ಹಿಂದೆ ಕೆರೆ ಪ್ರದೇಶ ಗುಳಂ, ಈಗ ಕೆರೆ ಒತ್ತುವರಿ ವರದಿಯೇ ಗುಳುಂ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 05: ನಗರದಲ್ಲಿ ಆಗಿರುವ ಕೆರೆ ಹಾಗೂ ರಾಜಕಾಲುವೆ ಒತ್ತುವರಿಯನ್ನು ತೆರೆವುಗೊಳಿಸಬೇಕು ಎಂದು ದಶಕಗಳಿಂದಲೂ ನಾಗರಿಕರಿಂದ ದೂರು ಕೇಳಿಬರುತ್ತಿದೆ. ಆಡಳಿತಕ್ಕೆ ಬಂದಿರುವಸರಕಾರಗಳು ಸಾಲು ಸಾಲು ಸಮಿತಿಗಳನ್ನು ರಚಿಸಿ ವರದಿ ಬಂದವಾದರೂ, ಈ ವರೆಗೂ ಆ ವರದಿಗಳ ಬಗ್ಗೆ ಯಾವುದೇ ಕ್ರಮವನ್ನೂ ಯಾವ ಸರ್ಕಾರವೂ ಕೈಗೊಂಡಿಲ್ಲ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.

ಎ.ಟಿ.ರಾಮಸ್ವಾಮಿ ವರದಿ, ಸುಬ್ರಮಣ್ಯ ಸಮಿತಿ ವರದಿಗಳ ಕುರಿತು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತುಟಿ ಬಿಚ್ಚದೇ ಕುಳಿತಿದೆ, ಇನ್ನೂ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕೂಡ ತಮಗೂ ಈ ವರದಿಗಳಿಗೂಸಂಬಂಧವೇ ಇಲ್ಲದಂತೆ ಕುಳಿತಿವೆ. ಇನ್ನು ಇತ್ತೀಚಿಗೆ ಮಾನ್ಯ ಮುಖ್ಯಮಂತ್ರಿಗಳು ರಚಿಸಿದ ಕೆ.ಬಿ. ಕೋಳಿವಾಡ ಸಮಿತಿ, ರಚನೆಯಾದಾಗಿನಿಂದಲೂ ಕೇವಲ ಠುಸ್ ಪಟಾಕಿಯಂತಾಗಿದೆ. [ಬೆಂಗಳೂರಿಗೆ ಮುಂದೇನು ಕಾದಿದೆಯೋ ಭಗವಂತಾ!]

ಸಂತೆಯಲ್ಲಿ ಹಾವಾಡಿಗ ತನ್ನ ಬಳಿ ನಾಗರಹಾವು ಹಾಗೂ ಮುಂಗುಸಿ ಇರುವುದಾಗಿ ಹೇಳುತ್ತಾ, ಅವುಗಳನ್ನು ಕಾದಾಟಕ್ಕೆ ಬಿಡುವುದಾಗಿ ಹೇಳುತ್ತಾ ಜನರಿಂದ ಹಣ ಗಳಿಸುತ್ತಾನೆ, ಆದರೆ ಬೆಳಗ್ಗೆಯಿಂದ ಸಂಜೆವರೆಗೂ ಈಗ ಕಾದಟಕ್ಕೆ ಇಳಿಸುತ್ತೇನೆ, ಆಟ ತೋರುತ್ತೇನೆ ಎನ್ನುತ್ತಾ ಕಾಲಾಹರಣ ಮಾಡಿ ಹಣ ಮಾಡುಕೊಳ್ಳುತ್ತಾನೆಯೇ ವಿನಃ ಅವುಗಳನ್ನು ಎಂದಿಗೂ ಎದುರು ಬದರು ಕಾದಾಡಲು ಬಿಡುವುದಿಲ್ಲ.

