ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್ ಬಾಗ್ ಪುಷ್ಪ ಪ್ರದರ್ಶನ: ಈ ಬಾರಿ ಭಕ್ತಿ ಭಾವಗಳ ಸಮ್ಮಿಲನ

|
Google Oneindia Kannada News

ಲಾಲ್ ಬಾಗ್ ನಲ್ಲಿ ಅರಳಿ ನಿಂತಿವೆ ಪುಷ್ಪಲೋಕ, ಬನ್ನಿ ಬಣ್ಣದ ಲೋಕಕ್ಕೆ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲಾಲ್ ಬಾಗ್ ನಲ್ಲಿ ಬಣ್ಣ ಬಣ್ಣದ ಹೂವುಗಳು ಮೇಳೈಸಿವೆ. ಆದರೆ ಪುಷ್ಪವನ್ನು ನೋಡುವ ಸಂತೋಷದ ಜತೆಗೆ ಮನದಲ್ಲಿ ಭಕ್ತಿ ಕೂಡ ತುಂಬಿದೆ. ಕಾರಣ ಲಾಲ್ ಬಾಗ್ ಪುಷ್ಪ ತೋಟದಲ್ಲಿ ಬಾಹುಬಲಿ ಮೂರ್ತಿ ನಿರ್ಮಿಸಲಾಗಿದೆ. ಶುಕ್ರವಾರ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ ದೊರೆಯಿತು.

ಲಾಲ್ ಬಾಗ್ ನ ಹೂವಿನ ಗಡಿಯಾರಕ್ಕೆ ಹೊಸ ವಿನ್ಯಾಸಲಾಲ್ ಬಾಗ್ ನ ಹೂವಿನ ಗಡಿಯಾರಕ್ಕೆ ಹೊಸ ವಿನ್ಯಾಸ

ಪ್ರತಿ ವರ್ಷವೂ ಒಂದೊಂದು ವಿಷಯಾ ಧಾರಿತ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಇಲಾಖೆ ನಡೆಸುತ್ತಾ ಬಂದಿತ್ತು. ಆದರೆ ಇದೇ ಮೊದಲ ಬಾರಿಗೆ ದೇವರ ಕಲ್ಪನೆಯನ್ನಿಟ್ಟುಕೊಂಡು ಬಾಹುಬಲಿಯನ್ನು ನಿರ್ಮಾಣ ಮಾಡಿದ್ದಾರೆ. ಗಾಜಿನಮನೆ ಸುತ್ತಮುತ್ತಲು ಎಲ್ಲಿ ನೋಡಿದಲ್ಲಿ ಬಣ್ಣ ಬಣ್ಣದ ಹೂವುಗಳು ಅರಳಿನಿಂತಿದ್ದವು.

In Pics:ಲಾಲ್ ಬಾಗ್ ಪುಷ್ಪ ಪ್ರದರ್ಶನ: ವೈರಾಗ್ಯಮೂರ್ತಿಗೆ ಪುಷ್ಪಾಲಂಕಾರ!

ಬಾಹುಬಲಿ ಪ್ರತಿಮೆ ಮೈದಳೆದ ಬಾಹುಬಲಿ

ಬಾಹುಬಲಿ ಪ್ರತಿಮೆ ಮೈದಳೆದ ಬಾಹುಬಲಿ

ಗಾಜಿನ ಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ವೀಕ್ಷಕರಿಗೆ ಶ್ರವಣಬೆಳಗೊಳವನ್ನು ಅನತಿ ದೂರದಿಂದ ವೀಕ್ಷಿಸಿದಾಗ ಸಿಗುವ ಪ್ರಾಕೃತಿಕ ಹಿತಾನುಭವ ದೊರೆಯಲಿದೆ. ಗಾಜಿನ ಮನೆಯ ಮಧ್ಯಭಾಗದಲ್ಲಿ 60/40 ಅಡಿ ವಿಸ್ತೀರ್ಣದಲ್ಲಿ ಹಾಗೂ 30 ಅಡಿ ಎತ್ತರಕ್ಕೆ ಶ್ರವಣಬೆಳಗೊಳದ ಇಂದ್ರಗಿರಿ ಬೆಟ್ಟ ಮೈದಳೆದು ನಿಂತಿದೆ. ಸುತ್ತಲೂ ನಾನಾ ಬಗೆಯ ಪುಷ್ಪಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದ್ದವು.

