ನ್ಯಾಯಾಂಗ ಬಂಧನದಲ್ಲಿ ಲೇಡಿ ನಟ್ವರ್ ಲಾಲ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 7: ಸುಪ್ರೀಂ ಕೋರ್ಟ್ ವಕೀಲರಿಗೆ ಕಡಿಮೆ ಬೆಲೆ ಆಪೀಸ್‌ ಜಾಗ ಕೊಡಿಸುತ್ತೇನೆಂದು ತಾನೇ ಬಂದು ಪೊಲೀಸರ ಬಲೆಗೆ ಬಿದ್ದಿದ್ದ ಲೇಡಿ ವಂಚಕಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾಳೆ.

ವಂಚಕಿ ಖುಷ್ಬೂ ಶರ್ಮಾ ಈವರೆಗೆ ವಂಚನೆ ಮಾಡಿರುವ ದುಡ್ಡು ಎಲ್ಲಿಟ್ಟಿದ್ದಾಳೆ ಎಂದು ಬಾಯಿ ಬಿಟ್ಟಿಲ್ಲ. ಹೀಗಾಗಿ ಕಸ್ಟಡಿಗೆ ಪಡೆದು ವಿಚಾರಿಸಲು ಪೊಲೀಸರುಸಿದ್ಧತೆ ನಡೆಸಿದ್ದಾರೆ.

lady

ಪೊಲೀಸರ ಅತಿಥಿಯಾಗಿರುವ ಈಕೆಯ ವಿಚಾರಣೆಗಾಗಿ ಪುಲಕೇಶಿ ಠಾಣಾ ಪೊಲೀಸರು ನ್ಯಾಯಾಲಯದಲ್ಲಿ ಸೋಮವಾರ ಎಸಿಎಂಎಂ ಅರ್ಜಿ ಹಾಕಲಿದ್ದಾರೆ.

ಖುಷ್ಬೂ ಬ್ಯಾಂಕ್‌, ಅಕೌಂಟ್, ಕಾಲ್ ರೆಕಾರ್ಡ್, ವಾಹನಗಳ ದಾಖಲೆಗಳನ್ನು ಸಹ ಪೊಲೀಸರು ತಪಾಸಣೆ ಮಾಡಲಿದ್ದಾರೆ. ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳನ್ನು ವಶಪಡಿಸಿಕೊಳ್ಳಲಿದ್ದಾರೆ.[ಗೋವು ಕಳ್ಳತನ ಗ್ಯಾಂಗ್ ಪತ್ತೆಹಚ್ಚಿದ ಬಜ್ಪೆ ಪೊಲೀಸರು]

ವಿವರ: ದೇಶದ ಉದ್ದಗಲಕ್ಕೂ ಇನ್ನೂರಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿ ಕೋಟ್ಯಂತರ ರೂ ವಂಚಿಸಿರುವ ಸುಂದರಿ ಲೇಡಿ ವಂಚಕಿ ಪುಲಕೇಶಿ ನಗರ ಪೊಲೀಸರಿಗೆ ಅತಿಥಿಯಾಗಿದ್ದಳು.

ಯುಬಿ ಸಿಟಿಯಲ್ಲಿ 17.000 ಚದುರಡಿ ಆಫೀಸ್ ಜಾಗವನ್ನು ಕಡಿಮೆ ಬೆಲೆಗೆ ಕೊಡಿಸುತ್ತೇನೆ ಎಂದು ಸುಪ್ರಿಂ ಕೋರ್ಟ್ ವಕೀಲರಿಗೆ ಯಾಮಾರಿಸಿ ಅವರಿಂದ ಹಣ ಮತ್ತು ಮೊಬೈಲ್ ಪಡೆದು ನಾಪತ್ತೆಯಾಗಿದ್ದಳು. ನಂತರ ಈಕೆಯೇ ತನ್ನದು ತಪ್ಪಾಯಿತು ನಿಮ್ಮ ವಸ್ತುವನ್ನು ನಿಮಗೆ ನೀಡುತ್ತೇನೆಂದು ಬಂದು ಪೊಲೀಸರ ಬಲೆಗೆ ಬಿದ್ದಿದ್ದಳು[ರಟ್ಟಿನ ಬಾಕ್ಸಿನಲ್ಲಿ ಇದ್ದಿದ್ದು ಒಂದು ತಿಂಗಳ ಕೂಸು]

ಇನ್ನು ಈಕೆ ಯಾವ ರಾಜ್ಯದವಳು ಎಂದು ಪತ್ತೆಯಾಗಿಲ್ಲ. ಗುಜರಾತ್‌, ರಾಜಾಸ್ಥಾನ್, ಮುಂಬೈ ಸೇರಿದಂತೆ ಅನೇಕ ಪ್ರಕರಣಗಳು ಇವಳ ಮೇಲಿದೆ ಎನ್ನಲಾಗುತ್ತಿದೆ.

ಪೇಸ್‌ಬುಕ್‌, ಟ್ವೀಟರ್ ಮುಂತಾದೆಡೆ ಮಾಹಿತಿ ಕಲೆ ಹಾಕಿ ಶ್ರೀಮಂತ ಹುಡುಗರ ಸ್ನೇಹ ಮಾಡಿಕೊಂಡು ನಿರ್ದಿಷ್ಟ ಸ್ಥಳದಲ್ಲಿ ಭೇಟಿಯಾಗೋಣ ಎಂದು ಕರೆಸಿಕೊಂಡು ನನ್ನ ಮೇಲೆ ಅತ್ಯಾಚಾರ ಮಾಡಿದ್ದೀಯ, ನಾನು ಪೊಲೀಸರಿಗೆ ಹೇಳ್ತೀನಿ ಎಂದು ಎದುರಿಸಿ ಹಣ, ಫೋನ್, ಕಾರು ಇತ್ಯಾದಿಗಳನ್ನು ಲೂಟಿ ಮಾಡುತ್ತಿದ್ದಳು ಎನ್ನಲಾಗಿದೆ.

ಇವಳು ಇನ್ನು ಎಷ್ಟು ಜನರಿಗೆ ಮೋಸ ಮಾಡಿ ಎಷ್ಟು ದುಡ್ಡುತಿಂದಿದ್ದಾಳೆ ಎಂಬುದು ಹೊರಬರಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lady cheating to Supreime court Lawyer on UB City office place matter in Bangaluru. Lady, cops have fallen into the trap.
Please Wait while comments are loading...