• search
For bengaluru Updates
Allow Notification  

  ಇದ್ಯಾವ ಸಾಯೋ ಆಟ: ಅಪಘಾತ ಜಾಗೃತಿಗಾಗಿ ಬೀದಿ ನಾಟಕ

  |

  ಬೆಂಗಳೂರು, ಮಾರ್ಚ್ 13: ರಾಜ್ಯದಲ್ಲಿ ಅಪಘಾತ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಕೆಎಸ್ಆರ್ ಟಿಸಿಯು ಅಪಘಾತವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಲು ಮುಂದಾಗಿದೆ.

  ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ದ್ವಿಚಕ್ರ ವಾಹನಗಳು ನಿಗಮದ ಬಸ್ಸುಗಳ ನಡುವೆ ಹೆಚ್ಚು ಅಪಘಾತ ವಾಗುತ್ತಿದ್ದು, ಈ ಸಂಬಂಧ ವಿಭಾಗ ಮಟ್ಟದಲ್ಲಿ ವಿಶೇಷವಾಗಿ ದ್ವಿಚಕ್ರ ಸವಾರರಿಗೆ ಸಂಚಾರ ನಿಯಮಗಳ ಹಾಗೂ ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸುವ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕಗಳನ್ನು ಆಯೋಜಿಸುತ್ತಿದೆ.

  ಅಪರಾಧ ತಡೆ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

  ನಿಗಮವು ವರ್ಲ್ಡ್ ಡಿಸೋರ್ಸ್ ಇನ್‌ಸ್ಟಿಟ್ಯೂಟ್ ಅವರ ಸಮೀಕ್ಷೆ ಪ್ರಕಾರ ಸುಮಾರು ಶೇ.42ರಷ್ಟು ಮುಖಾಮುಖಿ ಅಪಘಾತವಾದರೆ, ಶೇ.32ರಷ್ಟು ಬಸ್ಸಿನ ಅಕ್ಕ-ಪಕ್ಕ ಮತ್ತು ಶೇ.26ರಷ್ಟು ರಸ್ತೆ ದಾಟುವ ಸಂದರ್ಭದಲ್ಲಿ ಸಂಭವಿಸಲಿದೆ. ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸುವಾಗ ಜವಾಬ್ದಾರಿ ಹಾಗೂ ಎಚ್ಚರಿಕೆ ವಹಿಸಿದ್ದಲ್ಲಿ ಅಪಘಾತವನ್ನು ತಪ್ಪಿಸಬಹುದಾಗಿದೆ.

  KSRTC to host street play create awareness

  ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು, ರಾಷ್ಟ್ರೀಯ ಹೆದ್ದಾರಿ, ನಗರ ಮತ್ತು ಗ್ರಾಮಗಳ ಮಿತಿಯಲ್ಲಿ ರಸ್ತೆಗಳನ್ನು ದಾಟುವಾಗ ಜಾಗೃತಿ ವಹಿಸಿದ್ದಲ್ಲಿ ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಈ ಸಂಬಂಧ ನಿಗಮ ವ್ಯಾಪ್ತಿಯ ಮೈಸೂರು, ರಾಮನಗರ, ತುಮಕೂರು, ದಾವಣಗೆರೆ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 'ಇದ್ಯಾವ ಸಾಯೋ ಆಟ' ಎಂಬ ಹೆಸರಿನ ಬೀದಿ ನಾಟಕವನ್ನು ಮೆ. ಸಾರಥಿ ಜಲಕ್ ಮಾಧ್ಯಮ ಸಂಸ್ಥೆಯ ಅವರ ಸಹಯೋಗದೊಂದಿಗೆ ಪ್ರದರ್ಶಿಸಿ, ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಿಗಮ ಮುಂದಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಬೆಂಗಳೂರು ಸುದ್ದಿಗಳುView All

  English summary
  KSRTC is hosting street plays to curb accidents in various divisions in the state in collaboration with NGO's.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more