ಪ್ರತಿ 12 ವರ್ಷಕ್ಕೊಮ್ಮೆ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಈ ಬಾರಿ 88 ನೇ ಮಹಾಮಸ್ತಕಾಭಿಷೇಕ ಫೆಬ್ರವರಿಯಲ್ಲಿ ನಡೆಯಲಿದೆ. ಅದರ ನೆನಪಿಗಾಗಿ ಈ ಬಾರಿ ಲಾಲ್ ಬಾಗ್ ನಲ್ಲಿ ಮಹಾಮಸ್ತಕಾಭಿಷೇಕದ ಪರಿಕಲ್ಪನೆಯಡಿ ಗೊಮ್ಮಟೇಶ್ವರ ಮೂರ್ತಿ ಮತ್ತು ಶ್ರವಣಬೆಳಗೊಳದ ಚಿತ್ರಣವನ್ನು ನಿರ್ಮಿಸಲಾಗಿದೆ.

ಉದ್ಯಾನ ಆಯ್ದ ಭಾಗಗಳಲ್ಲಿ ಸಿರಿಧಾನ್ಯ ಬಾಹುಬಲಿ

ಉದ್ಯಾನ ಆಯ್ದ ಭಾಗಗಳಲ್ಲಿ ಸಿರಿಧಾನ್ಯ ಬಾಹುಬಲಿ

ಉದ್ಯಾನ ಆಯ್ದ ಭಾಗಗಳಲ್ಲಿ ಸಿರಿಧಾನ್ಯ ಸೇರಿದಂತೆ ನಾನಾ ವಸ್ತುಗಳಲ್ಲಿ ಬಾಹುಬಲಿಯ ಪ್ರತಿಮೆ, ಚಿತ್ರಗಳಿಗೆ ರೂಪ ಕೊಡಲಾಗಿದೆ. . ಗಾಜಿನ ಮನೆಯಲ್ಲಿ ಫೈಬರ್ ನಿಂದ ಮಾಡಿದ ಬೃಹತ್ ಬಾಹುಬಲಿಯ ಮೂರ್ತಿಯೂ ತಲೆ ಎತ್ತಿದೆ. ನವಣೆ, ಸಜ್ಜೆ, ರಾಗಿ, ಬರಗು ಇತ್ಯಾದಿ ಸಿರಿಧಾನ್ಯಗಳನ್ನು ಬಳಸಿ ಕಲಾವಿದ ಶಿವಲಿಂಗಪ್ಪ ಬಡಿಗೇರ್ ಅವರು ಬಾಹುಬಲಿ ಮುಖದ ಕಲಾಕೃತಿ ರೂಪಿಸಿದ್ದಾರೆ.

ಲಾಲ್ ಬಾಗ್ ನಲ್ಲೂ ನಡೆಯಲಿದೆ ಬಾಹುಬಲಿ ಮಸ್ತಕಾಭಿಷೇಕಲಾಲ್ ಬಾಗ್ ನಲ್ಲೂ ನಡೆಯಲಿದೆ ಬಾಹುಬಲಿ ಮಸ್ತಕಾಭಿಷೇಕ

