ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್ ಬಾಗಿನಲ್ಲಿ ವಿಕ್ರಮ್ ಸಾವು, 5 ಲಕ್ಷ ಪರಿಹಾರ ಘೋಷಣೆ

By Ananthanag
|
Google Oneindia Kannada News

ಬೆಂಗಳೂರು, ಡಿಸೆಂಬರ್ 28: ಬೆಂಗಳೂರಿನ ಲಾಲ್ ಬಾಗಿನ ಉದ್ಯಾನವನದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ತೋಟಗಾರಿಕಾ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ 5 ಲಕ್ಷ ಪರಿಹಾವರನ್ನು ಘೋಷಣೆ ಮಾಡಿದ್ದು, ತನಿಖೆಗೆ ಆದೇಶಿಸಿದ್ದಾರೆ.

ಲಾಲ್ ಬಾಗಿನ ಉದ್ಯಾನವನದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ಬಾಲಕ ವಿಕ್ರಮ್(6) ನ ಮೇಲೆ ಉದ್ಯಾನವನದ ಪಿಲ್ಲರ್ ಕುಸಿದು ಸಾವು ಸಂಭವಿಸಿತ್ತು.

ವಿಕ್ರಮ್ ಶ್ರೀರಾಮಪುರದ ಕುಮಾರ್ ಹಾಗೂ ರೇವತಿ ದಂಪತಿಗಳ ಪುತ್ರ. ಸ್ಥಳೀಯ ಬಿಬಿಎಂಪಿ ಭಾರತೀಯ ವಿದ್ಯಾಭವನದಲ್ಲಿ 1ನೇ ತರಗತಿ ಓದುತ್ತಿದ್ದ ವಿಕ್ರಮ್ ಕ್ರಿಸ್ ಮಸ್ ರಜೆ ಪ್ರಯುಕ್ತ ಸಂಬಂಧಿಕರೊಂದಿಗೆ ಲಾಲ್ ಬಾಗಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ ಎಂದು ಸಿದ್ದಾಪುರ ಠಾಣಾ ಪೊಲೀಸರು ತಿಳಿಸಿದರು.[ಕಿಲಕಿಲನೆ ನಗೆ ಬೀರುವ ಲಾಲ್ಬಾಗ್ ಪುಷ್ಪಲೋಕ ನೋಡಿ ಬನ್ನಿ]

Lal Bagh the boy vikram died. Parents donate his eyes

ಪಕ್ಷಿಗಳಿಗೆ ನೀರುಣಿಸುವ ಉದ್ದೇಶದಿಂದ 4 ಅಡಿ ಎತ್ತರದ ಪಿಲ್ಲರ್ ನಿಲ್ಲಿಸಿ ಕಲ್ಲಿನ ತೊಟ್ಟಿ ನಿರ್ಮಿಸಲಾಗಿದೆ. ಇದರ ಬಳಿ ಸೋಮವಾರ ಮಧ್ಯಾಹ್ನ 2.30 ಸಮಯದಲ್ಲಿ ಮಿಥಲಾ ಮೊಬೈಲ್ ಫೊಟೋ ತೆಗೆಯಲು ಮುಂದಾಗಿ ವಿಕ್ರಮ್ ನನ್ನು ಪಿಲ್ಲರ್ ಮೇಲೆ ಹತ್ತಿಸಿದ್ದಾಳೆ ಬಾರದಿಂದ ಪಿಲರ್ ಕುಸಿದಿದ್ದು, ನೀರಿನ ತೊಟ್ಟಿ ತಲೆಗೆ ಬಡಿದಿದೆ. ತೀವ್ರ ರಕ್ತ ಸ್ತ್ರಾವವಾಗಿದ್ದು ಸಂಬಂಧಿಕರು ದ್ವಿಚಕ್ರವಾಹನದಲ್ಲಿಯೆ ಸೌತ್ ಸಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ತಂದೆ ತಾಯಿ ಸ್ಥಳಕ್ಕಾಗಮಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸುವ ವೇಳೆಯಲ್ಲಿ ವಿಕ್ರಮ್ ಅಸುನೀಗಿದ್ದಾನೆ.[ಹೂವಿನ ತೋಟದಲ್ಲಿ ಕಳೆದುಹೋದ ಹೂವಿನಂಥ ಹುಡುಗಿ]

