

ಆಗಸ್ಟ್‌ 6 ರ ಶನಿವಾರ ಬೆಳಗ್ಗೆ 11 ಗಂಟೆಗೆ ಗಾಜಿನ ಮನೆಯಲ್ಲಿ ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್ ಅವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿ ನಡೆಯುತ್ತಿರುವುದು 204ನೇ ಪ್ರದರ್ಶನವಾಗಿದೆ.[ಸಂಸತ್ ಭವನ ನೋಡಲು ಲಾಲ್ ಬಾಗ್ ಗೆ ಬನ್ನಿ]

Lalbagh flower show 2016 : Parking, entry fee details

ಪ್ಲಾಸ್ಟಿಕ್ ಬಳಕೆಗೆ ದಂಡ : ಈ ಬಾರಿ ಫಲಪುಷ್ಪ ಪ್ರದರ್ಶನದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದರೆ ದಂಡ ಕಟ್ಟಬೇಕು. ಹಸಿರು ದಳ, ಬ್ಯೂಟಿಫುಲ್‌ ಬೆಂಗಳೂರು ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಲಾಲ್ ಬಾಗ್ಅನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಮಳಿಗೆಗಳು ಮತ್ತು ವೀಕ್ಷಕರು ಪ್ಲಾಸ್ಟಿಕ್ ಬಳಕೆ ಮಾಡುವಂತಿಲ್ಲ.[ಹಾಪ್ ಕಾಮ್ಸ್ ನಲ್ಲಿ ಎಂಟಿಆರ್ ಉತ್ಪನ್ನ ಖರೀದಿ ಮಾಡಿ]

ಉಚಿತ ಪ್ರವೇಶ : ಪ್ರತಿವರ್ಷದಂತೆ ಈ ವರ್ಷವೂ ಶಾಲಾ ಮಕ್ಕಳಿಗೆ ಉಚಿತವಾಗಿ ಫಲಪುಷ್ಪ ಪ್ರದರ್ಶನ ನೋಡಲು ಅವಕಾಶ ನೀಡಲಾಗುತ್ತದೆ. ಆಗಸ್ಟ್‌ 11 ಹಾಗೂ 15ರಂದು ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ತನಕ 10ನೇ ತರಗತಿ ಮಟ್ಟದ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗಿದೆ. ಮಕ್ಕಳು ಕಡ್ಡಾಯವಾಗಿ ಶಾಲಾ ಸಮವಸ್ತ್ರ ಧರಿಸಿರಬೇಕು ಹಾಗೂ ಸಂಬಂಧಿತ ಶಾಲೆಯ ಗುರುತಿನ ಪತ್ರ ಹೊಂದಿರಬೇಕು.[ಮಾನವೀಯತೆಯ ಸಾಕ್ಷಾತ್ಕಾರ ಮಾಡಿಸಿದ ಅಂಧ ಮಕ್ಕಳು!]

ಪ್ರವೇಶ ಶುಲ್ಕ : ಎಲ್ಲಾ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ತನಕ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ. ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 50, ಮಕ್ಕಳಿಗೆ 20 ರೂ. ಪ್ರವೇಶ ಶುಲ್ಕವಿದೆ. ರಜಾ ದಿನಗಳಲ್ಲಿ ವಯಸ್ಕರು 60, ಮಕ್ಕಳು 20 ರೂ. ಶುಲ್ಕ ಪಾವತಿ ಮಾಡಬೇಕು.

ಪಾರ್ಕಿಂಗ್ ವ್ಯವಸ್ಥೆ : ಲಾಲ್ ಬಾಗ್‌ನ 4 ಪ್ರವೇಶ ದ್ವಾರಗಳ ಮೂಲಕ ಯಾವುದೇ ಸಾರ್ವಜನಿಕ ವಾಹನಗಳಿಗೆ ಪ್ರವೇಶವಿಲ್ಲ. ಶಾಲಾ ವಾಹನಗಳು ಲಾಲ್‌ ಬಾಗ್ ಜೋಡಿ ರಸ್ತೆಯಿಂದ (ಗೇಟ್‌ ನಂ 2) ಪ್ರವೇಶಿಸಿ ಮರೀಗೌಡ ಸ್ಮಾರಕ ಭವನದ ಬಳಿ ನಿಲುಗಡೆ ಮಾಡಬಹುದು.

ಪ್ರದರ್ಶನಕ್ಕೆ ಆಗಮಿಸುವ ಜನರು ವಾಹನಗಳನ್ನು ಶಾಂತಿನಗರ ಬಸ್‌ ನಿಲ್ದಾಣದಲ್ಲಿ ಇರುವ ಬಹುಮಹಡಿ ನಿಲ್ದಾಣದಲ್ಲಿ ನಿಲ್ಲಿಸಬಹುದು. ಜೆ.ಸಿ.ರಸ್ತೆ ಕಡೆಯಿಂದ ಬರುವವರು ಮಯೂರ್‌ ರೆಸ್ಟೋರೆಂಟ್‌ ಬಳಿಯ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ನಿಲುಗಡೆ ಮಾಡಬಹುದು. ದ್ವಿಚಕ್ರ ವಾಹನಗಳನ್ನು ಲಾಲ್‌ಬಾಗ್‌ ಮುಖ್ಯ ಪ್ರವೇಶದ್ವಾರ ಮತ್ತು ಜೋಡಿ ರಸ್ತೆಯ ಪ್ರವೇಶದ್ವಾರ ನಡುವಣ 'ಅಲ್‌-ಅಮೀನ್‌' ಕಾಲೇಜು ಮೈದಾನದಲ್ಲಿ ನಿಲ್ಲಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru Lalbagh all set to host Independence day flower show from August 6 to 15, 2016. Here are the details of parking, entry fee.
Please Wait while comments are loading...