ಕುಮಾರ ಬಂಗಾರಪ್ಪ ಜತೆ ಒನ್ಇಂಡಿಯಾ ಕನ್ನಡ ವಿಶೇಷ ಸಂದರ್ಶನ

Posted By:
Subscribe to Oneindia Kannada
ಬೆಂಗಳೂರು, ಫೆಬ್ರವರಿ 17: ಕಾಂಗ್ರೆಸ್ ನಲ್ಲಿ ದೊಡ್ಡ ಗ್ಯಾಪ್ ಇದೆ. ಎಐಸಿಸಿ ಹಾಗೂ ಕೆಪಿಸಿಸಿ ಮಧ್ಯೆ, ಕೆಪಿಸಿಸಿ ಹಾಗೂ ಸರಕಾರದ ಮಧ್ಯೆ. ಕಳೆದ ಆರು ವರ್ಷದಿಂದ ಒಬ್ಬರೇ ಅಧ್ಯಕ್ಷರಿದ್ದಾರೆ. ಅವರನ್ನು ಬದಲಿಸಲು ಆಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ್ದಾರೆ ಮಾಜಿ ಸಚಿವ ಕುಮಾರ ಬಂಗಾರಪ್ಪ.

ಕುಮಾರ ಬಂಗಾರಪ್ಪ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಆ ಹಿನ್ನೆಲೆಯಲ್ಲಿ ಒನ್ಇಂಡಿಯಾ ಕನ್ನಡ ಅವರ ಸಂದರ್ಶನ ಮಾಡಿದೆ. ಅದರ ಪೂರ್ಣ ಪಾಠ ಇಲ್ಲಿದೆ.[ಕಪ್ಪ ನೀಡಲು ಸಿದ್ದರಾಮಯ್ಯನವರಿಂದ ದುಷ್ಟಕೂಟ ರಚನೆ: ಶ್ರೀನಿವಾಸ್ ಪ್ರಸಾದ್ ಕಿಡಿ]

Kumar Bangarappa

* ನೀವು ಬಿಜೆಪಿಗೆ ಸೇರುತ್ತೀರಾ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ, ಹೌದಾ
ಇಲ್ಲ, ಸದ್ಯಕ್ಕೆ ಅಂಥ ಯಾವ ಆಲೋಚನೆಯೂ ಇಲ್ಲ.

* ಹಾಗಿದ್ದರೆ ಇಂಥ ಸುದ್ದಿ ಹೇಗೆ ಹುಟ್ಟಿಕೊಂಡಿತು?
ಎಸ್ಸೆಂ ಕೃಷ್ಣ ಅವರು ಪಕ್ಷ ತೊರೆದರು. ನಾವೆಲ್ಲ ಅವರ ಅನುಯಾಯಿಗಳು. ಜತೆಗೆ ಯುವ ನಾಯಕ ಎಂಬ ಕಾರಣಕ್ಕೆ ಸಹಜವಾಗಿಯೇ ಈ ರೀತಿ ಸುದ್ದಿ ಹುಟ್ಟಿಕೊಳ್ಳುತ್ತೆ.

Dr G Parameshwar

* ಕಾಂಗ್ರೆಸ್ ನಲ್ಲಿ ಸಮಸ್ಯೆ ಇದೆಯಾ?
ಕಾಂಗ್ರೆಸ್ ನಲ್ಲಿ ದೊಡ್ಡ ಗ್ಯಾಪ್ ಇದೆ. ಎಐಸಿಸಿ ಹಾಗೂ ಕೆಪಿಸಿಸಿ ಮಧ್ಯೆ ಗ್ಯಾಪ್ ಇದೆ. ಕೆಪಿಸಿಸಿ-ಸರಕಾರದ ಮಧ್ಯೆ ಗ್ಯಾಪ್ ಇದೆ. ಪಕ್ಷ ದಿನದಿಂದ ದಿನಕ್ಕೆ ದಾರಿ ತಪ್ತಿದೆ. ಹಣ ಇದ್ದವರಿಗಷ್ಟೇ ಅಧಿಕಾರ ಎಂಬಂತಾಗಿದೆ. ಒಂದು ಸಣ್ಣ ಬದಲಾವಣೆಯೂ ಸಾಧ್ಯವಾಗ್ತಿಲ್ಲ.

