ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿ ಬಸ್ ಕದಿಯುತ್ತಿದ್ದ ಕೆಎಸ್ಆರ್ ಟಿಸಿ ಚಾಲಕ ಸೆರೆ

|
Google Oneindia Kannada News

ಬೆಂಗಳೂರು, ಜೂ. 27 : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸುಗಳಿಗೆ ರಕ್ಷಣೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕೆಎಸ್ಆರ್ ಟಿಸಿ ಬಸ್ ಚಾಲಕನೊಬ್ಬ ಶುಕ್ರವಾರ ಮುಂಜಾನೆ ಬಿಎಂಟಿಸಿ ಬಸ್ ಕದಿಯಲು ಪ್ರಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಶುಕ್ರವಾರ ಮುಂಜಾನೆ 1.30ರ ಸುಮಾರಿಗೆ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಬಿಎಂಟಿಸಿ ಬಸ್ ಕದಿಯಲು ಯತ್ನಿಸಿ ಸಿಕ್ಕಿಬಿದ್ದವರನ್ನು ಆನೇಕಲ್ ಕೆಎಸ್ಆರ್ ಟಿಸಿ ಬಸ್ ಡಿಪೋದ ಚಾಲಕ ಮಾರುತಿ ಎಂದು ಗುರುತಿಸಲಾಗಿದೆ. ಗುಲ್ಬರ್ಗ ಮೂಲದವರಾದ ಮಾರುತಿ ಕೇವಲ ಆರು ತಿಂಗಳ ಹಿಂದೆ ಕೆಎಸ್ಆರ್ ಟಿಸಿಗೆ ಚಾಲಕರಾಗಿ ಸೇರ್ಪಡೆಗೊಂಡಿದ್ದರು.

BMTC

ಉಪ್ಪಾರಪೇಟೆ ಪೊಲೀಸರು ಮಾರುತಿಯನ್ನು ಬಂಧಿಸಿದ್ದು, ಬಿಎಂಟಿಸಿ ಬಸ್ ಕಳುವು ಮಾಡಿ ಅದರ ಬಿಡಿಭಾಗಗಳನ್ನು ಮಾರಾಟ ಮಾಡಲು ಅವರು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಿಎಂಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರ ಸಮಯ ಪ್ರಜ್ಞೆಯಿಂದಾಗಿ ಬಿಎಂಟಿಸಿ ಬಸ್ ಕಳುವಾಗುವುದು ತಪ್ಪಿದೆ. [ಬೆಂಗಳೂರಲ್ಲಿ ಕದ್ದ ಬಿಎಂಟಿಸಿ ಬಸ್ ಆಂಧ್ರದಲ್ಲಿ ಸಿಕ್ತು]

ಆಗಿದ್ದೇನು : ಶುಕ್ರವಾರ ಮುಂಜಾನೆ 1.30ರ ಸುಮಾರಿಗೆ ಆರೋಪಿ ಮಾರುತಿ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅಲ್ಲಿ ನಿಂತಿದ್ದ ಬಸ್ಸಿಗೆ ಚಾಲಕನ ಸ್ಥಳದಿಂದ ಪ್ರವೇಶಿಸಿದ ಅವರು, ಬಸ್ಸನ್ನು ಆನ್ ಮಾಡಿದ್ದಾರೆ. ಕತ್ತಲಿನಲ್ಲಿ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಅದರಲ್ಲಿ ಮಲಗಿರುವುದನ್ನು ಅವರು ಗಮನಿಸಿಲ್ಲ.

ಇದ್ದಕ್ಕಿದ್ದಂತೆ ಬಸ್ ಶಬ್ದ ಕೇಳಿ ಎದ್ದ ಬಿಎಂಟಿಸಿ ಚಾಲಕ ಮಂಜುನಾಥ್ ಮತ್ತು ನಿರ್ವಾಹಕ ಅಂಬರೀಶ್ ಮಾರುತಿಯನ್ನು ಹಿಡಿದಿದ್ದಾರೆ. ಆಗ ಅವರು ಬಿಎಂಟಿಸಿ ಬಸ್ ಕಳವು ಮಾಡಲು ಬಂದಿದ್ದೆ ಎಂದು ಒಪ್ಪಿಕೊಂಡಿದ್ದಾರೆ. ತಕ್ಷಣ ಅವರನ್ನು ಉಪ್ಪಾರಪೇಟೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ತಿಂಗಳಿನಲ್ಲಿ ಎರಡನೇ ಪ್ರಕರಣ : ಕೆಲವು ದಿನಗಳ ಹಿಂದೆ ಅಂದರೆ ಜೂ.15ರ ಭಾನುವಾರ ರಾತ್ರಿ 10.30ರ ಸುಮಾರಿಗೆ ಜಿ- 7 ಮಾರ್ಗ ಸಂಖ್ಯೆಯ ಬಿಎಂಟಿಸಿ ಬಸ್ಸನ್ನು ಕಳ್ಳರು ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕದ್ದೊಯ್ದಿದ್ದರು. ಸೋಮವಾರ ಸಂಜೆಯವೇಳೆಗೆ ಬಸ್ ಆಂಧ್ರಪ್ರದೇಶದ ಕರ್ನೂಲಿನಿಂದ 15 ಕಿ.ಮೀ ದೂರದಲ್ಲಿ ಪತ್ತೆಯಾಗಿತ್ತು. ಶುಕ್ರವಾರ ನಡೆದಿರುವುದು ಈ ತಿಂಗಳಿನಲ್ಲಿ ಎರಡನೇ ಪ್ರಕರಣವಾಗಿದೆ.

English summary
Bangalore Upparpet police on Friday early morning arrested a 41-year-old KSRTC bus driver Maruthi for attempting to steal a Bangalore Metropolitan Transport Corporation (BMTC) bus parked at Majestic bus station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X