ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಪಾಳಿ ತರಗತಿ: ವಿರೋಧ

By Nayana
|
Google Oneindia Kannada News

ಬೆಂಗಳೂರು, ಜುಲೈ 2: ಮಲ್ಲೇಶ್ವರದ ಕೇಂದ್ರೀಯ ವಿದ್ಯಾಲಯದಲ್ಲಿ ಎರಡು ಪಾಳಿಯಲ್ಲಿ ತರಗತಿ ಆರಂಭಿಸುವ ಪ್ರಸ್ತಾಪಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರೆ ಬರೆದಿದ್ದಾರೆ.

ಈ ತೀರ್ಮಾನವನ್ನು ಈ ವರ್ಷಕ್ಕೆ ಕೈಬಿಟ್ಟು ಮುಂದಿನ ವರ್ಷಕ್ಕೆ ಮುಂದೂಡಲು ಒತ್ತಾಯಿಸಲಾಗುತ್ತಿದೆ. ಈ ಸಾಲಿನಲ್ಇ ಈಗಾಗಲೇ ತರಗತಿ ಆರಂಭವಾಗಿದ್ದು, ಜು.18ರಿಂದ ಪಾಳಿಯಲ್ಲಿ ತರಗತಿಗಳು ನಡೆಯಲಿವೆ ಎಂಬ ಸುತ್ತೋಲೆಯನ್ನು ಹೊರಡಿಸಲಾಗಿದೆ.

ಅನುದಾನಿತ ಖಾಸಗಿ ಶಾಲಾ ಶಿಕ್ಷಕರಿಗೆ ಶುಭ ಸುದ್ದಿ ನೀಡಲಿದೆ ಸರ್ಕಾರಅನುದಾನಿತ ಖಾಸಗಿ ಶಾಲಾ ಶಿಕ್ಷಕರಿಗೆ ಶುಭ ಸುದ್ದಿ ನೀಡಲಿದೆ ಸರ್ಕಾರ

ಮುಂಜಾನೆಯೇ ಮಕ್ಕಳನ್ನು ಕಳುಹಿಸುವುದು ಹೇಗೆ ಎಂಬ ಆತಂಕ ಪೋಷಕರಲ್ಲಿ ಮೂಡಿದೆ. ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯದಲ್ಲಿ ಸದ್ಯ 1-12ನೇ ತರಗತಿವರೆಗೆ ಬೋಧಿಸಲಾಗುತ್ತಿದೆ. ಸುಮಾರು 1,800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

KV Malleshwaram school parents write to PM Modi

ಬೆಳಗ್ಗೆ 8.30ರಿಂದ ಮಧ್ಯಾಹ್ನ 2.30ರವರೆಗೆ ತರಗತಿಗಳು ನಡೆಯುತ್ತಿದೆ. ಎಎರಡು ಪಾಳಿಯ ತರಗತಿಗಳು ಆರಂಭವಾದಲ್ಲಿ ಈಗಿರುವ ವ್ಯಾಸಂಗನಿರತ ಎಲ್ಲ ವಿದ್ಯಾರ್ಥಿಗಳು ಮೊದಲ ಪಾಳಿಯಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 12.25ರವರೆಗಿನ ಸಮಯಕ್ಕೆ ಬದಲಾಯಿಸಿಕೊಳ್ಳಬೇಕು.

ಬೆಳಗ್ಗೆ 6.55ರೊಳಗೆ ಶಾಲೆ ಆವರಣ ತಲುಪಬೇಕಾಗುತ್ತದೆ. ಬೆಳಗ್ಗೆ 8.30ರಿಂದ ಇಪ್ಪತ್ತು ನಿಮಿಷಗಳ ಮಧ್ಯಂತರ ಅವಧಿ ನೀಡಲಾಗುತ್ತದೆ. ತಿಂಡಿಗೆ ಬೆಳಗ್ಗೆ 10.35ರಿಂದ ಹತ್ತು ನಿಮಿಷ ಮಾತ್ರ ಕಾಲಾವಕಾಶ ನೀಡಲಾಗುತ್ತದೆ.

ಎರಡನೇ ಪಾಳಿಯ ವೇಳಾಪಟ್ಟಿ ಮಧ್ಯಾಹ್ನ 12.30ರಿಂದ ಸಂಜೆ 6ರವರೆಗೆ ಇರಲಿದೆ. ಮಧ್ಯಾಹ್ನ 2 ರಿಂದ ಇಪ್ಪತ್ತು ನಿಮಿಷ ಮಧ್ಯಂತರ ಅವಧಿ ಹಾಗೂ 4.05ರಿಂದ ಹತ್ತು ನಿಮಿಷಮಧ್ಯಂತರ ಅವಧಿ ನಿಗದಿ ಮಾಡಲಾಗಿದೆ. ಆದರೆ ಮಧ್ಯಾಹ್ನ ಊಟಕ್ಕೆ ಯಾವ ಸಮಯವೆಂದು ಸುತ್ತೋಲೆಯಲ್ಲಿ ನಮೂದಿಸಿಲ್ಲ.

ಈ ಪಾಳಿಕೆ ಸೇರುವ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಹೊಸದಾಗಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆದಿದೆ. ಇದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 6.55ಕ್ಕೆ ಮಕ್ಕಳನ್ನು ಬಿಡುವ ಕುರಿತು ಆತಂಕ ಪ್ರಾರಂಭವಾಗಿದೆ.

English summary
Parents od Kendriya Vidyalaya Malleshwaram have written a letter to prime minister Narendra Modi to postpone the decision on shift school from this academic year as academic year already resumed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X