ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದೇ ಸಾಲಮನ್ನಾ ಘೋಷಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ: ಬಿಎಸ್‌ವೈ

By Manjunatha
|
Google Oneindia Kannada News

Recommended Video

ಇಂದೇ ಸಾಲ ಮನ್ನಾ ಮಾಡುವಂತೆ ಕುಮಾರಸ್ವಾಮಿಗೆ ಎಚ್ಚರಿಸಿದ ಬಿ ಎಸ್ ಯಡಿಯೂರಪ್ಪ | Oneindia Kannada

ಬೆಂಗಳೂರು, ಮೇ 25: ಇಂದಿನ ಅಧಿವೇಶನದಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಲಿಲ್ಲವೆಂದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದರು.

ವಿಧಾನಸಭೆ ಕಲಾಪಕ್ಕೆ ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಈಗ ಬಹುಮತ ಇಲ್ಲ ಸಾಲಮನ್ನಾ ಮಾಡಲಾಗಲ್ಲ ಎಂಬ ಮಾತುಗಳನ್ನು ಆಡುತ್ತಿದ್ದಾರೆ, ಆದರೆ ನಾವು ಹಾಗಾಗಲು ಬಿಡುವುದಿಲ್ಲ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.

ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ, ಉಲ್ಲಂಘಿಸುವಂತಿಲ್ಲ ಜೆಡಿಎಸ್-ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ, ಉಲ್ಲಂಘಿಸುವಂತಿಲ್ಲ

'ಬಿಜೆಪಿಯ ಎಲ್ಲ ಶಾಸಕರು ಸಿಂಹದ ಮರಿಗಳಂತೆ ವಿಧಾನಸಭೆಯಲ್ಲಿ ಕೂತು ಸರ್ಕಾರದ ಅನ್ಯಾಯಗಳ ವಿರುದ್ಧ ತಿರುಗಿ ಬೀಳಲಿದ್ದಾರೆ' ಎಂದು ಅವರು ಅಬ್ಬರಿಸಿದರು.

Kumaraswamy should declare farmers loan wavier today: BSY

ಕುಮಾರಸ್ವಾಮಿ ಅವರ ತಾಯಿಯವರೇ ಹೇಳಿದ್ದಾರೆ 'ನನ್ನ ಮಗ ಅಧಿಕಾರ ಪೂರ್ಣಗೊಳಿಸುವುದಿಲ್ಲ ಎಂದು, ಅಲ್ಲದೆ ರೇವಣ್ಣ ಮಗ ಪ್ರಜ್ವಲ್ ಕೂಡ ಹೇಳಿದ್ದಾರೆ ಸೂಟ್‌ಕೇಸ್ ಇದ್ದರಷ್ಟೆ ಜೆಡಿಎಸ್‌ನಲ್ಲಿ ಅವಕಾಶ' ಎಂದು ಇಂತಹಾ ಅನೈತಿಕ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ ಪಕ್ಷ ಜೆಡಿಎಸ್‌ ಅನ್ನು ಮುಗಿಸಲು ಹೊರಟಿದೆ ಎಂದ ಅವರು ಕಾಂಗ್ರೆಸ್‌ ಮೇಲೆ ಹೆಚ್ಚೇನು ಮಾತನಾಡುವುದಿಲ್ಲ ಎಂದರು.

English summary
BJP state president Yeddyurappa said CM HD Kumaraswamy should declare farmers loan wavier this assembly session only. If not BJP will protest against government all over the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X