ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಲ್‌ಬಾಗ್‌ ಕೆರೆಯಲ್ಲಿ ಇನ್ನುಮುಂದೆ ಜಲಚರಗಳು ಸುರಕ್ಷಿತ

|
Google Oneindia Kannada News

ಬೆಂಗಳೂರು, ಏಪ್ರಿಲ್ 10: ಲಾಲ್‌ಬಾಗ್‌ನ ಕೆರೆಯ ನೀರನ್ನು ಶುದ್ಧಿಕರಣಗೊಳಿಸಲು ಕೆರೆಯಲ್ಲಿ ಎಂಟು ಏರಿಯೇಟರ್ಸ್ ಗಳನ್ನು ಅಳವಡಿಸಲಾಗಿದೆ.

ಕೆರೆಗಳ ಕೊಳೆ ತೊಳೆಯಲು ಬರಲಿವೆ ಆಮ್ಲಜನಕ ಹೆಚ್ಚಿಸುವ ಯಂತ್ರ ಕೆರೆಗಳ ಕೊಳೆ ತೊಳೆಯಲು ಬರಲಿವೆ ಆಮ್ಲಜನಕ ಹೆಚ್ಚಿಸುವ ಯಂತ್ರ

ಮಲಿನಗೊಂಡು ಪಾಚಿಗಟ್ಟಿರುವ ಕೆರೆ ನೀರಿನಲ್ಲಿ ಆಮ್ಲಜನಕ ಕೊರತೆ ಇದ್ದು, ಇದಕ್ಕಾಗಿ ಏರಿಯೇಟರ್ಸ್ ಗಳನ್ನು ಅಳವಡಿಸಲಾಗಿದೆ. ಇವುಗಳು ಕೆರೆಯಲ್ಲಿ ಆಮ್ಲಜನಕ ಹೆಚ್ಚಿಸುವುದರಿಂದ ಜಲಚರಗಳ ಉಳಿವಿಗೆ ಕಾರಣವಾಗುತ್ತವೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಏರಿಯೇಟರ್ಸ್ ಗಳನ್ನು ಅಳವಡಿಕೆಗೆ ತಗಲುವ ವೆಚ್ಚ ಮತ್ತು ಮೂರು ವರ್ಷಗಳ ಕಾಲ ಅವುಗಳ ನಿರ್ವಹಣೆಯನ್ನು ಬಾಷ್ ಕಂಪನಿ ವಹಿಸಿಕೊಂಡಿದೆ. ಇದಕ್ಕೆ ಸರ್ಕಾರ ಕೂಡ ಒಪ್ಪಿಗೆ ನೀಡಿದೆ.

Lake at Lalbagh gets ready for a makeover

ಸದ್ಯ ಕೆರೆಯಲ್ಲಿ ಒಂಬತ್ತು ಏರಿಯೇಟರ್ ಗಳನ್ನು ಅಳವಡಿಸಲಾಗಿದೆ. ಸದ್ಯ 14 ಅಡಿ ಎತ್ತರದ ಎಂಟು ಸಾಮಾನ್ಯ ಏರಿಯೇಟರ್ ಗಳ ಅಳವಡಿಕೆ ಮಾಡಲಾಗಿದೆ. ನಾಳೆ 50 ಅಡಿ ಎತ್ತರದ ಒಂದು ಹೈ ಜೆಟ್‌ ಏರಿಯೇಟರ್ ಅನ್ನು ಅಳವಡಿಸಲಾಗುತ್ತದೆ. ಈ ಏರಿಯೇಟರ್ ಗಳ ಅಳವಡಿಕೆಯಿಂದಾಗಿ ಕೆರೆಯಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಾಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ. ಜಗದೀಶ್ ತಿಳಿಸಿದ್ದಾರೆ.

ಏರಿಯೇಟರ್ಸ್ ಗಳು : ಸಾಮಾನ್ಯವಾಗಿ ಗಾಳಿಯಲ್ಲಿ ಕನಿಷ್ಠ ಶೇ.21ರಷ್ಟು ಆಮ್ಲಜನಕವಿರುತ್ತದೆ. ಆದರೆ ನೀರಿನಲ್ಲಿ ಕನಿಷ್ಠ ಶೇ. ನಾಲ್ಕರಿಂದ ಐದರಷ್ಟಿರಬೇಕು. ಆದರೆ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಶೇ.4ಕ್ಕಿಂತ ಕಡಿಮೆಯಾದರೆ ಅಲ್ಲಿನ ಬ್ಯಾಕ್ಟೀರಿಯಾಗಳು ಸಾವನ್ನಪ್ಪುತ್ತವೆ.

ಇದರಿಂದ ನೀರಿನಲ್ಲಿ ಆಮ್ಲಜನಕ ತೀವ್ರ ಪ್ರಮಾಣದಲ್ಲಿ ಕಡಿಮೆಯಾಗತ್ತದೆ. ಆಗ ಕೆರೆಯೊಳಗೆ ಜೀವಿಸುವ ಇತರೆ ಜಲಚರಗಳು ಕೂಡ ಸಾವನ್ನಪ್ಪುತ್ತವೆ. ಹೀಗಾಗಿ ಕೆರೆಯೊಳಗೆ ಏರಿಯೇಟರ್‌ಗಳನ್ನು ಅಳವಡಿಸುವುದರಿಂದ ನೀರು ಕಾರಂಜಿಗಳ ರೀತಿ ಮೇಲಿಂದ ಕೆಳಗೆ ರಭಸವಾಗಿ ಬಿದ್ದಾಗ ಪರಸ್ಪರ ಅಲೆಗಳ ಮೂಲಕ ಆಮ್ಲಜನಕ ಉತ್ಪತ್ತಿಯಾಗುತ್ತದೆ. ಇದರಿಂದ ಜಲಚರಗಳಿಗೆ ಪ್ರಾಣಾಪಾಯ ಉಂಟಾಗುವುದಿಲ್ಲ.

English summary
Eight aerators and a high-level jet supplemented oxygen in the waterbody, you may be able to spot more fish in the lake in the Lalbagh Botanical Garden as it’s getting ready for a makeover, one that will improve the quality of water. Eight low-level aerators and one high-level jet have been placed in the lake to supplement oxygen in the pond water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X