ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಕ್ಕಳಿಗೆ ಓದಿನ ಕಿಚ್ಚು ಹಚ್ಚುತ್ತಿರುವ ಪೊಲೀಸಮ್ಮನ ಕಥೆ ಓದಿ!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 22: ಪೊಲೀಸರೆಂದರೆ ರಕ್ಷಣೆ, ಟ್ರಾಫಿಕ್‌ ನಿಯಂತ್ರಣ ಅಷ್ಟೇ ಅಲ್ಲದೆ ಅದರ ಹೊರತಾಗಿಯೂ ಉತ್ತಮ ಹವ್ಯಾಸಗಳಿರಬಹುದು ಎಂಬುದರ ಕುರಿತು ಯಾರಾದರೂ ಆಲೋಚಿಸಿದ್ದೀರಾ?

ಕೊಪ್ಪಳ ಜಿಲ್ಲೆಯ ಭಾರತೀಯ ಮೀಸಲು ಪಡೆಯ ಕಮಾಂಡೆಂಟ್‌ ನಿಶಾ ಜೈನ್ ಅವರು ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಲ್ಲಿ ಪುಸ್ತಕ ಪ್ರೀತಿಯನ್ನು ತುಂಬಿಸಲು ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ರೈಲು ವಿಳಂಬದಿಂದ ತಪ್ಪಿದ ಪರೀಕ್ಷೆ, ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶರೈಲು ವಿಳಂಬದಿಂದ ತಪ್ಪಿದ ಪರೀಕ್ಷೆ, ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ

ಇಂಡಿಯನ್‌ ರಿಸರ್ವ್ ಬಟಾಲಿಯನ್‌ ಆವರಣದಲ್ಲಿ ಪೊಲೀಸ್‌ ಸಿಬ್ಬಂದಿ ಹಾಗೂ ಮಕ್ಕಳಿಗಾಗಿ ಗ್ರಂಥಾಲಯ ಆರಂಭಿಸಲಾಗಿದೆ. ಪ್ರತಿಯೊಂದು ಮನೆಯಲ್ಲಿ ಮಕ್ಕಳಿಗೆ ಓದಲು ಪೂರಕವಾದ ವಾತಾವರಣವಿರುವುದಿಲ್ಲ ಹಾಗೂ ಪುಸ್ತಕ ಕೊರತೆ ಇರುವುದನ್ನು ಗಮನಿಸಿ ಈ ಗ್ರಂಥಾಲಯವನ್ನು ಆರಂಭಿಸಿದ್ದಾರೆ.

Lady cop serves with different style!

ಪ್ರಥಮ ಬುಕ್ಸ್‌ ಎನ್ನುವ ಸಂಸ್ಥೆ ನಡೆಸುತ್ತಿರುವ 'ಡೊನೇಟ್‌ ಎ ಬುಕ್‌' ಎನ್ನುವ ಆನ್‌ಲೈನ್‌ ವೆಬ್‌ಸೈಟ್‌ ಮೂಲಕ ಅಭಿಯಾನ ಆರಂಭಿಸಲಾಯಿತು. ಅಭಿಯಾನದಲ್ಲಿ ಮನವಿ ಮಾಡಿರುವ ಕಾರಣ 40ಸಾವಿರ ಪುಸ್ತಕಗಳು ದೊರೆತಿವೆ. ನಿಶಾ ಅವರು ಇದಕ್ಕೆ ತಮ್ಮ ಸ್ವಂತ ಹಣವನ್ನೂ ಬಳಸಿದ್ದಾರೆ ಜತೆಗೆ ಕೊಪ್ಪಳದ ಜಿಲ್ಲಾ ಗ್ರಂಥಾಲಯದ ಸಹಕಾರವನ್ನೂ ಪಡೆದಿದ್ದಾರೆ.

ಕಚೇರಿ ಕಟ್ಟಡದಲ್ಲೂ ಓದುವ ಕೋಣೆ ತೆರೆಯಲಾಗಿದೆ, ಇದರಲ್ಲಿ ಪೊಲೀಸ್‌ ಸಿಬ್ಬಂದಿಗೆ ಮಾತ್ರವಲ್ಲ ಪುಸ್ತಕ ಓದುವ ಅಭಿರುಚಿ ಇರುವ ಹೊರಗಿನವರೂ ಕೂಡ ಬಂದು ಓದಬಹುದಾಗಿದೆ. ಪೊಲೀಸ್‌ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪುಸ್ತಕಗಳೂ ಲಭ್ಯವಿದೆ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಪುಸ್ತಕಗಳಿವೆ.

ವ್ಹೀಲಿಂಗ್‌ ವೀರರನ್ನು ಬೆಂಡೆತ್ತಿದ ಬೆಂಗಳೂರು ಟ್ರಾಫಿಕ್‌ ಪೊಲೀಸರುವ್ಹೀಲಿಂಗ್‌ ವೀರರನ್ನು ಬೆಂಡೆತ್ತಿದ ಬೆಂಗಳೂರು ಟ್ರಾಫಿಕ್‌ ಪೊಲೀಸರು

ಮಕ್ಕಳು ಸಾಲೆಗೆ ಹೋಗುವ ಮುನ್ನ ಹಾಗೂ ಬಂದ ಬಳಿಕ ಶಾಲೆಯ ಪುಸ್ತಕಗಳ ಜಂಜಾಟ ಬಿಟ್ಟು ಇಲ್ಲಿರುವ ಕಥೆ-ಕವನ-ಕಾದಂಬರಿಗಳ ಓದುವಿಕೆ ರೂಢಿಸಿಕೊಂಡಿದ್ದಾರೆ. ಎಲ್ಲ ರೀತಿಯ ಪುಸ್ತಕಗಳು ಇಲ್ಲಿವೆ. ಇಲ್ಲಿಗೆ ಬರುವ ಮಕ್ಕಳು. ಇಲ್ಲಿ ಬಂದು ಪುಸ್ತಕ ಓದಬೇಕಂದ್ರೆ ಪ್ರವೇಶ ಶುಲ್ಕ ಎಷ್ಟಿದೆಯೋ ಏನೋ ಅಂತ ಗಾಬರಿಯಾಗಬೇಕಿಲ್ಲ. ಇಲ್ಲಿ ಬಂದು ಪುಸ್ತಕ ಓದಲು ಹಣ ನೀಡಬೇಕಾಗಿಲ್ಲ.

ಇದು ಇಲ್ಲಿನ ಐಆರ್​ಬಿ ಕಮಾಂಡೆಂಟ್ ನಿಶಾ ಅವರ ಕನಸಿನ ಕೂಸು ಎಂದು ಸಿಬ್ಬಂದಿ ಹೇಳುತ್ತಾರೆ, ನಿಶಾ ಅವರ ಪುಸ್ತಕ ಪ್ರೀತಿಯಿಂದ ಸಾವಿರಾರು ಮಕ್ಕಳು ಓದುವ ಹವ್ಯಾಸ ಬೆಳಸಿಕೊಳ್ಳುವಂತಾಗಲಿ ಎನ್ನುವುದು ನಮ್ಮ ಕಳಕಳಿ.

English summary
Here is a lady cop serving the society with different style with her own money and ambition. Read this story from remote place from Karnataka capital Bengaluru which is inspire one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X