ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಿ ಲಾಸ್ಯಪ್ರಿಯ 'ರಂಗಾರೋಹಣ', ಬನ್ನಿ ಆಶೀರ್ವದಿಸಿ

By Vanitha
|
Google Oneindia Kannada News

ಬೆಂಗಳೂರು,ಫೆಬ್ರವರಿ,27: ಭರತನಾಟ್ಯದ ಪ್ರಾಥಮಿಕ ಹಂತವನ್ನು ಪೂರೈಸಿದ ಕುಮಾರಿ ಲಾಸ್ಯಪ್ರಿಯ ಅವರ ರಂಗಾರೋಹಣ ಕಾರ್ಯಕ್ರಮವು ಫೆಬ್ರವರಿ 28, ಸಂಜೆ 5.45ಕ್ಕೆ ನಗರದ ರೇಸ್ ಕೋರ್ಸ್ ರಸ್ತೆ ಬಳಿ ಇರುವ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ.

ಲಾಸ್ಯವರ್ಧನ ಟ್ರಸ್ಟ್ ಅರ್ಪಿಸುವ ರಂಗಾರೋಹಣ ಕಾರ್ಯಕ್ರಮದಲ್ಲಿ ಕುಮಾರಿ ಲಾಸ್ಯಪ್ರಿಯ ಅವರು 'ಶಂಕರ ಕುಟುಂಬಂ' ಎಂಬ ವಿಷಯದ ಮೇಲೆ ನಾಟ್ಯಗುರು ಡಾ. ಮಾಲಿನಿ ರವಿಶಂಕರ್ ಅವರ ಮಾರ್ಗದಶರ್ನದಲ್ಲಿ ಪ್ರಸ್ತುತ ಪಡಿಸಲಿದ್ದಾರೆ.[ಮೆಚ್ಚುಗೆ ಗಳಿಸಿದ ವಿಶ್ವ ಮಹಿಳಾ ಜಾನಪದ ನೃತ್ಯೋತ್ಸವ]

Bengaluru

ರಂಗಾರೋಹಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನೂಪುರ ನೃತ್ಯ ಶಾಲೆಯ ನಿರ್ದೇಶಕರಾದ ಲಲಿತಾ ಶ್ರೀನಿವಾಸನ್, ದತ್ತಾತ್ರೇಯ ವಾರ್ಡಿನ ಕಾರ್ಪೋರೇಟರ್ ಆರ್.ಎಸ್ ಸತ್ಯನಾರಾಯಣ್, ಕಲಾ ವಿಮರ್ಶಕರಾದ ಡಾ. ಎಂ ಸೂರ್ಯ ಪ್ರಸಾದ್, ರಾಜ್ಯೋತ್ಸವ ಪುರಸ್ಕೃತರಾದ ಮತ್ತೂರು ಲಕ್ಷ್ಮೀ ಕೇಶವ ಇನ್ನಿತರ ಗಣ್ಯರು ಆಗಮಿಸಿ ಲಾಸ್ಯಪ್ರಿಯ ಅವರ ನೃತ್ಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.[ಜಾನಪದ ಲೋಕದ ಮೇರು ನೃತ್ಯ ಹುಲಿವೇಷದ ಸುತ್ತ]

ಸಂಗೀತದಲ್ಲಿ:

* ನಟುವಾಂಗ : ಡಾ. ಮಾಲಿನಿ ಶಂಕರ್

* ಹಾಡುಗಾರಿಕೆ : ವಿದ್ವಾನ್ ಬಾಲಸುಪ್ರಬ್ರಹ್ಮಣ್ಯ ಶರ್ಮ[ಹೆಣ್ಣುಮಕ್ಕಳ ಕಲಾವಂತಿಕೆ ನೋಡಿ]

* ಮೃದಂಗ ವಾದನ : ವಿದ್ವಾನ್ ಜನಾರ್ಧನ ರಾವ್

* ವೇಣುವಾದನ: ವಿದ್ವಾನ್ ನರಸಿಂಹಮೂರ್ತಿ

* ರಿದಂಪ್ಯಾಡ್ : ವಿದ್ವಾನ್ ಕಾರ್ತಿಕ್, ದಾತಾರ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 080-23341442

English summary
Kumari Lasya priya Rangarohana programme in Bengaluru on February 28th at 5.45PM, at Bharatiya Vidyabhavan, Racecourse Road, Bengaluru. This programme will be organize by Lasya priya Trust.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X