ಏರ್ ಪೋರ್ಟ್ ಟ್ಯಾಕ್ಸಿ ಆನ್ ಲೈನ್ ನೋಂದಣಿ ಮಾಡದಿದ್ದರೆ ಸೇವೆ ರದ್ದು

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 04 : ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಸೇರಿರುವ ವಿಮಾನ ನಿಲ್ದಾಣಕ್ಕೆ ಸಾರಿಗೆ ಸೇವೆ ನೀಡುವ ಟ್ಯಾಕ್ಸಿ ಗಳು ಜ.7ರೊಳಗೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಸಿದ್ದರೆ ಸೇವೆಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಏರ್ ಟ್ಯಾಕ್ಸಿ ಸೌಲಭ್ಯ?

ಈ ಟ್ಯಾಕ್ಸಿ ಎಲ್ಲ ಬಗೆಯ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲು ನೋಂದಣಿ ಮಾಡಿಕೊಳ್ಳಬೇಕೆಂದು ಇದುವರೆಗೆ ಆರು ಬಾರಿ ಸೂಚನೆ ನೀಡಲಾಗಿದೆ. ಸೇವೆ ನೀಡುತತ್ಇರುವ 400 ಟ್ಯಾಕ್ಸಿಗಳ ಪೈಕಿ 134 ಎಸಿ ಹಾಗೂ 17 ಎಸಿ ರಹಿತ ಟ್ಯಾಕ್ಸಿಗಳು ಮಾತ್ರ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಂಡಿದೆ.

KSTDC sets deadline for Airport taxis for registration on January 7

ಜನವರಿ 7 ರೊಳಗೆ ಎಲ್ಲ ಟ್ಯಾಕ್ಸಿಗಳು ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸೇವೆ ರದ್ದು ಗೊಳಿಸಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಿದೆ. ಲೈಸನ್ಸ್, ವಿಮೆ ನವೀಕರಣಗೊಳಸದಿರುವುದು, ಟ್ಯಾಕ್ಸಿಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಸೇರಿದಂತೆ ಅನೇಕ ಟ್ಯಾಕ್ಸಿಗಳು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿವೆ.

ಬೆಂಗಳೂರಿನಲ್ಲಿ ದುಬಾರಿಯಾಗಲಿದೆ ಟ್ಯಾಕ್ಸಿ ಪ್ರಯಾಣ?

ಇದಕ್ಕೆ ಕಡಿವಾಣ ಹಾಕಲು ಆನ್ ಲೈನ್ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಆರು ಬಾರಿ ಸೂಚನೆ ನೀಡಿದ್ದರೂ ಚಾಲಕರು ಪ್ರತಿಕ್ರಿಯಿಸಿಲ್ಲ. ಹೀಗಾಗಿ ಕೊನೆ ಅವಕಾಶ ನೀಡಿ ಸೂಚನೆ ಹೊರಡಿಸಲಾಗಿದೆ.

ಸೇವೆ ರದ್ದು: ಕೆಎಸ್ಟಿಡಿಸಿ ಹಾಗೂ ಬಿಐಎಎಲ್ ಮಾಡಿಕೊಂಡ ಒಪ್ಪಂದದ ಪ್ರಕಾರ, ಟ್ಯಾಕ್ಸಿಗಳು 4 ವರ್ಷ ಮಾತ್ರ ಸೇವೆ ನೀಡಬೇಕು. ಈ ಹಿಂದೆ ಕೆಲ ಚಾಲಕರು ಲೋಕಾಯುಕ್ತದ ಮೊರೆ ಹೋದಾಗ ಅವರ ಪರವಾನಗಿಯನ್ನು4 ವರ್ಷದಿಂದ 7ವರ್ಷಕ್ಕೆ ವಿಸ್ತರಣೆ ಮಾಡಲಾಗಿತ್ತು.

ಆನ್ ಲೈನ್ ನಲ್ಲಿ ಟ್ಯಾಕ್ಸಿಗಳ ಲೈಸೆನ್ಸ್, ಫಿಟ್ ನೆಸ್ ಸರ್ಟಿಫಿಕೇಟ್, ವಿಮೆ , ಮಾಲಿನ್ಯ ಪ್ರಮಾಣ ಸೇರಿದಂತೆ ಎಲ್ಲ ಮಾಹಿತಿಗಳನ್ನು ಅಪ್ ಲೋಡ್ ಮಾಡಲಾಗುತ್ತದ. ಇದರಲ್ಲಿ ಯಾವುದಾದರೂ ದಾಖಲೆ ನವೀಕರಣಗೊಳ್ಳುವ ಸಮಯ ಬಂದರೆ ಸ್ವಯಂಚಾಲಿತವಾಗಿ ಚಾಲಕರ ಮೊಬೈಲೆ ಗೆ ಸಂದೇಶ ಬರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Tourism Development Corporation has been set deadline for taxis which are serving to Airport for registration with the corporation through online. Around 400 taxis are serving this route which taxis have been founded by the corporation and only 134 have taken registration.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