* ಮತ್ತೆ ಪಕ್ಷದ ಹಿರಿಯರ ಅಸಮಾಧಾನಕ್ಕೆ ಕಾರಣ ಏನು?
ಕಾಂಗ್ರೆಸ್ ನಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸಿಗರು ಅನ್ನೋದು ಇದೆ. ಜತೆಗೆ ಜಾತಿಯನ್ನು ರಾಜಕಾರಣದಿಂದ ಬೇರ್ಪಡಿಸಲಾಗದ್ದು. ಪಕ್ಷದಲ್ಲಿ ಆಗುತ್ತಿರುವ ಅವ್ಯವಸ್ಥೆ ಬಗ್ಗೆ ಜನಾರ್ದನ ಪೂಜಾರಿ, ವಿಶ್ವನಾಥ್ ಅಂಥವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಅದರಿಂದ ತಲೆ ಎತ್ತುವುದಕ್ಕೆ ಆಗದಂಥ ಪರಿಸ್ಥಿತಿ ಇದೆ. ಜೊತೆಗೆ ಜಾಫರ್ ಷರೀಫ್, ಪೂಜಾರಿ ಹಾಗೂ ವಿಶ್ವನಾಥ್ ಅಂತಹವರಿಗೆ ಶೋಕಾಸ್ ನೀಡಿದರೆ ಪಕ್ಷದಲ್ಲಿ ಆಂತರಿಕ ಪ್ರಭುತ್ವ ಎಲ್ಲಿದ್ದ ಹಾಗಾಯಿತು?

Rahul Gandhi

* ಪಕ್ಷದಲ್ಲಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ತಪ್ಪುತ್ತಿದ್ದಾರಾ?
ನೋಡಿ, ದೆಹಲಿ ಚುನಾವಣೆಯಲ್ಲಿ ಒಂದೂ ಸೀಟು ಗೆಲ್ಲಲಾರದವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರು. ಆ ನಂತರ ಮತ್ತೆ ನೀವು ಬೇಡ, ಅಖಿಲೇಶ್ ಮುಖ್ಯಮಂತ್ರಿ ಆಗಲಿ ಎಂದರು. ಇವೆಲ್ಲ ಎಂಥ ಗೊಂದಲ ಅಲ್ಲವಾ!

* ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಗೆ ಪೂರಕವಾದ ವಾತಾವರಣ ಇಲ್ಲ ಅಂತನ್ನಿಸಲ್ವಾ?
ಕಾಂಗ್ರೆಸ್ ಒಂದಕ್ಕೆ ಅಲ್ಲ, ಯಾವುದೇ ಪಕ್ಷಕ್ಕೂ ಈ ಸನ್ನಿವೇಶದಲ್ಲಿ ಅವಕಾಶ ಇಲ್ಲ. ಏಕೆಂದರೆ ಎಲ್ಲರೂ ಭ್ರಷ್ಟಾಚಾರ, ಅವರಷ್ಟು ದುಡ್ಡು ತಿಂದರು, ಇವರಿಷ್ಟು ತಿಂದರು ಅಂತಾರೆ ಹೊರತು ಅಭಿವೃದ್ಧಿ ಬಗ್ಗೆ ಮಾತನಾಡೋರೇ ಇಲ್ಲ.

HD Kumaraswamy

* ಕಾಂಗ್ರೆಸ್ ಪಕ್ಷದಲ್ಲಿ ಇರುವ ನಿಮ್ಮ ರಾಜಕೀಯ ಭವಿಷ್ಯ ಏನು?