ಪುಷ್ಪ ಪ್ರದರ್ಶನದಲ್ಲಿ ವಿದೇಶಿ ಹೂವುಗಳದ್ದೇ ದರ್ಬಾರು

ಪುಷ್ಪ ಪ್ರದರ್ಶನದಲ್ಲಿ ವಿದೇಶಿ ಹೂವುಗಳದ್ದೇ ದರ್ಬಾರು

ನೂರಾರು ಆಕರ್ಷಕ ಹೂವುಗಳ ನಡುವೆ ಹತ್ತಾರು ವಿದೇಶಿ ಹೂವುಗಳು ಈ ಬಾರಿ ಪುಷ್ಪ ಪ್ರಿಯರಿಗೆ ವಿಶೇಷ ಮುದ ನೀಡಿದೆ. ಗೊಮ್ಮಟಗಿರಿ ಹಾಗೂ ಮಸ್ತಕಾಭಿಷೇಕದ ಲಾಂಛನದ ಪ್ರತಿರೂಪಗಳಲ್ಲಿ ಆಯ್ದ ಭಾಗಗಳಲ್ಲಿ ವಿದೇಶಿ ಹೂವುಗಳಾದ ಹೈಪರಿಕಂ, ಪಿನ್ ಕುಷನ್, ಲ್ಯೂಕೋಡೆಂಟ್ರಾನ್, ಭಾಕ್ಸಿಯಾ, ವ್ಯಾಕ್ಸ್ ಫ್ಲವರ್, ಹೊಸ ತಳಿಯ ಆಂಥೂರಿಯಂ, ಹೊಸ ಬಗೆಯ ಏಷ್ಯಾಟಿಕ್ ಹಾಗೂ ಓರಿಯಂಟಲ್ ಲಿಲ್ಲಿಗಳು ಪ್ರಮುಖ ಆಕರ್ಷಣೀಯ ಪುಷ್ಪಗಳಾಗಿವೆ.

ಶೀಲತ ಹೂವುಗಳ ಹಿತಾನುಭವ

ಶೀಲತ ಹೂವುಗಳ ಹಿತಾನುಭವ

ಬಾಹುಬಲಿ ಹಿಂದಿನ ಸಾಲುಗಳಲ್ಲಿ ಊಟಿ ಗಿರಿಧಾಮಗಳಿಂದ ಬರುತ್ತಿದ್ದ ಹಲವು ಶೀತಲವಲಯದ ಹೂವುಗಳು ಎಲ್ಲರನ್ನು ಆಕರ್ಷಿಸುತ್ತಿದ್ದವು. ಈ ಬಾರಿ ಅಮಿತ್ ಅಗರ್ ವಾಲ್ ಅವರು ಸಿಕ್ಕಿಂ ಹಾಗೂ ಡಾರ್ಜೆಲಿಂಗ್ ನಿಂದ ಹಲವು ಅಪರೂಪದ ೫೦೦ ಶೀತಲವಲಯದ ಹೂವುಗಳನ್ನು ಒದಗಿಸಿದ್ದಾರೆ. ಅವುಗಳಲ್ಲಿ ಪ್ರಿಮುಲ್ಲಾ, ವಲ್ ಗ್ಯಾರಿಸ್, ಕ್ಯಾಲಾಂಕೋ, ಬ್ಲಾಸ್ಟಿಡಿನಾ, ಸಿನಿರೇರಿಯಾ ಆಕರ್ಷಕ ಹೂವುಗಳಿವೆ.

ಲಾಲ್ ಬಾಗ್ ಬಲ್ಲಿ ಪೊಲೀಸ್ ಅಧಿಕಾರಿಗಳ ಹದ್ದಿನ ಕಣ್ಣು

ಲಾಲ್ ಬಾಗ್ ಬಲ್ಲಿ ಪೊಲೀಸ್ ಅಧಿಕಾರಿಗಳ ಹದ್ದಿನ ಕಣ್ಣು

ಲಾಲ್ ಬಾಗ್ ನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯ ಕಣ್ಣು ತಪ್ಪಿಸಿ ಕೆರೆಗೆ ತ್ಯಾಜ್ಯ ಎಸೆಯುವುದು, ಕಾಂಪೌಂಡ್ ಹಾರಿ ಬಂದು ಅಲ್ಲಿನ ಶ್ರೀಗಂಧದ ಮರಗಳನ್ನು ಕದಿಯುವುದು, ಯುವತಿಯರು, ಮಹಿಳೆಯರನ್ನು ಚುಡಾಯಿಸುವುದಕ್ಕೆ ಇನ್ನು ಬ್ರೇಕ್ ಬೀಳಲಿದೆ. ಏಕೆಂದರೆ ಉದ್ಯಾನದಲ್ಲಿ ಇದೇ ಮೊದಲ ಬಾರಿಗೆ 100 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

