ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ದರಿದ್ರ ಪಕ್ಷ, ಅಲ್ಲಿ ವಲಸಿಗರದ್ದೇ ದರ್ಬಾರ್: ಎಚ್‌ಡಿಕೆ

By Manjunatha
|
Google Oneindia Kannada News

Recommended Video

ಕಾಂಗ್ರೆಸ್ ಹಾಗು ಸಿದ್ದರಾಮಯ್ಯನವರ ಮೇಲೆ ಹರಿಹಾಯ್ದ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು, ಮಾರ್ಚ್ 23: ಇಂದು ಮುಕ್ತಾಯವಾದ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ತೀವ್ರ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

ಜೆಡಿಎಸ್ ಉಚ್ಛಾಟಿತ ಶಾಸಕರರು ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡದಂತೆ ತಡೆಯಲು ವಿಫಲವಾಗಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಎಣಿಕೆಯಂತೆ ಮತದಾನ ನಡೆಯದ ಕಾರಣ ಹತಾಶರಾದಂತಾಗಿದ್ದ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಪಕ್ಷವನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಸಂಭೋಧಿಸಿ ಟೀಕಿಸಿರು.

ಹೈಡ್ರಾಮಾ : ಚುನಾವಣೆ ನಿಲ್ಲಿಸಿ, ಇದು ಅಕ್ರಮ ಎಂದ ರೇವಣ್ಣಹೈಡ್ರಾಮಾ : ಚುನಾವಣೆ ನಿಲ್ಲಿಸಿ, ಇದು ಅಕ್ರಮ ಎಂದ ರೇವಣ್ಣ

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕಾಂಗ್ರೆಸ್‌ ದರಿದ್ರ ಪಕ್ಷ' ಎಂದು ಹೀನಾಯವಾಗಿ ಬೈಯ್ದರು. ಸಿದ್ದರಾಮಯ್ಯ ಅವರನ್ನೂ ತರಾಟೆಗೆ ತೆಗೆದುಕೊಂಡ ಅವರು ಅವರೊಬ್ಬ ಅವಕಾಶವಾದಿ ರಾಜಕಾರಣಿ, ಅವರ ಚಿಂತನೆ ಏನಿದ್ದರು ಸ್ವಹಿತಕ್ಕೆ ಅಷ್ಟೆ ಎಂದು ಹರಿಹಾಯ್ದರು.

Kumaraswamy lambasted on congress and Siddaramaiah

ಕಾಂಗ್ರೆಸ್‌ ಪಕ್ಷದಲ್ಲಿ ಮೂಲ ಪಕ್ಷದವರಿಗೆ ಬೆಲೆಯೇ ಇಲ್ಲದಂತಾಗಿದೆ, ಅಲ್ಲಿ ಈಗ ವಲಸಿಗರದ್ದೇ ಕಾರುಬಾರು. ಸಿದ್ದರಾಮಯ್ಯ ತನ್ನ ತಾಳಕ್ಕೆ ಎಲ್ಲರನ್ನೂ ಕುಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯಸಭಾ ಚುನಾವಣೆ 2018 LIVE: ಮತದಾನ ಮುಕ್ತಾಯ, ಫಲಿತಾಂಶಕ್ಕೆ ಕ್ಷಣಗಣನೆರಾಜ್ಯಸಭಾ ಚುನಾವಣೆ 2018 LIVE: ಮತದಾನ ಮುಕ್ತಾಯ, ಫಲಿತಾಂಶಕ್ಕೆ ಕ್ಷಣಗಣನೆ

ಕಾಂಗ್ರೆಸ್‌ನಷ್ಟು ಹೀನಾಯ ಸ್ಥಿತಿ ಜೆಡಿಎಸ್‌ಗೆ ಬಂದಿಲ್ಲ ಎಂದ ಅವರು 'ಪಾಲಿಕೆ ಮೇಯರ್‌ ವಿಷಯಕ್ಕೆ ಅವರು ನನ್ನ ಮನೆ ಬಾಗಿಲಿಗೆ ಬಂದಿದ್ದರು' ಎಂದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದಕ್ಕೂ ಮುನ್ನಾ ರಾಜ್ಯಸಭಾ ಚುನಾವಣೆ ಮತದಾನ ಪ್ರತಿಕ್ರಿಯೆ ನಡೆಯುವ ಸಮಯದಲ್ಲಿ ಕೂಡಾ ಕುಮಾರಸ್ವಾಮಿ ಅವರು ಚುನಾವಣಾ ಅಧಿಕಾರಿಗಳ ವಿರುದ್ಧ ಗುಟುರು ಹಾಕಿದ್ದರು. ಚಿಂಚನಸೂರು ಮತ್ತು ಕಾಗೋಡು ತಿಮ್ಮಪ್ಪ ಅವರಿಗೆ ಎರಡು ಬಾರಿ ಮತದಾನ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಆರೋಪಿಸಿ ಕುಮಾರಸ್ವಾಮಿ, ರೇವಣ್ಣ ಮತ್ತಿತರ ಜೆಡಿಎಸ್ ಶಾಸಕರು ಕೆಲ ಕಾಲ ಮತದಾನ ಪ್ರಕ್ರಿಯೆಯನ್ನು ತಡೆದಿದ್ದರು.

English summary
jds state president Kumaraswamy lambasted on congress and said congress doing dirty politics. He also scold Siddaramaiah that he is self profit politician.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X