ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರ್ಮಿಕ ವರ್ಗಕ್ಕೆ ಬಂಪರ್, ಕನಿಷ್ಠ ವೇತನ ಏರಿಕೆ

By Vanitha
|
Google Oneindia Kannada News

ಬೆಂಗಳೂರು, ನವೆಂಬರ್, 28: ಮುಂಬರುವ ಹೊಸವರ್ಷದ ಬಂಪರ್ ಕೊಡುಗೆ ರಾಜ್ಯದ ನಾನಾ ಉದ್ದಿಮೆಗಳ ಕಾರ್ಮಿಕ ವರ್ಗಕ್ಕೆ ಈಗಲೇ ದೊರತಿದ್ದು, ಕನಿಷ್ಠ ವೇತನ 10,520 ರೂಗಳನ್ನು ನೀಡಲು ಸರ್ಕಾರ ಮುಂದಾಗಿದೆ.

ಆಹಾರ ಸಂಸ್ಕರಣೆ ಮತ್ತು ಆಹಾರ ಪದಾರ್ಥಗಳ ಪ್ಯಾಕಿಂಗ್, ಲಾಂಡ್ರಿ ಉದ್ದಿಮೆ ಹೀಗೆ ನಾನಾ ಒಟ್ಟು ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಕನಿಷ್ಠ ವೇತನದ ಆದೇಶಕ್ಕೆ ಒಳಪಟ್ಟಿದ್ದಾರೆ ಎಂದು ಕಾರ್ಮಿಕ ಇಲಾಖೆಯ ಹೊಸ ಪೋರ್ಟಲ್ ಹಾಗೂ ವೆಬ್ ಸೈಟ್ ಗೆ ಶುಕ್ರವಾರ ಚಾಲನೆ ನೀಡಿದ ಕಾರ್ಮಿಕ ಸಚಿವ ಟಿ ಪರಮೇಶ್ವರ್ ಸರ್ಕಾರದ ನಿರ್ಧರ ತಿಳಿಸಿದರು.[ಆಯುಧ ಪೂಜೆ ವಿಶೇಷ: ನೌಕರರ ಬೋನಸ್ ಮಿತಿ ಏರಿಕೆ]

Labour minister T parameshwar announced minimum salary of Labours

ಕಾರ್ಮಿಕರಿಗೆ ಕನಿಷ್ಠವೇತನದ ಜೊತೆ ಬೇರೆ ಯಾವ ಸೌಲಭ್ಯಗಳಿವೆ?

* 23 ಉದ್ದಿಮೆಗಳ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವ ಜೊತೆಗೆ 196 ಅನುದಾನಿತ ಖಾಸಗಿ ಐಟಿಐ ಕಾಲೇಜಿನಿಂದ ನಿವೃತ್ತಿಯಾದ ಸಿಬ್ಬಂದಿಗೆ ಪಿಂಚಣಿ ಸೌಲಭ್ಯ.

* ಉನ್ನತ ಶಿಕ್ಷಣವಾದ ಪಿಎಚ್ ಡಿ, ಮೆಡಿಕಲ್, ಎಂಜಿನಿಯರಿಂಗ್ ಮಾಡಬಯಸುವ ಕಾರ್ಮಿಕರ ಮಕ್ಕಳಿಗೆ ಇಲಾಖೆ ವತಿಯಿಂದ ಪ್ರತಿ ತಿಂಗಳು 2,000ರೂ ಪ್ರೋತ್ಸಾಹಧನ

* ರಾಜ್ಯದಲ್ಲಿ ವಸತಿ ಶಾಲೆ, ಕಲ್ಯಾಣ ಕಾರ್ಮಿಕರ ಭವನ ನಿರ್ಮಾಣ

* ಸದ್ಯದಲ್ಲೇ ಕಾರ್ಮಿಕ ಇಲಾಖೆ 1,800 ಹುದ್ದೆಗಳ ನೇಮಕ

ಯಾವ ಉದ್ದಿಮೆ ಕಾರ್ಮಿಕರಿಗೆ ನಿಯಮಗಳು ಅನ್ವಯವಾಗಲಿದೆ?

* ಆಯುರ್ವೇದಿಕ್, ಅಲೋಪತಿ ಔ‍ಷಧ ತಯಾರಿಕಾ ಉದ್ದಿಮೆ
* ರಸ್ತೆ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣ
* ಪ್ಲಾಸ್ಟಿಕ್, ರಬ್ಬರ್ ಮತ್ತು ಪಿವಿಸಿ ಪೈಪ್ಸ್ ಉದ್ದಿಮೆ
* ಸಾರ್ವಜನಿಕ ವಾಹನ ಸಾರಿಗೆ ಉದ್ದಿಮೆ
* ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳ ಕಾರ್ಮಿಕರು
* ಆಹಾರ ಸಂಸ್ಕರಣೆ ಮತ್ತು ಆಹಾರ ಪದಾರ್ಥಗಳ ಪ್ಯಾಕಿಂಗ್ ಉದ್ದಿಮೆ
* ಹೋಟೆಲ್, ಸಿನಿಮಾ, ಮದ್ಯ, ಗೃಹ ಕಾರ್ಮಿಕರು, ಮಿನಿ ಸಿಮೆಂಟ್ ಕಾರ್ಮಿಕರು
* ಲಾಂಡ್ರಿ, ಟಿಂಬರ್, ಕ್ಲಬ್, ಎಲೆಕ್ಟ್ರಾನಿಕ್ಸ್ , ಏರೇಟೆಡ್ ವಾಟರ್, ಎಲೆಕ್ಟ್ರೋ ಪ್ಲೇಟಿಂಗ್ ಉದ್ದಿಮೆ
* ಪ್ರೈವೇಟ್ ಫೈನಾನ್ಸ್ ಕಾರ್ಪೋರೇಷನ್ ಆಂಡ್ ಚಿಟ್ ಫಂಡ್ಸ್
* ಸ್ಟನ್ ಪೈಪ್, ಕಾಂಕ್ರೀಟ್ ಪೈಪ್, ಆರ್ ಸಿಸಿ ಮ್ಯಾನುಫ್ಯಾಕ್ಟರಿಂಗ್ ಉದ್ದಿಮೆ
* ಪ್ರೊಕ್ಯೂರ್ ಮೆಂಟ್, ಪ್ರೊಸೆಸಿಂಗ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಆಫ್ ಮಿಲ್ಕ್

English summary
Labour minister T parameshwar announced minimum salary of Labours on Friday, November 27th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X