ಹಾಗೆಯೇ ಕೆ.ಬಿ. ಕೋಳಿವಾಡನವರು ಕೂಡ ಸಮಿತಯ ವರದಿ ರಚನೆ ಬಿಡುಗಡೆಯಾದರೆ ಅದೆಷ್ಟೋ ಪ್ರಭಾವಿ ಜನರು ಸಿಕ್ಕಿ ಬೀಳುವುದಾಗಿ, ರಾಜಕೀಯ ನಾಯಕರುಗಳೂ ನಗರದ ಸುತ್ತಾ ರಾಜಕಾಲುವೆಹಾಗೂ ಕೆರೆ ಒತ್ತುವರಿ ಮಾಡಿರುವುದಾಗಿ ಸ್ವತಃ ಪತ್ರಿಕಾ ಗೋಷ್ಠಿ ಕರೆದು ಹೇಳಿ ಹಲವು ತಿಂಗಳುಗಳೇ ಕಳೆದು ಹೋಗಿವೆ! ಆದರೆ ಈವರೆಗೂ ತಮ್ಮ ವರದಿಯನ್ನು ಅವರು ಸಲ್ಲಿಸಿಲ್ಲ.

ಕೋಳಿವಾಡ ಸಮಿತಿ ವರದಿ ಸಲ್ಲಿಕೆಯಾಗಿಲ್ಲ ಏಕೆ?

ಕೋಳಿವಾಡ ಸಮಿತಿ ವರದಿ ಸಲ್ಲಿಕೆಯಾಗಿಲ್ಲ ಏಕೆ?

ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಈ ಕುರಿತು 11 ಮೇ-2016ರಮದು ಪತ್ರಕಾಗೋಷ್ಠಿ ಕರೆದು ಕೋಳಿವಾಡ ಸಮಿತಿಗೆ ತಮ್ಮ ವರದಿ ಸಲ್ಲಿಸಲು ಆಗ್ರಹಿಸಿತ್ತು. ಆಗ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಮಿತಿಅಧ್ಯಕ್ಷರಾದ ಕೆ.ಬಿ. ಕೋಳಿವಾಡ ರವರು ಇನ್ನೊಂದು ತಿಂಗಳಲ್ಲಿ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದ್ದರು. ಆದರೆ ಈ ಘಟನೆಗೆಯಾಗಿ ಎರಡು ತಿಂಗಳು ಕಳೆಯುತ್ತಾ ಬಂದಿದ್ದರೂ ಇನ್ನೂ ವರದಿಸಲ್ಲಿಕೆಯಾಗಿಲ್ಲ. ಇದೀಗ ರಾಜ್ಯದ ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾದ ನಂತರ ಅವರು ವರದಿಯನ್ನು ಯಾರಿಗೆ ಸಲ್ಲಿಸಿದ್ದಾರೆ?

ನಗರದ ಜಮೀನು ಒತ್ತುವಾರಿಯಲ್ಲಿ ಭಾಗಿ

ನಗರದ ಜಮೀನು ಒತ್ತುವಾರಿಯಲ್ಲಿ ಭಾಗಿ

ದೊಡ್ಡ ದೊಡ್ಡ ಕುಳಗಳು ನಗರದ ಜಮೀನು ಒತ್ತುವಾರಿಯಲ್ಲಿ ಭಾಗಿಯಾಗಿದ್ದಾರೆ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನ ಪ್ರಭಾವಿ ರಾಜಕೀಯ ನಾಯಕರುಗಳೂ ಇದರಲ್ಲಿ ಭಾಗಿಯಾಗಿದ್ದಾರೆ, ಅತ್ಯಂತ ದೊಡ್ಡ ಮಟ್ಟದಲ್ಲಿ ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಭಾರೀ ಪ್ರಮಾಣದಲ್ಲಿ ಕೆರೆದಂಡೆ ಹಾಗೂ ರಾಜಕಾಲುವೆ ಒತ್ತುವರಿ ಮಾಡಲಾಗಿದೆ ಎಂದಿದ್ದರಲ್ಲದೇ ಎಲ್ಲಾ ಒತ್ತುವರಿದಾರರ ಜಾತಕ ಬಯಲು ಮಾಡುವುದಾಗಿ ಹೇಳಿದ್ದರು.

ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಪ್ರಶ್ನೆ

ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಪ್ರಶ್ನೆ

ಶೋಭಾ ಡೆವೆಲಪರ್ಸ್, ಬ್ರಿಗೇಡ್ ಗ್ರೂಪ್, ಪ್ರೆಸ್ಟೀಜ್ ಗ್ರೂಪ್, ವಾಲ್ಮಾರ್ಕ್ ಸಂಸ್ಥೆ, ಆದರ್ಶ್ ಡೆವೆಲಪರ್ಸ್, ಡಿ.ಎಸ್ ಮ್ಯಾಕ್ಸ್ ಗ್ರೂಪ್, ಬಾಗ್ಮನೆ ಟೆಕ್ ಪಾರ್ಕ್ ಎಲ್ಲವೂ ಕೆರೆ ಒತ್ತುವರಿ ಮಾಡಿವೆಎಂದೂ ಆರೋಪಿಸಿತ್ತು. ಆದರೆ ಈವರೆಗೂ ಈ ಎಲ್ಲಾ ಬಿಲ್ಟರ್ಗಳ ಮೇಲೆ ಯಾವುದೇ ಕ್ರಮ ಏಕೆ ಜರುಗಿಸಿಲ್ಲಾ? ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಪ್ರಶ್ನಿಸುತ್ತಿದೆ.

