ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ವರು ಮಹಿಳೆಯರಿಗೆ ಪಾರ್ಲಿಮೆಂಟ್ ಟಿಕೆಟ್ ಕೊಡಿ: ಲಕ್ಷ್ಮಿ ಹೆಬ್ಬಾಳ್ಕರ್‌

By Nayana
|
Google Oneindia Kannada News

ಬೆಂಗಳೂರು, ಜೂನ್ 30: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ನಾಲ್ವರು ಮಹಿಳಾ ಅಭ್ಯರ್ಥಿಗಳಿಗಾದರೂ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ‌ಹೆಬ್ಬಾಳ್ಕರ್ ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ನಾಲ್ಕು ತಿಂಗಳ ಬಳಿಕ ಸಭೆ ನಡೆಸಿದ್ದೇವೆ, ಅಖಿಲ ಭಾರತ ಮಹಿಳಾ‌ ಕಾಂಗ್ರೆಸ್ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆದೇಶದ ಮೇರೆಗೆ ಪ್ರೊಜೆಕ್ಟ್ ಶಕ್ತಿ ಎನ್ನುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ವಾಟ್ಸ್ ಆಪ್ ನಂಬರ್ ಅನ್ನು ರಾಹುಲ್ ಗಾಂಧಿ ನೀಡಿದ್ದು ಈ ನಂಬರ್ ನಿಂದ‌ ಮಹಿಳಾ ಕಾಂಗ್ರೆಸ್ ನ ಬಲವರ್ದಿಸಬಹುದು.

ಅವಧಿಗೂ ಮುನ್ನ ಲೋಕಸಭಾ ಚುನಾವಣೆ: ನಿಜವಾದೀತೇ ದೇವೇಗೌಡರ ಭವಿಷ್ಯ?ಅವಧಿಗೂ ಮುನ್ನ ಲೋಕಸಭಾ ಚುನಾವಣೆ: ನಿಜವಾದೀತೇ ದೇವೇಗೌಡರ ಭವಿಷ್ಯ?

ಲೋಕಸಭಾ ಚುನಾವಣೆಯಲ್ಲಿ ಮಹಿಳೆಯ ಧ್ವನಿ ದೇಶದಲ್ಲಿ ರಾಹುಲ್ ಸಂಪರ್ಕಕ್ಕೆ ಸಹಾಯವಾಗಲಿದೆ, ಮುಂಬರುವ ದಿನದಲ್ಲಿ ಬೂತ್ ಮಟ್ಟದ ಕಾತ್ಯಕರ್ತರ ಜೊತೆ ನೇರವಾಗಿ ಸಂಪರ್ಕದಲ್ಲಿರಲು ಇದೊಂದು ಅತ್ಯಂತ ಗಮನಾರ್ಹ ಸಾಧನ ಆಗಲಿದೆ ಎಂದರು.

Lakshmi Hebbalkar sought four tickets for women in parliament elections

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಸಭೆಯಲ್ಲಿ‌ ಚರ್ಚೆ ನಡೆಸಲಾಗಿದೆ. ಮುಂಬರಲಿರುವ ಲೋಕಸಭೆ ಚುನಟವಣೆಯಲ್ಲಿ ಕನಿಷ್ಠ 3-4 ಮಹಿಳೆಯರಿಗಾದರೂ ಟಿಕೆಟ್ ನೀಡಬೇಕು,ಒಳ್ಳೆಯ ಅಭ್ಯರ್ಥಿಗಳ ಬೆನ್ನುತಟ್ಟಬೇಕು.

ಹಳ್ಳಿಯಿಂದ ದಿಲ್ಲಿವರಗೂ ಮಹಿಳೆ ಮುಜುಗರದಿಂದಲೇ ಬರಬೇಕಿದೆ, ಲೋಕಸಭೆಯಲ್ಲಾದರೂ ಮೂರು ನಾಲ್ಕು ಜನರಿಗೆ ಟಿಕಟ್ ನೀಡಬೇಕು, ಸಂಪುಟ ವಿಸ್ತರಣೆಯಲ್ಲಿ ಮತ್ತೊಂದು ಸಚಿವ ಸ್ಥಾನ ಮಹಿಳೆಗೆ ನೀಡಲಿ ಎಂದು ಮನವಿ ಮಾಡಿದರು.

English summary
KPCC women cell president and MLA Lakshmi Hebbalkar sought three to four tickets for women candidates in upcoming parliament elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X