ಗಾಜಿನ ಮನೆ ಬಳಿ ವಿಶೇಷ ಪೊಲೀಸ್ ಚೌಕಿ ತೆರಯಲಾಗುತ್ತದೆ, ಉದ್ಯಾನದಾದ್ಯಂತ 100 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಐದು ಆಂಬುಲೆನ್ಸ್ ಗಳು, ವೈದ್ಯರ ತಂಡವನ್ನೊಳಗೊಂಡ 2 ಮಿನಿ ಆಸ್ಪತ್ರೆಗಳನ್ನು ತೆರೆಯಲಾಗುತ್ತದೆ. ಹಾವು ಹಿಡಿಯುವುದಕ್ಕೆ ನಾಲ್ವರನ್ನು ನಿಯೋಜಿಸಲಾಗಿದೆ. ಲಾಲ್ ಬಾಗ್ ಕೆರೆ ಬಳಿ ಈಜು ಪರಿಣಿತರನ್ನು ನಿಯೋಜಿಸಲಾಗುತ್ತದೆ. 200 ಮಂದಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತದೆ. ಫಲಪುಷ್ಪ ಪ್ರದರ್ಶನಕ್ಕೆ 1.63 ಕೋಟಿ ವೆಚ್ಚವಾಗಲಿದೆ. 5 ಲಕ್ಷ ಮಂದಿ ನಿರೀಕ್ಷೆಯಿದೆ.

ಓಲಾ-ಊಬರ್ ನಿಲುಗಡೆ

ಓಲಾ-ಊಬರ್ ನಿಲುಗಡೆ

ಓಲಾ-ಊಬರ್ ಗಳಲ್ಲಿ ಬರುವ ಹಾಗೂ ಹೋಗುವ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಲಾಲ್ ಬಾಗ್ ಆವರಣದಲ್ಲಿರುವ ಹಾಪ್ ಕಾಮ್ಸ್ ಆವರಣದಲ್ಲಿ ಓಲಾ-ಊಬರ್ ಪಿಕ್ ಅಪ್ ಮತ್ತು ಡ್ರಾಪ್ ಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಮೊಬೈಲ್ ಅಪ್ಲಿಕೇಷನ್ ಮೂಲಕ ಕ್ಯಾಬ್ ಗಳನ್ನು ಬುಕ್ ಮಾಡುವವರಿಗೆ ಸಹಕಾರಿಯಾಗಲಿದೆ.

ಮಕ್ಕಳಿಗೆ ಪ್ರವೇಶ ಉಚಿತ

ಮಕ್ಕಳಿಗೆ ಪ್ರವೇಶ ಉಚಿತ

ಜನವರಿ 19 , 22 ರಿಂದ25 ರವರೆಗೆ ಶಾಲಾ ಮಕ್ಕಳಿಗೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶವಿರುತ್ತದೆ. ಖಾಸಗಿ ಹಾಗೂ ಸರ್ಕಾರಿ ಶಾಲಾ ಮಕ್ಕಳು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಆಗಮಿಸಬಹುದಾಗಿದೆ. ಲಾಲ್ ಬಾಗ್ ನ ಸುಂದರ ಪುಷ್ಪಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಫಲಪುಷ್ಪ ಪ್ರದರ್ಶನ ಜನವರಿ 28 ರವರೆಗೆ ನಡೆಯಲಿದೆ.

English summary
The Floral Exhibition at Lalbagh organized by department of Horticulture, this exploring not only beauty of flora but also religious devotion. Friday the exhibition has been started and this time more than five lakhs people to be visited the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X