ಶಾಲೆಯಲ್ಲಿ ಉತ್ತಮ ಡ್ಯಾನ್ಸ್ ರ್ ಆಗಿದ್ದ ವಿಕ್ರಮ್ ಅನ್ನು ಕಳೆದುಕೊಂಡ ಪೋಷಕರು ನೋವನ್ನು ತೊಡಿಕೊಂಡಿದ್ದು ಆಸ್ಪತ್ರೆಯಲ್ಲಿ ವಿಕ್ರಮ್ ನೇತ್ರವನ್ನು ದಾನ ಮಾಡುವುದಾಗಿ ತಿಳಿಸಿದರು. ಇಬ್ಬನೇ ಮಗನ ಕಣ್ಣುಗಳನ್ನು ಮತ್ತೊಂದು ಜೀವನ ಬೆಳಕಾಗಿಸಲು ನೀಡುದ್ದಾರೆ. ಇನ್ನು ವಿಕ್ರಂ ಸಾವಿನ ಸಂಬಂಧ ಅಸಹಜ ಸಾವು ಪ್ರಕರಣದಲ್ಲಿ ಕೇಸು ದಾಖಲಿಸಲಾಗಿದೆ ಎಂದು ಡಿಸಿಪಿ ಎಸ್.ಡಿ. ಶರಣಪ್ಪ ತಿಳಿಸಿದರು.

ಈ ಸಂಬಂಧ ತೋಟಗಾರಿಕಾ ಇಲಾಖೆಯಲ್ಲಿ ಅನೇಕ ವಾದ ವಿವಾದ ನಡೆದಿದ್ದು ತೋಟಗಾರಿಕಾ ಸಚಿವ ಬುಧವಾರ 5ಲಕ್ಷ ಪರಿಹಾರ ಘೋಷಣೆ ಮಾಡಿದರು. ಇನ್ನು ಲಾಲ್ ಬಾಗಿನಲ್ಲಿ ಪಕ್ಷಿಗಳಿಗಾಗಿ ಇರಿಸಿದ್ದ ನೀರಿನ ಕಲ್ಲುಗಳನ್ನು ತೆರವುಗೊಳಿಸಲಾಗಿದೆ. ಹಾಗೆಯೆ ಬಾಲಕ ಮೃತರಾಗಿರುವುದಕ್ಕೆ ಸೂಕ್ತ ತನಿಖೆಗಾಗಿ ಆದೇಶ ಹೊರಡಿಸಲಾಗಿದೆ.

ಇನ್ನು 2014. ಸೆಪ್ಟೆಂಬರ್ 14ರಲ್ಲಿ ಲಾಲ್ ಬಾಗಿನಲ್ಲಿ ಆಟವಾಡುತ್ತಿದ್ದ ವೇಳೆ ಪ್ರಜ್ವಲ್(3) ನೀರಿನ ತೊಟ್ಟಿಯಲ್ಲಿ ಬಿದ್ದು ಮೃತಪಟ್ಟಿದ್ದ, ಹಾಗೆಯೇ 2015, ಆಗಸ್ಟ್ 18 ರಂದು ಜೈವಿಕ ಉದ್ಯಾನದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಏಳು ವರ್ಷದ ವೈಷ್ಣವಿ ಹೆಜ್ಜೇನು ಕಡಿತದಿಂದ ಮೃತಪಟ್ಟಿದ್ದಳು.

English summary
In the LalBagh the boy vikram died, Horticulture Minister Mallikarjun announced Rs 5 lakh compensation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X