ಕೆರೆ ಗುಳಂನಿಂದಾಗಿ ಬಡಾವಣೆಗಳು ಜಲಾವೃತ

ಕೆರೆ ಗುಳಂನಿಂದಾಗಿ ಬಡಾವಣೆಗಳು ಜಲಾವೃತ

ಬೆಂಗಳೂರಿನಲ್ಲಿ ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ದಕ್ಷಿಣ ಭಾಗದ ಬಡಾವಣಗಳಾದ ಕೆ.ಎ.ಎಸ್ ಕಾಲೋನಿ, ಅನುಗ್ರಹ ಬಡಾವಣೆ, ಡಿಯೋ ಎನಕ್ಲೇವ್, ಮಡಿವಾಳದ ಸೋಮೇಶ್ವರ ಕಾಲೋನಿ, ಹೆಚ್.ಎಸ್.ಆರ್ ಲೇಔಟ್, ಹೊಂಗಸಂದ್ರ, ಕೋಟಿ ಚಿಕ್ಕನಹಳ್ಳಿ, ದೇವರ ಚಿಕ್ಕನಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶಗಳು ಬಹುತೇಕ ಜಲಾವೃತ್ತವಾಗಿದ್ದವು.

ಕೆರೆ ಹಾಗೂ ರಾಜಕಾಲುವೆಗಳಿಗೆ ಸೇರಬೇಕಿದ್ದ ನೀರು ಒತ್ತುವರಿಯ ಕಾರಣದಿಂದಾಗಿ ಮನೆಗಳಿಗೆ ನುಗ್ಗಿದ್ದಲ್ಲದೆ, ವಾಹನಗಳನ್ನೂ ಆವರಿಸಿ ನಿಂತಿತ್ತು. ಬೆಂಗಳೂರಿನ ಈ ಪ್ರದೇಶಗಳ ಜನರು ಅಕ್ಷರಶಃ ನರಕಯಾತನೆ ಅನುಭವಿಸಿದ್ದರು.

ಮತ್ತೆ ಸರ್ವೆ ಏಕೆ, ಸಮಿತಿ ವರದಿ ಎಲ್ಲಿ?

ಮತ್ತೆ ಸರ್ವೆ ಏಕೆ, ಸಮಿತಿ ವರದಿ ಎಲ್ಲಿ?

ಕೆರೆ ಅಚ್ಚುಕಟ್ಟು ಪ್ರದೇಶ ಹಾಗೂ ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಲು ವರದಿ ಸಲ್ಲಿಸಿ ಆದೇಶ ನೀಡಬೇಕಿರುವ ಸಮಿತಿಯ ಅಧ್ಯಕ್ಷರು ಸ್ಪೀಕರ್ ಸ್ಥಾನ ಸಿಕ್ಕ ನಂತರ ಈ ಬಗ್ಗೆ ಚಕಾರವನ್ನೂ ಎತ್ತದಿರುವುದು ಖಂಡನೀಯ, ಸರ್ಕಾರವೇ ಸ್ವತಃ ರಚಿಸಿರುವ ಕೆ.ಬಿ.ಕೋಳಿವಾಡರ ಸಮಿತಿಯಿಂದ ವರದಿ ತರಿಸಿಕೊಳ್ಳುವುದನ್ನು ಬಿಟ್ಟು ಪುನಃ ಸರ್ವೆಗೆ ಆದೇಶಿಸಿರುವುದೂ ಕೂಡ ಅನುಮಾನಕ್ಕೆ ಎಡೆಮಾಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
For decades the people of Bengaluru have been demanding eviction of encroachments of storm water drains and lake beds. The successive governments, other than constituting committees and preparing reports, have done precious little said AAP Karnataka.
Please Wait while comments are loading...