ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರೊಂದಿಗೆ ಸಿಎಂ ಸಭೆ: ಸ್ವಲ್ಪ ಕಿವಿಮಾತು, ಸ್ವಲ್ಪ ತರಾಟೆ

By Manjunatha
|
Google Oneindia Kannada News

ಬೆಂಗಳೂರು, ಜೂನ್ 22: ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ ಅವರು ಸಭೆ ನಡೆಸಿದ್ದು ಸಭೆಯಲ್ಲಿ ಪೊಲೀಸರಿಗೆ ಕಿವಿಮಾತು ಹೇಳುವ ಜೊತೆಗೆ ತರಾಟೆಗೂ ತೆಗೆದುಕೊಂಡಿದ್ದಾರೆ.

ಚಡಚಣ ಹತ್ಯೆ ಪ್ರಕರಣವನ್ನು ಉದಾಹರಣೆಗೆ ಹೆಸರಿಸಿದ ಮುಖ್ಯಮಂತ್ರಿಗಳು ಪೊಲೀಸರೇ ಹತ್ಯೆಗೆ ಸುಪಾರಿ ತೆಗೆದುಕೊಳ್ಳುತ್ತಿದ್ದಾರೆ, ಇದರಿಂದ ಇಲಾಖೆಯ ಮೇಲೆಯೇ ಅಪನಂಬಿಕೆ ಬರುತ್ತದೆ ಎಂದು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದು ಫಿಟ್ನೆಸ್ ಚಾಲೆಂಜ್ ಅಲ್ಲ, ಎಚ್ಡಿಕೆಗೆ ರಾಗಿಮುದ್ದೆ ಚಾಲೆಂಜ್!ಇದು ಫಿಟ್ನೆಸ್ ಚಾಲೆಂಜ್ ಅಲ್ಲ, ಎಚ್ಡಿಕೆಗೆ ರಾಗಿಮುದ್ದೆ ಚಾಲೆಂಜ್!

ಚಡಚಣ ಪ್ರಕರಣದಲ್ಲಿ ಯಾವುದೇ ಆಮೀಷಕ್ಕೆ ಒಳಗಾಗದೇ ಕಾರ್ಯ ನಿರ್ವಹಿಸಿ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿ ಪೊಲೀಸರ ಮೇಲಿನ ನಂಬಿಕೆ ಪುನರ್‌ ಸ್ಥಾಪಿಸಿಕೊಳ್ಳಿ ಎಂದು ಹೇಳಿದ್ದಾರೆ.

ಗಣಪತಿ ಪ್ರಕರಣದಲ್ಲಿಯೂ ಯಾರಿದ್ದರೂ ಬಿಡಬೇಡಿ

ಗಣಪತಿ ಪ್ರಕರಣದಲ್ಲಿಯೂ ಯಾರಿದ್ದರೂ ಬಿಡಬೇಡಿ

ಗಣಪತಿ ಪ್ರಕರಣದಲ್ಲಿ ಇಲಾಖೆಯವರೇ ಸೇರಿದಂತೆ ಯಾರಿದ್ದರೂ ಮುಲಾಜು ಬೇಡ ಎಂದು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಗಣಪತಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್‌ ಅವರೇ ಆರೋಪಿ ಸ್ಥಾನದಲ್ಲಿದ್ದು ಸಿಎಂ ಹೇಳಿಕೆಯಿಂದ ಕಾಂಗ್ರೆಸ್ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇದೆ.

ಅಪರಾಧ ಪ್ರಕರಣಗಳಲ್ಲಿ 10ನೇ ಸ್ಥಾನ

ಅಪರಾಧ ಪ್ರಕರಣಗಳಲ್ಲಿ 10ನೇ ಸ್ಥಾನ

ಕರ್ನಾಟಕ ಗೃಹ ಇಲಾಖೆ ದೇಶದಲ್ಲೇ ಮಾದರಿಯಾದಂತಹದ್ದು ಎಂದಿರುವ ಡಿಸಿಎಂ ಪರಮೇಶ್ವರ್ ಅವರು, ಅಪರಾಧ ಚಟುವಟಿಕೆಗಳಲ್ಲಿ ರಾಜ್ಯ 10ನೇ ಸ್ಥಾನದಲ್ಲಿದೆ. ಅದಕ್ಕಿಂತಲೂ ಕೆಳಗಿನ ಸ್ಥಾನಕ್ಕೆ ಇಳಿಯುವ ಗುರಿ ಹೊಂದಲಾಗಿದೆ ಎಂದರು.

