ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾ ಜತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಒಪ್ಪಂದ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 31: ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಕ್ಯಾಬ್ ಸೇವೆ ನೀಡುವ ಓಲಾ ಜತೆ ಒಪ್ಪಂದ ಮಾಡಿಕೊಂಡಿದೆ. ಇಲಾಖೆಯು ರಾಜಧಾನಿಯಿಂದ ರಾಜ್ಯದ ಪ್ರವಾಸಿ ಸ್ಥಳಗಳಿಗೆ ತೆರಳುವ ಪ್ರವಾಸಿಗರಿಗೆ 'ಬೆಂಗಳೂರು ಡಿಟೂರ್ಸ್' ಹೆಸರಿನಲ್ಲಿ ಪ್ಯಾಕೇಜ್ ಬಿಡುಗಡೆ ಮಾಡಿದ್ದು ಇದಕ್ಕೆ ಓಲಾ ಕೈ ಜೋಡಿಸಿದೆ.

ರಾಜ್ಯದ ಪ್ರವಾಸಿ ಸ್ಥಳಗಳಿಗೆ ತೆರಳಲು ಕಾರಿನ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್'ಟಿಡಿಸಿ) ಮಾಡುತ್ತದೆ. ಕಾರನ್ನು ಪ್ರವಾಸಿಗರ ಮನೆ ಬಾಗಿಲಿಗೇ ಕಳುಹಿಸಲಾಗುತ್ತದೆ ಮತ್ತು ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ಮಾರ್ಗದರ್ಶಕರನ್ನು ನೇಮಿಸಲಾಗುತ್ತದೆ..

KSTDC ties up with Ola for state tours from Bengaluru

ಪ್ರವಾಸದ ಪ್ಯೇಕೇಜ್ ಗಳು
ಒಟ್ಟು ಎರಡು ರೀತಿಯ ಪ್ರವಾಸದ ಪ್ಯಾಕೇಜ್ ಗಳಿವೆ. ಒಂದು ದಿನದ ಹಾಗೂ ಒಂದಕ್ಕಿಂತ ಹೆಚ್ಚು ದಿನದ ಪ್ರವಾಸದ ಪ್ಯಾಕೇಜುಗಳನ್ನು ಬಿಡುಗಡೆ ಮಾಡಲಾಗಿದೆ.

ಬೆಂಗಳೂರಿನ ನಂದಿ ಬೆಟ್ಟಕ್ಕೆ ಒಂದು ದಿನದ 'ಬೆಂಗಳೂರು ನಂದಿ ಪ್ರವಾಸ' ಪ್ಯಾಕೇಜ್ ಇದೆ. ಇನ್ನು ಬನ್ನೇರುಘಟ್ಟಕ್ಕೆ 'ಬೆಂಗಳೂರು ವನ್ಯಜೀವಿ' ಹೆಸರಿನ ಪ್ಯಾಕೇಜ್ ಇದೆ.

ಇದಲ್ಲದೆ ಮೈಸೂರು ಮೂಲಕ ಊಟಿಗೆ, ಚಿತ್ರದುರ್ಗ ಮಾರ್ಗವಾಗಿ ಹಂಪಿಗೆ ಹಾಗೂ ಬೆಂಗಳೂರು-ಶ್ರವಣಬೆಳಗೊಳ-ಬೇಲೂರು-ಹಳೆ ಬೀಡು ಹಾಗೂ ಮಡಿಕೇರಿಗೆ ಇದೇ ರೀತಿಯ ಒಂದಕ್ಕಿಂತ ಹೆಚ್ಚು ದಿನದ ಪ್ರವಾಸ ಪ್ಯಾಕೇಜ್ ಗಳಿವೆ.

ಹೆಚ್ಚಿನ ಮಾಹಿತಿ ಮತ್ತು ವಿವರಗಳಿಗೆ ಕೆಎಸ್'ಟಿಡಿಸಿಯ ಅಧಿಕೃತ ವೆಬ್ಸೈಟ್ www.kstdc.co ಸಂಪರ್ಕಿಸಬಹುದು.

English summary
The Department of Tourism and Karnataka State Tourism Development Corporation (KSTDC) have tied up with cab aggregator Ola to offer tours to popular destinations in and around Bengaluru and throughout Karnataka in the name of ‘Bengaluru Detours’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X