ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಬಿಡದಂತೆ ಅಣ್ಣನಿಗೆ ಲಖನ್ ಜಾರಕಿಹೊಳಿ ಸಲಹೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಕಾಂಗ್ರೆಸ್ ಹೈಕಮಾಂಡ್ ಮಣಿಸಲು ಮುಂದಾಗಿರುವ ಸಚಿವ ರಮೇಶ್ ಜಾರಕಿಹೊಳಿಗೆ ಕುಟುಂಬದಲ್ಲೇ ವಿರೋಧ ವ್ಯಕ್ತವಾಗಿದೆ.

ಇಂದು ಸಿದ್ದರಾಮಯ್ಯ-ರಾಹುಲ್ ಭೇಟಿ: ಮಹತ್ವದ ಮಾತುಕತೆ ಸಾಧ್ಯತೆಇಂದು ಸಿದ್ದರಾಮಯ್ಯ-ರಾಹುಲ್ ಭೇಟಿ: ಮಹತ್ವದ ಮಾತುಕತೆ ಸಾಧ್ಯತೆ

ರಮೇಶ್ ಜಾರಕಿಹೊಳಿ ಕಿರಿಯ ಸೋಹದರ ಲಖನ್ ಜಾಕಿಹೊಳಿ ಬೆಂಗಳೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುವ ಪ್ರಯತ್ನಕ್ಕೆ ಅಡ್ಡಿ ಉಂಟು ಮಾಡಿದ್ದಾರೆ.

ಸಂಧಾನಕ್ಕೆ ತೆರಳಿದ್ದ ಎಚ್ ಡಿಕೆಗೆ ಜಾರಕಿಹೊಳಿ ಸಹೋದರರ 5 ಷರತ್ತುಗಳುಸಂಧಾನಕ್ಕೆ ತೆರಳಿದ್ದ ಎಚ್ ಡಿಕೆಗೆ ಜಾರಕಿಹೊಳಿ ಸಹೋದರರ 5 ಷರತ್ತುಗಳು

ಬಿಜೆಪಿಗೆ ಸೇರಿದರೆ ಒಂದೇ ವರ್ಷ ಭವಿಷ್ಯ, ಒಂದು ವರ್ಷದ ಅಧಿಕಾರವನ್ನು ಏರಿದ ಬಳಿಕ ಬಿಜೆಪಿಯವರು ನಿಮ್ಮನ್ನು ರಾಜಕೀಯವಾಗಿ ಕಡೆಗಣಿಸುತ್ತಾರೆ, ಹೀಗಾಗಿ ಕಾಂಗ್ರೆಸ್ ನಲ್ಲಿಯೇ ಇದ್ದು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂದು ಬುದ್ಧಿಮಾತು ಹೇಳಿದ್ದಾರೆ ಎನ್ನಳಾಗಿದೆ.

Lakhan Jarkiholi suggests Ramesh not to quit Congress

ಐವರು ಸಹೋದರರ ಪೈಕಿ ರಮೇಶ್, ಸತೀಶ್, ಲಖನ್ ಹಾಗೂ ಭೀಮ್ ಶೀ ಕಾಂಗ್ರೆಸ್ ನಲ್ಲಿದ್ದು ಇನ್ನೊಬ್ಬ ಸಹೋದರ ಬಾಲಚಂದ್ರ ಮಾತ್ರ ಈಗಾಗಲೇ ಬಿಜೆಪಿಯಲ್ಲಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಲಖನ್ ಜಾರಕಿಹೊಳಿ ಬಿಜೆಪಿಗೆ ಸೇರುತ್ತಾರೆ ಎನ್ನುವ ವಿಚಾರಗಳು ಹರಿದಾಡಿದ್ದವು, ಬಳಿಕ ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ ಎಂದು ಹೇಳಿದ್ದರು.

ಕಳೆದ ಹದಿನೈದು ದಿನಗಳಿಂದ, ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎನ್ನುವುದು ರಾಜಕೀಯ ವಲಯದಲ್ಲಿ ನಡೆಯುತ್ತಿದ್ದ ದೊಡ್ಡ ಚರ್ಚೆಯಾಗಿತ್ತು, ಬಳಿಕ ಬಿಜೆಪಿ ಸೇರಲು ನಾವು ನಿರ್ಧರಿಸಿರಲಿಲ್ಲ, ಕೆಲವು ಆಂತರಿಕ ಗೊಂದಲಗಳಿತ್ತು ಅದೆಲ್ಲವೂ ಈಗ ಬಗೆಹರಿದಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದರು.

English summary
Younger brother of minister Ramesh Jarkiholi, Lakhan has suggested his elder not to quit the Congress party for his better future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X