ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಲಹಳ್ಳಿ ಕ್ರಾಸ್‌ನಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲುಗಡೆ ಇಲ್ಲ?

By Gururaj
|
Google Oneindia Kannada News

ಬೆಂಗಳೂರು, ಜೂನ್ 25 : ಕೆಎಸ್ಆರ್‌ಟಿಸಿ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಜನರನ್ನು ಸೆಳೆಯಲು ಮುಂದಾಗಿದೆ. ಸರ್ಕಾರಿ ಬಸ್ಸುಗಳು ಇನ್ನು ಮುಂದೆ ಜಾಲಹಳ್ಳಿ ಕ್ರಾಸ್‌ನಲ್ಲಿ ನಿಲುಗಡೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಏಪ್ರಿಲ್‌ನಿಂದ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಪುನಃ ಆರಂಭಿಸಲಾಗಿದೆ. ತುಮಕೂರು ರಸ್ತೆಯಲ್ಲಿ ಸಾಗುವ ಎಲ್ಲಾ ಬಸ್ಸುಗಳು ಪೀಣ್ಯದ ನಿಲ್ದಾಣಕ್ಕೆ ಹೋಗಿಯೇ ಮುಂದೆ ಸಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

 ಬಸವೇಶ್ವರ ಬಸ್ ನಿಲ್ದಾಣಕ್ಕೆ 60 ಬಸ್ ವರ್ಗಾಯಿಸಿದ ಕೆಎಸ್ಆರ್‌ಟಿಸಿ ಬಸವೇಶ್ವರ ಬಸ್ ನಿಲ್ದಾಣಕ್ಕೆ 60 ಬಸ್ ವರ್ಗಾಯಿಸಿದ ಕೆಎಸ್ಆರ್‌ಟಿಸಿ

ನಿಲ್ದಾಣಕ್ಕೆ ಜನರನ್ನು ಸೆಳೆಯುವ ಭಾಗವಾಗಿ ಜಾಲಹಳ್ಳಿ ಕ್ರಾಸ್‌ನಲ್ಲಿ ಕೆಎಸ್ಆರ್‌ಟಿಸಿ ಬಸ್ಸುಗಳ ನಿಲುಗಡೆಯನ್ನು ಸ್ಥಗಿತಗೊಳಿಸಲು ಚಿಂತನೆ ನಡೆಸಿದೆ. ಆದರೆ, ಸಂಸ್ಥೆಯ ಅಧಿಕಾರಿಗಳು ಈ ಕುರಿತು ಅಧಿಕೃತವಾದ ಮಾಹಿತಿ ನೀಡಿಲ್ಲ.

KSRTC may cancel Jalahalli Cross busstop

ಜಾಲಹಳ್ಳಿ ಕ್ರಾಸ್‌ ನಿಲ್ದಾಣದಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಆದ್ದರಿಂದ, ಬಸ್ ಚಾಲಕರು ಸಹ ಅಲ್ಲಿ ಬಸ್ ನಿಲುಗಡೆ ಸ್ಥಗಿತಗೊಳಿಸುವುದು ಉತ್ತಮ ಎಂಬ ಸಲಹೆ ನೀಡಿದ್ದಾರೆ. ಜಾಲಹಳ್ಳಿಯಲ್ಲಿ ಬಸ್ಸಿಗಾಗಿ ಕಾಯುವವರು ಬಸವೇಶ್ವರ ಬಸ್ ನಿಲ್ದಾಣಕ್ಕೆ ತೆರಳಬಹುದಾಗಿದೆ.

 ಪೀಣ್ಯಕ್ಕೆ ಬಸ್ ಶಿಫ್ಟ್: ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಪೀಣ್ಯಕ್ಕೆ ಬಸ್ ಶಿಫ್ಟ್: ಮೊದಲ ದಿನವೇ ಪ್ರಯಾಣಿಕರಿಂದ ಉತ್ತಮ ಸ್ಪಂದನೆ

ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣಕ್ಕೆ ಎಲ್ಲಾ ಬಸ್ಸುಗಳು ತೆರಳಲು ಆರಂಭವಾದ ಮೇಲೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಎಂಟಿಸಿ ಸಹ ಪೀಣ್ಯ ನಿಲ್ದಾಣಕ್ಕೆ ಹೆಚ್ಚಿನ ಬಸ್ಸುಗಳನ್ನು ಓಡಿಸುತ್ತಿದ್ದು, ಜನರಿಗೆ ನಿಲ್ದಾಣ ತಲುಪಲು ನೆರವಾಗುತ್ತಿದೆ.

2014ರ ಸೆಪ್ಟೆಂಬರ್ 10ರಂದು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣವನ್ನು ಉದ್ಘಾಟಿಸಲಾಗಿತ್ತು. ಬಳಿಕ 2015ರ ಫೆ.28ರಂದು ನಷ್ಟದ ನೆಪ ಹೇಳಿ ನಿಲ್ದಾಣವನ್ನು ಪುನಃ ಮೆಜೆಸ್ಟಿಕ್‌ಗೆ ಸ್ಥಳಾಂತರ ಮಾಡಲಾಗಿತ್ತು. ಈಗ ಪುನಃ ಬಸವೇಶ್ವರ ಬಸ್ ನಿಲ್ದಾಣದಕ್ಕೆ ಹಲವು ಬಸ್ಸುಗಳನ್ನು ಸ್ಥಳಾಂತರ ಮಾಡಲಾಗಿದ್ದು, ನಿಲ್ದಾಣಕ್ಕೆ ಜೀವಕಳೆ ಬಂದಿದೆ.

English summary
Karnataka State Road Transport Corporation (KSRTC) considering cancelling the stop at Jalahalli Cross on Tumkuru Road to attract passengers into the Basaveshwara bus terminal, Peenya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X