ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 27 : ಕೆಎಸ್ಆರ್‌ಟಿಸಿ ಬೆಂಗಳೂರು ವಿಮಾನ ನಿಲ್ದಾಣ-ತಿರುಪತಿ ನಡುವೆ ಫ್ಲೈ ಬಸ್ ಸೇವೆಯನ್ನು ಆರಂಭಿಸಿದೆ. ಈ ಮಾರ್ಗದಲ್ಲಿ ಸಾಗುವ ಬಸ್‌ಗಳಿಗೆ 800 ರೂ. ಪ್ರಯಾಣ ದರ ನಿಗದಿ ಮಾಡಲಾಗಿದೆ.

ಸೋಮವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫ್ಲೈ ಬಸ್ ಸೇವೆಗೆ ಚಾಲನೆ ನೀಡಿದರು. ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್‌ಗೆ ಆಗಮಿಸದೇ ಬಸ್ ನೇರವಾಗಿ ತಿರುಪತಿಗೆ ತೆರಳಲಿದೆ.

ಸೇಲಂ, ಮಡಿಕೇರಿಗೆ ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ಆರಂಭಸೇಲಂ, ಮಡಿಕೇರಿಗೆ ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ಆರಂಭ

KSRTC fly bus service to Bengaluru airport to Tirupati

ಪ್ರತಿದಿನ ಬೆಳಗ್ಗೆ 10 ಗಂಟೆಗೆ ಫ್ಲೈ ಬಸ್ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದೆ. ತಿರುಪತಿಯಿಂದ ಬೆಳಗ್ಗೆ 11 ಗಂಟೆ ಮತ್ತು ರಾತ್ರಿ 9 ಗಂಟೆಗೆ ಹೊರಡಲಿದೆ.

ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿ

2013ರಲ್ಲಿ ಕೆಎಸ್ಆರ್‌ಟಿಸಿ ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿಗೆ ಮೊದಲ ಬಾರಿಗೆ ಫ್ಲೈ ಬಸ್ ಸೇವೆ ಆರಂಭಿಸಿತ್ತು. ಈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಮೈಸೂರಿಗೆ ಎರಡು ಬಸ್‌ಗಳು ಸಂಚಾರ ನಡೆಸುತ್ತಿವೆ.

ಫ್ಲೈ ಬಸ್ ಸೇವೆಗೆ ಸಿಕ್ಕ ಪ್ರತಿಕ್ರಿಯೆ ನೋಡಿದ ಕೆಎಸ್ಆರ್‌ಟಿಸಿ ವಿವಿಧ ನಗರಗಳಿಗೆ ಬಸ್ ಸೇವೆಯನ್ನು ಆರಂಭಿಸಿತು. ಮಡಿಕೇರಿ, ಮಂಗಳೂರು, ಕಲ್ಲಿಕೋಟೆ, ಸೇಲಂ ಮುಂತಾದ ನಗರಗಳಿಗೆ ಫ್ಲೈ ಬಸ್ ಸೇವೆಯನ್ನು ಈಗ ನೀಡಲಾಗುತ್ತಿದೆ.

English summary
The Karnataka State Road Transport Corporation (KSRTC) on August 27, 2018 began fly bus service from Kempegowda International Airport to Tirupati. 800 Rs fare fixed in the route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X