ಮೊನ್ನೆ ಸಾಗರದಲ್ಲಿ ಒಂದು ಸಭೆ ಮಾಡಿದ್ದರು. ನೀವು ಕಾಂಗ್ರೆಸ್ ನಲ್ಲಿ ಇರೋದು ಬೇಡ. ಕೃಷ್ಣ ಅವರು ಬಿಜೆಪಿ ಸೇರಿದ್ದಾರೆ. ನಿಮ್ಮಂಥ ನಾಯಕರು ಒಂದೇ ಪಕ್ಷದಲ್ಲಿದ್ದರೆ ಆ ಪಕ್ಷ ಬಲಿಷ್ಠವಾಗಿ ಅಧಿಕಾರ ಬರುತ್ತೆ. ಇಲ್ಲದಿದ್ದರೆ. ಧರಂ ಸಿಂಗ್ ಮುಖ್ಯಮಂತ್ರಿ ಆಗಿದ್ದ ಅವಧಿಯಂಥ ಪರಿಸ್ಥಿತಿ ಬರುತ್ತೆ ಅಂದರು. ಆದರೆ ಕೆಲವು ವಿಚಾರಗಳನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಆದ್ದರಿಂದ ಯಾವ ನಿರ್ಧಾರವನ್ನೂ ಸದ್ಯಕ್ಕೆ ತೆಗೆದುಕೊಂಡಿಲ್ಲ.

* ಇನ್ನು ಎರಡು ವರ್ಷದಲ್ಲಿ ಏನು ಬೇಕಾದರೂ ಆಗಬಹುದಲ್ವಾ?
ಸಿದ್ದರಾಮಯ್ಯ ಅವರ ಸರಕಾರ ಕೆಲಸ ಮಾಡಿದೆ. ಆದರೆ ಅದು ಜನರನ್ನು ತಲುಪಿಲ್ಲ. ಪಕ್ಷದಲ್ಲಿ ಗ್ರೂಪಿಸಂ ಇದೆ. ಇನ್ನು ಕಳೆದ ಸಲ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಭಂಡಾರಿ ಅನ್ನೋ ಡಮ್ಮಿ ಕ್ಯಾಂಡಿಡೇಟ್ ಗೆ ಟಿಕೆಟ್ ನೀಡಿ ಪ್ರತಿಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟರು. ಸಾಗರದಲ್ಲಿ ಜೆಡಿಎಸ್ ನವರಿಗೆ ಅನುಕೂಲ ಮಾಡಿಕೊಡ್ತಿದ್ದಾರೆ. ಹೀಗೆ ಮಾಡಿದರೆ ಪಕ್ಷದ ಕಾರ್ಯಕರ್ತರು ಆತ್ಮಸ್ಥೈರ್ಯ ಕಳೆದುಕೊಳ್ತಾರೆ. ಇನ್ನು ಮತ್ತೊಮ್ಮೆ ಜೆಡಿಎಸ್ ಜತೆ ಸೇರಿ ಅಧಿಕಾರ ಮಾಡಿದರೆ ರಾಜ್ಯದ ಅಭಿವೃದ್ಧಿ ಹಾಳಾಗಿ ಹೋಗುತ್ತೆ.

Madhu Bangarappa

* ನಿಮ್ಮ ಕುಟುಂಬ ಕಲಹದ ಕಾರಣಕ್ಕೆ ಅಂದರೆ ಮಧು ಜೆಡಿಎಸ್ ನಲ್ಲಿ ಇದ್ದಾರೆ ಎಂದು ನಿಮಗೆ ಜೆಡಿಎಸ್ ಆಯ್ಕೆ ಅಲ್ಲವಾ?
ನನ್ನ ತಂದೆ ತೀರಿಕೊಂಡಾಗ, ಮೊನ್ನೆಯ ಮದುವೆ ವೇಳೆ ಕೂಡ ಕಹಿ ಮರೆಯುವ ಪ್ರಯತ್ನ ಮಾಡಿದ್ದೀನಿ. ಆದರೆ ಅದು ಸದ್ಯಕ್ಕೆ ಸರಿಹೋಗುವಂತಿಲ್ಲ. ಪಕ್ಷ ಬಿಡುವ ಬಗ್ಗೆ ಯೋಚಿಸಿಲ್ಲ ಅಂದ ಮೇಲೆ ಜೆಡಿಎಸ್ ಮಾತೆಲ್ಲಿಂದ?

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former minister Kumara Bangarappa exclusive interview by Oneindia Kannada on the backdrop of his BJP Joining rumor.
Please Wait while comments are loading...