ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಶ್ರೀಹರಿಕೋಟಾ ನಡುವೆ ಕೆಎಸ್ಆರ್‌ಟಿಸಿ ಐರಾವತ ಬಸ್ ಸೇವೆ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು-ಶ್ರೀಹರಿಕೋಟಾ ನಡುವೆ ಐರಾವತ ಡೈಮಂಡ್ ಕ್ಲಾಸ್ ಬಸ್ ಸೇವೆ ಆರಂಭಿಸುತ್ತಿದೆ. ಹಗಲು 685, ರಾತ್ರಿ 790 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.

ಬೆಂಗಳೂರು ಮತ್ತು ಆಂಧ್ರಪ್ರದೇಶದ ಶ್ರೀಹರಿಕೋಟಾ ನಡುವೆ ಅಕ್ಟೋಬರ್ 8ರಿಂದ ಐರಾವತ ಡೈಮಂಡ್ ಕ್ಲಾಸ್ ಬಸ್ ಸೇವೆ ಆರಂಭವಾಗಲಿದೆ. ಬೆಳಗ್ಗೆ ಮತ್ತು ರಾತ್ರಿ ಬೆಂಗಳೂರು-ಶ್ರೀಹರಿಕೋಟಾ ನಡುವೆ ಪ್ರತಿದಿನ ಬಸ್ಸುಗಳ ಸಂಚಾರ ನಡೆಸಲಿವೆ.

ದಸರಾ ಹಬ್ಬಕ್ಕೆ ಕೆಎಸ್ ಆರ್ ಟಿಸಿಯಿಂದ 1500 ಹೆಚ್ಚುವರಿ ಬಸ್ದಸರಾ ಹಬ್ಬಕ್ಕೆ ಕೆಎಸ್ ಆರ್ ಟಿಸಿಯಿಂದ 1500 ಹೆಚ್ಚುವರಿ ಬಸ್

KSRTC to start new Airavat bus service to Bengaluru-Sriharikota

ವೇಳಾಪಟ್ಟಿ : ಪ್ರತಿದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಿಂದ ಹೊರಡುವ ಬಸ್ 5.15ಕ್ಕೆ ಶ್ರೀಹರಿಕೋಟಾ ತಲುಪಲಿದೆ. ರಾತ್ರಿ 9.45ಕ್ಕೆ ಹೊರಡುವ ಬಸ್ ಮುಂಜಾನೆ 5 ಗಂಟೆಗೆ ಶ್ರೀಹರಿಕೋಟಾ ತಲುಪಲಿದೆ.

ದಸರೆ ಹಿನ್ನೆಲೆ : ಕೆಎಸ್ ಆರ್ ಟಿ ಸಿಯಿಂದ ನೂತನ ಬಸ್ ವ್ಯವಸ್ಥೆದಸರೆ ಹಿನ್ನೆಲೆ : ಕೆಎಸ್ ಆರ್ ಟಿ ಸಿಯಿಂದ ನೂತನ ಬಸ್ ವ್ಯವಸ್ಥೆ

ಶ್ರೀಹರಿಕೋಟಾದಿಂದ ಪ್ರತಿದಿನ ಬೆಳಗ್ಗೆ 8.30ಕ್ಕೆ ಹೊರಡುವ ಬಸ್ 3.45ಕ್ಕೆ ಬೆಂಗಳೂರಿಗೆ ಬರಲಿದೆ. ರಾತ್ರಿ 8.30ಕ್ಕೆ ಹೊರಡುವ ಮತ್ತೊಂದು ಬಸ್ ಮುಂಜಾನೆ 4 ಗಂಟೆಗೆ ಬೆಂಗಳೂರಿಗೆ ಬಂದು ತಲುಪಲಿದೆ.

ಹಗಲು ಹೊತ್ತಿನ ಬಸ್ಸುಗಳಲ್ಲಿ ಸಂಚಾರ ನಡೆಸಲು 685 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ರಾತ್ರಿ ವೇಳೆ ಸಂಚಾರ ನಡೆಸುವ ಬಸ್ಸುಗಳ ಪ್ರಯಾಣದರ 790 ರೂ.ಗಳಾಗಿವೆ.

English summary
Karnataka State Road Transport Corporation (KSRTC) will start Airavat diamond class bus service in the rote of Bengaluru-Sriharikota from October 8, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X