ಮಹಾಶಿವರಾತ್ರಿ : ಮಾ.4, 5ರಂದು ವಿಶೇಷ ಬಸ್ ಸೌಲಭ್ಯ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 03 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ಮಾರ್ಚ್ 4 ಮತ್ತು 5 ರಂದು ವಿಶೇಷ ಬಸ್ಸುಗಳು ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲಿವೆ.

ವಿಶೇಷ ಬಸ್ಸುಗಳು ಮೈಸೂರು ರಸ್ತೆ, ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ಮಲ್ಲೇಶ್ವರಂ 18ನೇ ಕ್ರಾಸ್ ಸೇರಿದಂತೆ ವಿವಿಧ ಪಿಕ್ ಅಪ್ ಪಾಯಿಂಟ್‌ಗಳಿಂದ ಹೊರಡಲಿವೆ. ಕೆಎಸ್ಆರ್‌ಟಿಸಿ ವೆಬ್ ಸೈಟ್‌ಗೆ ಭೇಟಿ ನೀಡಿ, ಮುಂಗಡ ಟಿಕೆಟ್ ಬುಕ್ ಮಾಡಬಹುದಾಗಿದೆ. [ವೆಬ್ ಸೈಟ್‌ ವಿಳಾಸ]

ksrtc

ಚಿತ್ರದುರ್ಗ, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಕೊಲ್ಹಾಪುರ, ಹೊಸಪೇಟೆ, ಗಂಗಾವತಿ, ಕೊಪ್ಪಳ, ಕುಷ್ಟಗಿ, ಬಾಗಲಕೋಟೆ, ವಿಜಯಪುರ, ಚಳ್ಳಕೆರೆ, ಬಳ್ಳಾರಿ, ರಾಯಚೂರು, ಬೀದರ್, ಕಲಬುರಗಿ ಕಡೆ ಸಾಗುವ ಮುಂಗಡ ಬುಕ್ಕಿಂಗ್ ಇಲ್ಲದ ಬಸ್ಸುಗಳು ಕೆಂಪೇಗೌಡ ಬಸ್ ನಿಲ್ದಾಣ, ಬಸವೇಶ್ವರ ಬಸ್ ನಿಲ್ದಾಣದಿಂದ ಹೊರಡಲಿವೆ ಎಂದು ಪ್ರಕಟಣೆ ತಿಳಿಸಿದೆ. [2016ರ ಸರ್ಕಾರಿ ರಜೆ ಪಟ್ಟಿ]

ಅಂದಹಾಗೆ ಮಾರ್ಚ್ 7ರ ಸೋಮವಾರ ಮಹಾ ಶಿವರಾತ್ರಿ ಇದೆ. ಮಾರ್ಚ್ 5 ಶನಿವಾರ, ಮಾರ್ಚ್ 6ರಂದು ಭಾನುವಾರವಾಗಿರುವುದರಿಂದ ಸರಣಿ ರಜೆ ಸಿಗಲಿದೆ. [13 ಬಸ್ ನಿಲ್ದಾಣದಲ್ಲಿ ಉಚಿತ ವೈಫೈ ಸೇವೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka State Road Transport Corporation (KSRTC) will operate additional buses from Bengaluru to various destinations in the State on March 4 and 5, 2016 for Mahashivarathri festival.
Please Wait while comments are loading...