ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿರ್ಭಯಾ ನಿಧಿ: ಮಹಿಳೆಯರಿಗೆ ಬಿಎಂಟಿಸಿ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ದೃಷ್ಟಿಯಿಂದ ಬಿಎಂಟಿಸಿಯು ಹಲವಾರು ಸುರಕ್ಷತಾ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ.

ಕೇಂದ್ರ ಸರ್ಕಾರವು ನಿರ್ಭಯಾ ಯೋಜನೆಯಡಿ 56.50 ಕೋಟಿ ರೂ.ಅನುದಾನ ಬಿಎಂಟಿಸಿಗೆ ಮಂಜೂರು ಮಾಡಿದೆ. ಅದರಲ್ಲಿ ಮಹಿಳಾ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಸಂಬಂಧ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಬನಶಂಕರಿ, ಶಿವಾಜಿನಗರ, ಜಯನಗರ, ವಿಜಯನಗರ, ದೊಮ್ಮಲೂರು, ವೈಟ್ ಫೀಲ್ಡ್, ಕೆಂಗೇರಿ ಸೇರಿದಂತೆ 15ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರು ದಣಿವಾರಿಸಿಕೊಳ್ಳಲು ವಿರಾಮ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

Ladies rest rooms in 15 BMTC bus stands soon

ಇಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತಿತರೆ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ. ಪ್ರತಿ ಕೊಠಡಿಯಲ್ಲಿ 10-15 ಆಸನಗಳನ್ನೂ ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ಮಹಿಳೆಯರು ಬಸ್ ಗಳಿಗಾಗಿ ಕಾದು ನಿಲ್ಲುವುದು ತಪ್ಪಲಿದೆ. ಮಹಿಳಾ ಪ್ರಯಾಣಿಕರಿಗೆ 15 ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸುವ ಸಲುವಾಗಿ 2.25ಕೋಟಿ ರೂ ಖರ್ಚು ಮಾಡಲಾಗುತ್ತಿದೆ.

ಪ್ರತಿಯೊಂದು ವಿಶ್ರಾಂತಿ ಕೊಠಡಿ ಮತ್ತು ಅಲ್ಲಿ ಅಗತ್ಯ ಸೌಕರ್ಯ ಕಲ್ಪಿಸಲು 15 ಲಕ್ಷ ರೂ. ನಿಗದಿಪಡಿಸಲಾಗಿದೆ. ಮೆಜೆಸ್ಟಿಕ್ ನಲ್ಲಿ ಹಲವಾರು ಪ್ಲಾಟ್‌ಫಾರಂಗಳಿವೆ. ಹೀಗಾಗಿ , ನಿಲ್ದಾಣದ 10-15 ಕಡೆ ಚಿಕ್ಕ ವಿರಾಮ ಕೊಠಡಿಗಳನ್ನು ಕಟ್ಟಲು ನಿರ್ಧರಿಸಲಾಗಿದೆ. ಅಲ್ಲದೇ ನಿಲ್ದಾಣದ ಕಟ್ಟಡದಲ್ಲಿ 50-70 ಆಸನ ವ್ಯವಸ್ಥೆ ಹೊಂದಿರುವ ದೊಡ್ಡ ಕೊಠಡಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಸಾವಿರ ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮರಾ: ಬಿಎಂಟಿಸಿಯಲ್ಲಿ ಒಟ್ಟು 6157 ಬಸ್ ಗಳಿವೆ . ಈ ಹಿಂದೆಯೇ 500 ಬಸ್ ಗಳಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಈಗಾಗಲೇ ನಿಲ್ದಾಣಗಳು ಕಣ್ಗಾವಲಿನಲ್ಲಿದೆ. ಈಗ ಮತ್ತೆ ನಿರ್ಭಯಾ ನಿಧಿಯಡಿ ಒಂದು ಸಾವಿರ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

English summary
Under Nirbhaya project BMTC has prepared a plan for construction of 15 ladies rest rooms cum waiting rooms in BMTC bus stand. The also included many women safety measures like installation of 100 CC cameras in BMTC buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X