ಬಸವ ಜಯಂತಿ ಅಂಗವಾಗಿ ಕೆಎಸ್ಆರ್‌ಟಿಸಿಯಿಂದ ವಿಶೇಷ ಬಸ್

Posted By:
Subscribe to Oneindia Kannada

ಬೆಂಗಳೂರು, ಮೇ 06 : ಬಸವ ಜಯಂತಿ ಅಂಗವಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರಿನಿಂದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಗೆ ವಿಶೇಷ ಬಸ್ ಸೌಲಭ್ಯವನ್ನು ಒದಗಿಸಿದೆ. ಮೇ 6 ಮತ್ತು 7ರಂದು ಬೆಂಗಳೂರಿನಿಂದ ಈ ಬಸ್ಸುಗಳು ಸಂಚಾರ ನಡೆಸಲಿವೆ.

'ಮೇ 9ರ ಸೋಮವಾರ ಅಕ್ಷಯ ತೃತೀಯ ಮತ್ತು ಬಸವೇಶ್ವರ ಜಯಂತಿ ಇದೆ. ಇದರ ಅಂಗವಾಗಿ ವಿಶೇಷ ಬಸ್ ಸೇವೆ ಒದಗಿಸಲಾಗುತ್ತಿದೆ' ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಅಶೋಕಾನಂದ ಅವರು ಹೇಳಿದ್ದಾರೆ. ಈ ಬಸ್ಸುಗಳನ್ನು ಮುಂಗಡ ಟಿಕೆಟ್ ಬುಕ್ ಮಾಡಲು ವ್ಯವಸ್ಥೆ ಮಾಡಲಾಗಿದೆ. [2016ರ ಸರ್ಕಾರಿ ರಜೆ ಪಟ್ಟಿ]

basava jayanthi

ವಿಶೇಷ ಬಸ್ಸುಗಳು ಮೇ 6 ಮತ್ತು 7ರಂದು ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ತೆರಳಲಿವೆ. ಮೇ 9 ಮತ್ತು 10ರಂದು ಪ್ರಮುಖ ನಗರಗಳಿಂದ ಬೆಂಗಳೂರಿಗೆ ವಾಪಸ್ ಆಗಲಿವೆ. ಜನರು ಈ ಬಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆ ಮನವಿ ಮಾಡಿದೆ. [13 ಬಸ್ ನಿಲ್ದಾಣದಲ್ಲಿ ಉಚಿತ ವೈಫೈ ಸೇವೆ]

ಸಾರ್ವಜನಿಕರು ವಿಶೇಷ ಬಸ್‌ನಲ್ಲಿ ಸಂಚಾರ ನಡೆಸಲು ಸಂಸ್ಥೆಯ ಬಸ್ ನಿಲ್ದಾಣಗಳಲ್ಲಿನ ಬುಕ್ಕಿಂಗ್ ಕೌಂಟರ್, ಖಾಸಗಿ ಅವತಾರ ಬುಕ್ಕಿಂಗ್ ಕೌಂಟರ್‌ ಅಥವ www.ksrtc.in ವೆಬ್‌ಸೈಟ್‌ಗೆ ಲಾಗಿನ್ ಆಗಿ, ಟಿಕೆಟ್ ಬುಕ್ ಮಾಡಬಹುದು. ['ರಾಜ್ಯದ ನಗರಗಳಲ್ಲಿ ಮೇ ಅಂತ್ಯದ ವೇಳೆಗೆ ನಗರ ಸಾರಿಗೆ']

* ಮೇ 7 ಶನಿವಾರ
* ಮೇ 8 ಭಾನುವಾರ (ಸರ್ಕಾರಿ ರಜೆ)
* ಮೇ 9 ಸೋಮವಾರ (ಅಕ್ಷಯ ತೃತೀಯ, ಬಸವ ಜಯಂತಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In view of Basava Jayanthi on May 9, 2016 KSRTC will operate special buses to various places from Bengaluru on May 6 and 7.
Please Wait while comments are loading...