ಬೆಂಗಳೂರು ಕರಗಕ್ಕೆ ಸಾಕ್ಷಿಯಾದ ಲಕ್ಷಾಂತರ ಭಕ್ತರು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 23 : ಐತಿಹಾಸಿಕ ಬೆಂಗಳೂರು ಕರಗ ಚೈತ್ರ ಪೂರ್ಣಿಮೆಯ ದಿನವಾದ ಶುಕ್ರವಾರ ರಾತ್ರಿ ನಡೆಯಿತು. ಸ್ಥಳೀಯರು, ಹೊರರಾಜ್ಯದವರು ಸೇರಿದಂತೆ ಲಕ್ಷಾಂತರ ಭಕ್ತರು ಕರಗ ಉತ್ಸವಕ್ಕೆ ಸಾಕ್ಷಿಯಾದರು.

ಕೆ.ಆರ್.ಮಾರುಕಟ್ಟೆ ಸಮೀಪವಿರುವ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ತಡರಾತ್ರಿ ಕರಗ ಹೊತ್ತಿದ್ದ ಅರ್ಚಕ ಲಕ್ಷ್ಮೀಶ ಅವರು ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. [ಬೆಂಗಳೂರು ಕರಗ ಎಷ್ಟೊಂದು ಸುಂದರ!]

karaga

ಒಂದು ಕೈಯಲ್ಲಿ ಕತ್ತಿ ಮತ್ತು ಮತ್ತೊಂದು ಕೈಯಲ್ಲಿ ಮಂತ್ರದಂಡ ಹಿಡಿದ ಲಕ್ಷ್ಮೀಶ ಅವರು ಧರ್ಮರಾಯಸ್ವಾಮಿ ದೇವಾಲಯದ ಗರ್ಭಗುಡಿಯಿಂದ ಹೊರಕ್ಕೆ ಬರುತ್ತಿದ್ದಂತೆ ತಮಟೆ ವಾದನ, ಮಂಗಳ ವಾದ್ಯಗಳು ಮೊಳಗಿದವು. ಖಡ್ಗ ಹಿಡಿದಿದ್ದ ವೀರಕುಮಾರರು ಗೋವಿಂದಾ...ಗೋವಿಂದಾ ಎನ್ನುತ್ತಾ ಕರಗದೊಂದಿಗೆ ಹೆಜ್ಜೆ ಹಾಕಿದರು. [ಬೆಂಗಳೂರು ಕರಗ ಫೇಸ್ ಬುಕ್ ಪುಟ]

ನಗರ್ತಪೇಟೆಯ ವೇಣು ಗೋಪಾಲಸ್ವಾಮಿ ದೇವಾಲಯ, ಸಿದ್ದಣ್ಣಗಲ್ಲಿಯ ಭೈರೇದೇವರ ದೇವಾಲಯ, ಕಬ್ಬನ್‌ಪೇಟೆಯ ರಾಮಸೇವಾ ಮಂದಿರ, ಮಕ್ಕಳ ಬಸವನಗುಡಿ, ಅರಳೆಪೇಟೆಯ ಮಸ್ತಾನ್ ಸಾಹೇಬರ ದರ್ಗಾ, ಗಾಣಿಗರಪೇಟೆಯ ಚನ್ನರಾಯಸ್ವಾಮಿ ದೇವಾಸ್ಥಾನದ ಮೂಲಕ ಕರಗ ನಗರದ 4 ದಿಕ್ಕುಗಳಲ್ಲಿ ಸಂಚಾರ ನಡೆಸಿತು.

ದೇವಾಲಯದಿಂದ ಕರಗ ಹೊರಬರುವ ಮುನ್ನ ಹೂ ಮತ್ತು ತೋರಣಗಳಿಂದ ಸಿಂಗಾರಗೊಂಡಿದ್ದ ಮಹಾರಥದಲ್ಲಿ ಅರ್ಜುನ, ದ್ರೌಪದಿ ದೇವಿ ಹಾಗೂ ಮುತ್ಯಾಲಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ಈ ರಥದೊಂದಿಗೆ ಉತ್ಸವ ಮೂರ್ತಿಗಳ ಮೆರವಣಿಯೂ ನಡೆಯಿತು.

ಕೇಂದ್ರ ಸಚಿವ ಅನಂತ್ ಕುಮಾರ್, ಬಿಬಿಎಂಪಿ ಮೇಯರ್ ಬಿ.ಎನ್‌. ಮಂಜುನಾಥ ರೆಡ್ಡಿ, ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಮೊದಲಾದವರು ಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಹೂವಿನ ಕರಗ ವೀಕ್ಷಿಸಿದರು.

ಬೆಂಗಳೂರು ಕರಗದ ಚಿತ್ರಗಳು

-
-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lakhs of devotees witnessed for the annual Bengaluru Karaga. Karaga begin at the Dharmarayaswamy temple at Thigalarapet around Friday midnight. Karaga is an integral part of the identity of the Tigala community in the region.
Please Wait while comments are loading...