ಪೊಲೀಸರ ಬಲೆಗೆ ಬಿದ್ದ ರೌಡಿ ಶೀಟರ್ ಯಶಸ್ವಿನಿ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 02 : ರೌಡಿ ಶೀಟರ್ ಯಶಸ್ವಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಣಕಾಸು ವಿಚಾರದಲ್ಲಿ ಉಷಾರಾಣಿ ಎಂಬುವವರ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿದ್ದ ಯಶಸ್ವಿನಿ, ಒಂದು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದಳು.

ಶುಕ್ರವಾರ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಯಶಸ್ವಿನಿಯನ್ನು ಬಂಧಿಸಿದ್ದಾರೆ. 'ಹಣಕಾಸು ವಿಚಾರದಲ್ಲಿ ಜಗಳ ಮಾಡಿಕೊಂಡು ನನ್ನ ಮನೆಗೆ ನುಗ್ಗಿ, ನನ್ನ ಮೇಲೆ ಯಶಸ್ವಿನಿ ಹಲ್ಲೆ ಮಾಡಿದ್ದಾಳೆ' ಎಂದು ಉಷಾರಾಣಿ ಪೊಲೀಸರಿಗೆ ದೂರು ನೀಡಿದ್ದರು.[ಬೆಂಗಳೂರು: ಸೀರೆ ಬಿಚ್ಚಿಟ್ಟು ಪರಾರಿಯಾದ ಲೇಡಿ ರೌಡಿ!]

Lady rowdy-sheeter Yashaswini arrested

ದೂರು ದಾಖಲಾದ ಬಳಿಕ ಯಶಸ್ವಿನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಮೇ 13ರಿಂದ ತಲೆಮರೆಸಿಕೊಂಡಿದ್ದ ಆಕೆ ಇಂದು ಪೊಲೀಸರಿಗೆ ಸೆರೆ ಸಿಕ್ಕಿದ್ದಾಳೆ.[ಬಡ್ಡಿ ಕಟ್ಟದ ಮಹಿಳೆ ಮೇಲೆ ಹಲ್ಲೆ ಮಾಡಿದ ಲೇಡಿ ರೌಡಿ]

ಮೀಟರ್ ಬಡ್ಡಿ ಕಟ್ಟದ ಉಷಾ ಮೇಲೆ ಹಲ್ಲೆ ಮಾಡಿದ್ದ ಯಶಸ್ವಿನಿ ಪೊಲೀಸರ ವಶದಲ್ಲಿದ್ದಳು. ಎದೆ ನೋವು ಎಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಆಕೆ, ಅಲ್ಲಿಂದ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಳು. ಯಶಸ್ವಿನಿ ಹಿಡಿಯಲು ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chennammanakere Achukattu police arrrested lady rowdy-sheeter Yashaswini. Yashaswini was booked for attacking a debtor Uasha and charging exorbitant interest.
Please Wait while comments are loading...