ಪಂಜಾಬ್ ಮಾದರಿಯಲ್ಲಿ ರೈತ ಸಾಲಮನ್ನಾ: ಏನಿದು ಪಂಜಾಬ್ ಮಾದರಿ?ಪಂಜಾಬ್ ಮಾದರಿಯಲ್ಲಿ ರೈತ ಸಾಲಮನ್ನಾ: ಏನಿದು ಪಂಜಾಬ್ ಮಾದರಿ?

ಪೊಲೀಸ್ ಗೃಹ ಕಾರ್ಯಕ್ರಮಕ್ಕೆ ಸೂಚನೆ

ಪೊಲೀಸ್ ಗೃಹ ಕಾರ್ಯಕ್ರಮಕ್ಕೆ ಸೂಚನೆ

2013ರಲ್ಲಿ ಪೊಲೀಸ್ ಗೃಹ ಕಾರ್ಯಕ್ರಮ ರೂಪಿಸಲಾಗಿತ್ತು. ಈ ಯೋಜನೆ ಅಡಿ ಪೊಲೀಸರಿಗೆ 11000 ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶ ಇತ್ತು. ಈಗ ಇದು ಕಾರ್ಯರೂಪಕ್ಕೆ ಬರಲಿದೆ ಎಂದರು.

ಕೋಮು ಗಲಭೆ ಹತ್ತಿಕ್ಕಿ

ಕೋಮು ಗಲಭೆ ಹತ್ತಿಕ್ಕಿ

ಕೋಮು ಗಲಭೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿವೆ. ಹಾಗಾಗಿ ಕೋಮು ಗಲಭೆಗಳನ್ನು ಹತ್ತಿಕ್ಕಲು ವಿಶೇಷ ಕ್ರಮದ ಕೈಗೊಳ್ಳಲು ಸಿಎಂ, ಡಿಸಿಎಂ ಅವರುಗಳು ಪೊಲೀಸರಿಗೆ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಲು ಸೂಚನೆ ನೀಡಿದ್ದಾರೆ.

ಗೌರಿ ಕೇಸನ್ನು ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗಿ

ಗೌರಿ ಕೇಸನ್ನು ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗಿ

ಗೌರಿ ಹತ್ಯೆ ಪ್ರಕರಣವನ್ನು ಭಾಗಷಃ ಭೇದಿಸಲು ಯಶಸ್ವಿಯಾಗಿರುವ ಎಸ್‌ಐಟಿ ತಂಡಕ್ಕೆ ಸಿಎಂ ಮತ್ತು ಡಿಸಿಎಂ ಶುಭ ಕೋರಿದರು. ಗೌರಿ ಪ್ರಕರಣವನ್ನು ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗಿ ಎಂದು ಅವರು ಸಲಹೆ ನೀಡಿದರು.

ಸುರಕ್ಷತೆ ಕೆಎಸ್‌ಪಿ ಆಪ್ ಬಿಡುಗಡೆ

ಸುರಕ್ಷತೆ ಕೆಎಸ್‌ಪಿ ಆಪ್ ಬಿಡುಗಡೆ

ಸುರಕ್ಷತೆ ಕರೆ, ದೂರು ವಿಭಾಗ ಇತರೆ ಅವಕಾಶಗಳನ್ನು ಹೊಂದಿರುವ ಕರ್ನಾಟಕ ರಾಜ್ಯ ಪೊಲೀಸ್ ಅಪ್ಲಿಕೇಶನ್‌ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

English summary
Cm Kumaraswamy and DCM Parameshwar had meeting with Karnataka police officers in police head quarter today. Both gave some key instructions to officers about law and order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X