ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್‌ಆರ್‌ಟಿಸಿಯ ಡಬಲ್ ಡೆಕ್ಕರ್ ಬಸ್ ರಸ್ತೆಗಿಳಿಯುವುದು ಯಾವಾಗ?

|
Google Oneindia Kannada News

ಬೆಂಗಳೂರು, ಜನವರಿ 16: ಕೆಎಸ್‌ಆರ್‌ಟಿಸಿ ಡಬಲ್ ಡೆಕ್ಕರ್ ಬಸ್‌ ಯೋಜನೆ ಕನಸಾಗಿಯೇ ಉಳಿಯುವ ಸಾಧ್ಯತೆ ಹೆಚ್ಚಿದೆ. ಡಬಲ್ ಡೆಕ್ಕರ್ ಬಸ್ ತಯಾರಿಸಲು ಯಾವ ಕಂಪನಿಯೂ ಮುಂದೆ ಬಾರದೇ ಇರುವುದೇ ಇದಕ್ಕೆ ಕಾರಣವಾಗಿದೆ.

ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ

ಕೆಎಸ್‌ಆರ್‌ಟಿಸಿಯು ಒಟ್ಟು 6 ಡಬಲ್ ಡೆಕ್ಕರ್ ಬಸ್‌ಗಳನ್ನು ಕಾಯಾಚರಣೆ ಮಾಡಲು ನಿರ್ಧರಿಸಿತ್ತು. ಬಸ್ ತಯಾರಿಸುವ ವೋಲ್ವೊ, ಲೈಲ್ಯಾಂಡ್, ಐಷರ್, ಟಾಟಾ ಸೇರಿದಂತೆ ಇತರೆ ಕಂಪನಿಗಳೊಂದಿಗೆ ಮಾತುಕತೆಯೂ ನಡೆದಿತ್ತು.ಆದರೆ ಯಾವ ಕಂಪನಿಗಳು ಡಬ್ಬಲ್ ಡೆಕ್ಕರ್ ಬಸ್ ತಯಾರಿಕೆಗೆ ಆಸಕ್ತಿ ತೋರಿಲ್ಲ ಎನ್ನುವುದು ತಿಳಿದುಬಂದಿದೆ.

KSRTC puts break on Double-decker plans

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲವು ದೇಶದ ಆಯ್ದ 70 ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆಗೆ ಉತ್ಸುಕವಾಗಿತ್ತು. ಸಾರ್ವಜನಿಕ ಸಾರಿಗೆ ಪ್ರೋತ್ಸಾಹಿಸುವ ವಾಹನಗಳ ಸಂಚಾರ ದಟ್ಟಣೆ ತಗ್ಗಿಸುವ ಹಾಗೂ ಪ್ರಯಾಣಿಕರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವುದು ಈ ಡಬಲ್ ಡೆಕ್ಕರ್ ಬಸ್ ಯೋಜನೆಯ ಉದ್ದೇಶವಾಗಿತ್ತು.

ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ

KSRTC puts break on Double-decker plans

ಕೆಎಸ್‌ಆರ್‌ಸಿಯ ಈ ಬಸ್‌ಗಳನ್ನು ಐದು ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಬೆಂಗಲೂರು-ಮಂಗಳೂರು, ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್, ಬೆಂಗಳೂರು-ಚೆನ್ನೈ ಹಾಗೂ ಬೆಂಗಳೂರು ಹುಬ್ಬಳ್ಳಿ ಮಾರ್ಗ ಗುರುತಿಸಲಾಗಿತ್ತು. ಈ ಮಾದರಿಯ ಬಸ್‌ಗಳ ದರ ಕೂಡ ದುಬಾರಿಯಾಗುತ್ತದೆ, ಏಕಾಏಕಿ ದೊಡ್ಡ ಸಂಖ್ಯೆಯ ಬಸ್‌ಗಳನ್ನು ಖರೀದಿಸುವುದು ಕಷ್ಟವಾಗುತ್ತದೆ ಎನ್ನುವ ಮಾತು ಕೂಡ ಕೇಳಿಬಂದಿದೆ.

English summary
A year after Centre's push, KSRTC's move to try double-decker buses has come to a nought as bus manufacturers are reluctant to take up this project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X