ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಪುನೀತ ಯಾತ್ರೆ

|
Google Oneindia Kannada News

ಬೆಂಗಳೂರು, ನವೆಂಬರ್ 28 : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯದ ಹೊರರಾಜ್ಯದ ಜನತೆಯು ತಮ್ಮ ತಮ್ಮ ಧರ್ಮದ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಪುನೀತ ಯಾತ್ರೆ ಎಂಬ ರಿಯಾಯಿತಿ ದರದ ಪ್ರವಾಸ ಪ್ಯಾಕೇಜನ್ನು ಆಯೋಜಿಸಲಾಗುತ್ತಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸವೀಗ ಪ್ರಯಾಸ!ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸವೀಗ ಪ್ರಯಾಸ!

ಈ ಪ್ರವಾಸಗಳನ್ನು ನಿಗಮದ ಇಲ್ಲವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಿಂದ ಪಡೆದ ಸುಸಜ್ಜಿತ ಎಸಿ ಬಸ್ಸುಗಳಲ್ಲಿ ನಿಯೋಜಿಸಲಾಗುತ್ತಿದೆ. ಈ ಪ್ರವಾಸಗಳಲ್ಲಿ ರಾಜ್ಯದ ಹಾಗೂ ಹೊರರಾಜ್ಯದ ಅತ್ಯಂತ ಪವಿತ್ರವಾದ ದೇವಸ್ಥಾನಗಳು, ಚರ್ಚುಗಳು, ಮಸೀದಿ ಇತ್ಯಾದಿಗಳನ್ನು ದರ್ಶಿಸಬಹುದಾಗಿದೆ. ಅಲ್ಲದೇ ಈ ಸ್ಥಳಗಳ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ಪರಿಚಯವನ್ನು ಪ್ರವಾಸಿಗರು ಮಾಡಿಕೊಳ್ಳಬಹುದಾಗಿದೆ.

ನಿರ್ವಹಣೆಯಿಲ್ಲದೆ ಸೊರಗುತ್ತಿವೆ ಮಡಿಕೇರಿಯ ಪ್ರವಾಸಿ ತಾಣಗಳುನಿರ್ವಹಣೆಯಿಲ್ಲದೆ ಸೊರಗುತ್ತಿವೆ ಮಡಿಕೇರಿಯ ಪ್ರವಾಸಿ ತಾಣಗಳು

kstdc launches Puneeta Yatre for Devotees

ಧಾರ್ಮಿಕ ಸ್ಥಳಗಳು: ತಿರುಪತಿ ಬಾಲಾಜಿ ದರ್ಶನ, ಕಾಳಹಸ್ತಿ, ಶಿರಡಿ ಸಾಯಿಬಾಬಾ, ಬೇಲೂರು-ಹಳೇಬೀಡು-ಶ್ರವಣಬೆಳಗೊಳ, ಕುಂದಾದ್ರಿ ಬೆಟ್ಟ, ಮಂತ್ರಾಲಯ, ಹಂಪಿ, ಮಲೆಮಹದೇಶ್ವರ, ನಂಜನಗೂಡು, ಎಡೆಯೂರು, ಆದಿಚುಂಚನಗಿರಿ, ಸಿಗಂಧೂರ, ಗೋಕರ್ಣ, ಪಂಚ ಜ್ಯೋತಿರ್ಲಿಂಗಗಳ ದರ್ಶನ, ಅಜಂತಾ, ಎಲ್ಲೋರ, ಔರಂಗಾಬಾದ್, ಬಾಬಾಬುಡನಗಿರಿ, ಕೂಡಲಸಂಗಮ, ಬಸವನಬಾಗೇವಾಡಿ, ಬಸವಕಲ್ಯಾಣ, ಗಾಣಗಾಪುರ, ಸನ್ನತಿ ಸೌದತ್ತಿ-ಎಲ್ಲಮ್ಮ, ಕೊಲ್ಲಾಪುರ-ಲಕ್ಷ್ಮಿ ದರ್ಶನ, ಅಯ್ಯಪ್ಪಸ್ವಾಮಿ ದರ್ಶನ, ಮಧುರೈ ಮೀನಾಕ್ಷಿ ದರ್ಶನ, ಗುರುವಾಯೂರು, ಫಳನಿ ಮುಂತಾದ ಧಾರ್ಮಿಕ ಪ್ರವಾಸಗಳನ್ನು ಶೇ.25 ರಷ್ಟು ರಿಯಾಯ್ತಿ ದರದಲ್ಲಿ ಆಚರಣೆ ಮಾಡುತ್ತಿರುವುದರಿಂದ, ಪ್ರವಾಸಿಗಳು ಈ ಮೇಲಿನ ಸ್ಥಳಗಳಿಗೆ ಪ್ರವಾಸಗಳನ್ನು ಕೈಗೊಂಡು ಇದರ ಸದುಪಯೋಗ ಪಡೆದುಕೊಳ್ಳಬಹುದು.

English summary
Karnataka State Tourism corporation has launched a programme Puneeta Yatre under this programme devottes can visit many historical and religious places in the state and out of the state as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X